ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತಕರಾರು ಸರಿ ಕ್ರಮವಲ್ಲ: ಮಹಿಬೂಬ್ ಬೀ

| Published : Aug 10 2024, 01:40 AM IST

ಸಾರಾಂಶ

ಸಿರವಾರದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕುರಿತು ರೈತರೊಂದಿಗೆ ಸಹಾಯಕ ಆಯುಕ್ತೆ ಮಹಿಬೂಬ್ ಬೀ ನೇತೃತ್ವದಲ್ಲಿ ಸಭೆ ನಡೆಯಿತು.

ಸಿರವಾರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ರೈತರು ತಕರಾರು ಎತ್ತಿರುವುದರಿಂದ ಸರಿಯಾದ ಕ್ರಮವಲ್ಲ, ನಿಮಗೆ ಸಮಸ್ಯೆಗಳಿದ್ದ ಅಧಿಕಾರಿಗಳನ್ನು ಭೇಟಿಯಾಗಿ ಬಗೆಹರಿಸಿಕೊಳ್ಳಬೇಕು ಸಹಾಯಕ ಆಯುಕ್ತೆ ಮಹಿಬೂಬ್ ಬೀ ರೈತರಿಗೆ ಸಲಹೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ರೈತರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಹೆದ್ದಾರಿ ನಿರ್ಮಾಣ ಮಾಡಲು ಭೂ ಸ್ವಾಧೀನ ಮಾಡಿಕೊಂಡು ಈಗಾಗಲೇ ಹೆದ್ದಾರಿ ಕಾಮಗಾರಿ ಪ್ರಾರಂಭಕ್ಕೆ ಅಧಿಕಾರಿಗಳು ಮುಂದಾಗಿರುವಾಗ ಸ್ವಾಧೀನ ಭೂಮಿಯಲ್ಲಿ ರೈತರು ಬೆಳೆ ಬಿತ್ತನೆ ಮಾಡಿದ್ದು ಸರಿಯಾದ ಕ್ರಮವಲ್ಲ. ಜಮೀನು ಕಾಮಗಾರಿಗೆ ರೈತರಿಗೆ ವರ್ಷದ ಹಿಂದೆಯೇ ನೋಟಿಸ್‌ ಕಳುಹಿಸಿದ್ದು, ಎಲ್ಲಾ ರೈತರ ಗಮನಕ್ಕೂ ಇದ್ದು, ಕೂಡಲೇ ರೈತರು ಕಾಮಗಾರಿ ಪ್ರಾರಂಭಕ್ಕೆ ಸಹಕರಿಸಬೇಕು ಎಂದರು.

ತಹಸೀಲ್ದಾರ್ ರವಿ ಎಸ್.ಅಂಗಡಿ, ವಿಶೇಷ ಭೂ ಸ್ವಾಧೀನ ಅಧಿಕಾರಿ ರಾಜಕುಮಾರ, ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಭೀಮಾರಾವ್, ಕಂದಾಯ ಅಧಿಕಾರಿ ಶ್ರೀನಾಥ್ ಸೇರಿ ಅಧಿಕಾರಿಗಳು ಭಾಗವಹಿಸಿದ್ದರು.