ಸಾರಾಂಶ
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೊರುಮ್‌ಪಲ್ಲಿ ನಿವಾಸಿ ಶ್ರೀಶಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನದ ಪ್ರಕರಣ ಪತ್ತೆಯಾಗಿದೆ. ಆರೋಪಿ ಶ್ರೀಶಾಂತ್ ಅಂತರಾಜ್ಯ ಬೈಕ್ ಕಳ್ಳನಾಗಿದ್ದು, ಚಿಂತಾಮಣಿ ನಗರ ಠಾಣೆಯಲ್ಲಿ ೧ ಪ್ರಕರಣ, ಗ್ರಾಮಾಂತರ ಠಾಣೆಯಲ್ಲಿ ೧ ಪ್ರಕರಣ ಹಾಗೂ ಹೈದರಾಬಾದಿನಲ್ಲಿ ಕಳವು ಮಾಡಿರುವ ೨ ವಾಹನಗಳ ಬಗ್ಗೆ ಮಾಹಿತಿ ನೀಡಿದ್ದಾನೆ.
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಅಂತರರಾಜ್ಯ ಬೈಕ್ ಕಳ್ಳನಿಂದ ೮ ಲಕ್ಷ ರು. ಬೆಲೆ ಬಾಳುವ ೨ ರಾಯಲ್ ಎನ್‌ಫಿಲ್ಡ್ ಹಾಗೂ ೨ ಯಮಹಾ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಕಳ್ಳನನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ತಾಲೂಕಿನ ಚಿನ್ನಸಂದ್ರದಲ್ಲಿ ಯಮಹಾ ದ್ವಿಚಕ್ರ ವಾಹನ ಕಳ್ಳತನವಾಗಿದೆಯೆಂದು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದು, ಆರೋಪಿ ಮತ್ತು ವಾಹನವನ್ನು ಪತ್ತೆ ಮಾಡಲು ಚಿಕ್ಕಬಳ್ಳಾಪುರ ಜಿಲ್ಲಾ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಚಿಂತಾಮಣಿ ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ವಿಶೇಷ ಪತ್ತೆದಾರಿ ತಂಡವನ್ನು ರಚಿಸಲಾಗಿತ್ತು. ಗ್ರಾಮಾಂತರ ಮತ್ತು ನಗರ ಠಾಣೆಯಲ್ಲಿ ದಾಖಲಾಗಿರುವ ಕಳ್ಳತನದ ಪ್ರಕರಣಗಳ ಮಾಹಿತಿ ಕಲೆ ಹಾಕಿ ವೈಜ್ಞಾನಿಕವಾಗಿ ತನಿಖೆ ಕೈಗೊಂಡಿದ್ದರು.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೊರುಮ್‌ಪಲ್ಲಿ ನಿವಾಸಿ ಶ್ರೀಶಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನದ ಪ್ರಕರಣ ಪತ್ತೆಯಾಗಿದೆ. ಆರೋಪಿ ಶ್ರೀಶಾಂತ್ ಅಂತರಾಜ್ಯ ಬೈಕ್ ಕಳ್ಳನಾಗಿದ್ದು, ಚಿಂತಾಮಣಿ ನಗರ ಠಾಣೆಯಲ್ಲಿ ೧ ಪ್ರಕರಣ, ಗ್ರಾಮಾಂತರ ಠಾಣೆಯಲ್ಲಿ ೧ ಪ್ರಕರಣ ಹಾಗೂ ಹೈದರಾಬಾದಿನಲ್ಲಿ ಕಳವು ಮಾಡಿರುವ ೨ ವಾಹನಗಳ ಬಗ್ಗೆ ಮಾಹಿತಿ ನೀಡಿದ್ದಾನೆ.ಪತ್ತೆದಾರಿ ತಂಡವು ಒಟ್ಟು ೪ ದ್ವಿಚಕ್ರ ವಾಹನಗಳ ಕಳ್ಳತನದ ಪ್ರಕರಣಗಳನ್ನು ಬೇಧಿಸಿ, ೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಈ ಪತ್ತೆದಾರಿ ತಂಡದಲ್ಲಿ ಗ್ರಾಮಾಂತರ ಇನ್ಸ್‌ಪೆಕ್ಟರ್ ಶಿವರಾಜ್, ನಗರ ಠಾಣೆ ಇನ್ಸ್‌ಪೆಕ್ಟರ್ ವಿಜಿಕುಮಾರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಮಮತಾ, ಪದ್ಮ, ರಮೇಶ್ ಸಿಬ್ಬಂದಿ ವರ್ಗದವರಾದ ಮಂಜುನಾಥ್‌ರೆಡ್ಡಿ, ಸಂದೀಪ್ ಕುಮಾರ್, ನರೇಶ್, ವೆಂಕಟರಮಣ, ಕೃಷ್ಣಮೂರ್ತಿ, ಜಗದೀಶ್, ಲೋಕೇಶ್, ಚಾಲಕ ಶ್ರೀನಿವಾಸ್ ತಾಂತ್ರಿಕ ಸಿಬ್ಬಂದಿ ರವಿಕುಮಾರ್, ಮುನಿಕೃಷ್ಣ ತಂಡದಲ್ಲಿದ್ದರು.