ನಗರದೆಲ್ಲಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

| Published : Jun 22 2025, 01:18 AM IST

ನಗರದೆಲ್ಲಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶನಿವಾರ ನಗರದೆಲ್ಲೆಡೆ ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘ, ಸಂಸ್ಥೆ, ಕಾಲೇಜು ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶನಿವಾರ ನಗರದೆಲ್ಲೆಡೆ ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘ, ಸಂಸ್ಥೆ, ಕಾಲೇಜು ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.

ಜಿಲ್ಲಾ ಆಯುಷ್ ಇಲಾಖೆ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ 11 ನೇ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸ್ಥಳೀಯ ವಿವಿಧ ಯೋಗ ಸಂಸ್ಥೆಗಳ ಯೋಗಪಟುಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಏಕಕಾಲದಲ್ಲಿ ಯೋಗ ಪ್ರದರ್ಶನ ನಡೆಸಿದರು.

ಕಾರ್ಯಕ್ರಮದಲ್ಲಿ ಬಾಪೂಜಿ ಆಯುರ್ವೇದಿಕ್ ಕಾಲೇಜಿನ ವಿದ್ಯಾರ್ಥಿನಿಯರು ಯೋಗ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಣೆ ಮಾಡಿದರು.

ಪೋದಾರ್ ಇಂಟರ್ ನ್ಯಾಷನಲ್ ಶಾಲೆ:

ಒಡ್ಡಿನ ಕೊಪ್ಪದಲ್ಲಿ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಧ್ಯಾನ ಮತ್ತು ದೈಹಿಕ ಮಾನಸಿಕ ಕ್ಷೇಮವನ್ನು ಹೆಚ್ಚಿಸಲು ಶಾಲೆಯ ಶಿಕ್ಷಕರು ಮತ್ತು 10ನೇ ತರಗತಿಯವರೆಗಿನ ಎಲ್ಲ ಮಕ್ಕಳು ಮೈದಾನದಲ್ಲಿ ಒಟ್ಟುಗೂಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಲತಾ ಶಂಕರ್ ದೈಹಿಕ ಶಿಕ್ಷಕಿ ಹಾಗೂ ಯೋಗಾ ತರಬೇತುದಾರರು ಭಾಗವಹಿಸಿದ್ದ ಎಲ್ಲಾ ಶಿಕ್ಷಕರಿಗೂ ಮತ್ತು ಮಕ್ಕಳಿಗೂ ಮಾರ್ಗದರ್ಶನ ನೀಡಿದರು.

ವಿವಿಧ ಯೋಗ ಭಂಗಿಗಳು ಮತ್ತು ಧ್ಯಾನ ಅಭ್ಯಾಸಗಳನ್ನು ಪ್ರದರ್ಶಿಸುವುದರ ಜೊತೆಗೆ ಆರೋಗ್ಯಕರ ಜೀವನ ಶೈಲಿಗೆ ಮತ್ತು ಒತ್ತಡವನ್ನು ಕಡಿಮೆ ಮಾಡುವಲ್ಲಿ ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸುಕೇಶ್ ಸೇರಿಗಾರ ಮತ್ತು ಉಪ ಪ್ರಾಂಶುಪಾಲೆ ಶ್ರೀಮತಿ ಉಮಾಮಹೇಶ್ವರಿಯವರು ಉಪಸ್ಥಿತರಿದ್ದರು.

ಸಹ್ಯಾದ್ರಿ ವಿಜ್ಞಾನ ಕಾಲೇಜು:

ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಯೋಗ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ.ಹಾ.ಮ. ನಾಗಾರ್ಜುನ ಮಾತನಾಡಿ, ಜೂ. 21 ಇಡೀ ದಿನದ ಬೆಳಗು ದೀರ್ಘವಾಗಿಯೂ ಉನ್ನತವಾಗಿಯೂ ಇದ್ದು, ಈ ದಿನವನ್ನು ಅಂತಾರಾಷ್ಷ್ರೀಯ ಮಟ್ಟದಲ್ಲಿ "ಯೋಗ ದಿನಾಚರಣೆ "ಯಾಗಿ ಪ್ರಾಯೋಗಿಕವಾಗಿ ಆಚರಿಸುತ್ತಾರೆ, ಇಡೀ ವರ್ಷದ ವರ್ಷಧಾರೆಯ ಆರಂಭವು ಅಗಿರುವುದರಿಂದ ಮಂದಸ್ಮಿತ ಮೋಡಗಳ ತಂಪಾದ ವಾತಾವರಣದಲ್ಲಿ ಯೋಗವನ್ನು ಆಚರಣೆ ಮಾಡುವುದೇ ಒಂದು ಸುಯೋಗ ಎಂದರು.

ಆಯುಷ್ಯವನ್ ಪ್ರಯೋಗ ತರಭೇತಿಯ ಯೋಗ ಗುರುವಾಗಿ ವಿವಿಧ ಆಸನಗಳನ್ನು ಹೇಳಿಕೊಡುವ ಮೂಲಕ ಆಸನಗಳ ಮಹತ್ವವನ್ನು ಪ್ರಾಯೋಗಿಕವಾಗಿ ಡಾ ನಾಗರಾಜ ಪರಿಸರ ಅವರು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎನ್‌.ರಾಜೇಶ್ವರಿ ವಹಿಸಿದ್ದರು. ಎನ್ ಸಿ ಸಿ, ರೆಡ್‌ಕ್ರಾಸ್, ರೇಂಜರ್ಸ್ ರೋವರ್ಸ್ ಹಾಗೂ ಕ್ರೀಡಾ ವಿಭಾಗದ ಸಂಚಾಲಕ ಡಾ. ಯುವರಾಜ್ ಟಿಸಿಎಂ, ಡಾ. ಶ್ರೀಕಂಠ, ಡಾ. ವಿದ್ಯಾಶಂಕರ, ಡಾ. ಅರುಣಕುಮಾರ, ಡಾ.ವೆಂಕಟೇಶ್, ಡಾ.ಮೋಹನೇಶ, ಡಾ.ಸುಬ್ರಹ್ಮಣ್ಯ, ಡಾ.ಶಾಂತ, ಕಛೇರಿ ಅಧೀಕ್ಷಕರಾದ ರಾಜಶೇಖರ ಹಾಗೂ ಕಾಲೇಜಿನ ಪದವಿ, ಸ್ನಾತಕ ಪದವಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.

ಶುಭಮಂಗಳ ಸಮುದಾಯಭವನ:

ವಿನೋಬನಗರದ ಶುಭಮಂಗಳ ಸಮುದಾಯಭವನದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕಣಾದ ಯೋಗ ಮತ್ತು ರೀಸರ್ಚ್ ಫೌಂಡೇಷನ್, ಸುಮೇರು ಯೋಗ ಕೇಂದ್ರ, ಅಮೃತ ಯೋಗ ಕೇಂದ್ರ ಮತ್ತು ಚಿರಂತನಾ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಟ್ರಸ್ಟ್, ಭಜನಾ ಪರಿಷತ್, ಸಂಸ್ಕಾರ ಪ್ರತಿಷ್ಠಾನ, ಶಿವಮೊಗ್ಗ ಜಿಲ್ಲಾ ಗೃಹರಕ್ಷಕದಳ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದರು.