ಸಾರಾಂಶ
ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸಹಯೋಗದಲ್ಲಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ಉಮಾಮಹೇಶ್ವರ ಸಭಾಭವನದಲ್ಲಿ ಶನಿವಾರ “ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಿವೃತ್ತ ಪ್ರಾಂಶುಪಾಲರಾದ ಮಾರ್ಪಳ್ಳಿ ನಾರಾಯಣ ಭಟ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸಹಯೋಗದಲ್ಲಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ಉಮಾಮಹೇಶ್ವರ ಸಭಾಭವನದಲ್ಲಿ ಶನಿವಾರ “ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಿವೃತ್ತ ಪ್ರಾಂಶುಪಾಲರಾದ ಮಾರ್ಪಳ್ಳಿ ನಾರಾಯಣ ಭಟ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸನಾತನ ಧರ್ಮದಲ್ಲಿ ಯೋಗಕ್ಕೆ ಮಹತ್ವದ ಇದೆ. ಎಲ್ಲಿ ಯೋಗ ಇದೆಯೋ ಅಲ್ಲಿ ಆರೋಗ್ಯ ಇದೆ, ಯೋಗವು ಮನುಷ್ಯನ ಹಲವಾರು ದುಶ್ಚಟಗಳನ್ನು ದೂರ ಇರುವಂತೆ ಮಾಡುತ್ತದೆ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ನಗರ ಠಾಣಾ ಪೊಲೀಸ್ ಅಧಿಕಾರಿ ನಾರಾಯಣ ಬಿ., ನಾದಶ್ರೀ ಕ್ರೆಡಿಟ್ ಕೋ.ಅ. ಸೊಸೈಟಿಯ ಅಧ್ಯಕ್ಷ ಲಚ್ಚೇಂದ್ರ ದೇವಾಡಿಗ ಬೈಲೂರು, ಹಿರಿಯ ಯೋಗ ತರಬೇತಿದಾರ ಸುಂದರ ಜೆ. ಮಟ್ಟಿ ಬೈಲೂರು, ಬಡಗಬೆಟ್ಟು ಕ್ರೆಡಿಟ್ ಕೋ.ಅ.ಸೊಸೈಟಿಯ ನಿವೃತ್ತ ವ್ಯವಸ್ಥಾಪಕ ಶಂಕರ್ ಜಿ. ದೇವಾಡಿಗ, ಹಿರಿಯರಾದ ಎಂ. ಮಧುಸೂದನ್ ಭಟ್ ಉಪಸ್ಥಿತರಿದ್ದರು.ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಂಬಳ ಮನೆ ದಿನೇಶ್ ಶೆಟ್ಟಿ ವಹಿಸಿದ್ದರು. ಸಮಿತಿಯ ಸದಸ್ಯರಾದ ಪಾಂಡುರಂಗ ನಾಯ್ಕ್, ವಿಜಯಲಕ್ಷ್ಮಿ ಎಂ., ಶಂಕರ್ ಆಚಾರ್ಯ, ಚಂದ್ರಾವತಿ, ಅರ್ಚಕ ಅನಂತ ಉಪಾಧ್ಯಾಯ ಉಪಸ್ಥಿತರಿದ್ದರು. ಎಂ ಲಕ್ಷ್ಮೀನಾರಾಯಣ ರಾವ್ ಸ್ವಾಗತಿಸಿ, ಉಮೇಶ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿದರೆ, ಶೇಖರ್ ಸುವರ್ಣ ಮಾರ್ಪಳ್ಳಿ ವಂದಿಸಿದರು. ಯೋಗ ತರಬೇತಿ ನೀಡಿದ ಶೈಲ ಒಳಕಾಡು ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.;Resize=(128,128))
;Resize=(128,128))
;Resize=(128,128))