ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿಕಳ್ಳತನ ಪ್ರಕರಣ ಸಂಬಂಧ ಮಾಳಮಾರುತಿ ಪೊಲೀಸರು ಅಂತಾರಾಜ್ಯ ಕಳ್ಳನನ್ನು ಬಂಧಿಸಿದ್ದು, ಆತನಿಂದ ₹20 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ಗ್ರಾಮದ ಹಾಲಿ ಸೊಲ್ಲಾಪುರದ ನಾಗರಾಜ ಸುಭಾಷ ಕಚೇರಿ (39) ಬಂಧಿತ ಆರೋಪಿ. ಮಹಾಂತೇಶ ನಗರ, ಆಂಜನೇಯ ನಗರ ಮತ್ತು ಶಿವಬಸವ ನಗರಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಈತ ಭಾಗಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಳ್ಳತನ ಪ್ರಕರಣ ಸಂಬಂಧ ಮಾಳಮಾರುತಿ ಪೊಲೀಸರು ಅಂತಾರಾಜ್ಯ ಕಳ್ಳನನ್ನು ಬಂಧಿಸಿದ್ದು, ಆತನಿಂದ ₹20 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ಗ್ರಾಮದ ಹಾಲಿ ಸೊಲ್ಲಾಪುರದ ನಾಗರಾಜ ಸುಭಾಷ ಕಚೇರಿ (39) ಬಂಧಿತ ಆರೋಪಿ. ಮಹಾಂತೇಶ ನಗರ, ಆಂಜನೇಯ ನಗರ ಮತ್ತು ಶಿವಬಸವ ನಗರಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಈತ ಭಾಗಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಈತ ತನ್ನ ಗೆಳೆಯರೊಂದಿಗೆ ಸೇರಿ ತನ್ನ ಎಕ್ಸ್‌ಯುವಿ 500 ಐಷಾರಾಮಿ ಕಾರಿನ ಮೇಲೆ ಪ್ರೆಸ್ ಎಂದು ಬರೆಸಿ, ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಆತನಿಂದ ₹ 10 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹10 ಲಕ್ಷ ಮೌಲ್ಯದ ಕಾರು ಒಟ್ಟು ₹20 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈತನೊಂದಿಗೆ ಕಳ್ಳತನ ಕೃತ್ಯದಲ್ಲಿದ್ದ ಪಾಲ್ಗೊಂಡಿದ್ದ ಹುಸೇನ್ ಅಲಿಯಾಸ್ ಸಾಗರ ಗಾಯಕ್ವಾಡ್, ಅಮೂಲ ಸುರವಾಸೆ ಹಾಗೂ ಕೇತ್ಯಾ ಎಂಬುವರು ಪರಾರಿಯಾಗಿದ್ದಾರೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.