ನಾಣಿಕೇರೆ ಗತವೈಭವ ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮ ಕರ್ತವ್ಯ

| Published : Nov 23 2025, 03:00 AM IST

ಸಾರಾಂಶ

ನಾರಾಯಣದೇವರಕೆರೆಯು 9 ಅಕ್ಷರಗಳನ್ನು ಹೊಂದಿರುವ ಊರಾಗಿದೆ.

ಮರಿಯಮ್ಮನಹಳ್ಳಿ: ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾದ ನಾರಾಯಣದೇವರಕೆರೆಯು ಈ ಹಿಂದೆ ಸಕಲ ಸಮೃದ್ಧಿಯಿಂದ ಮೆರೆದ ಊರಿನ ಗತವೈಭವ ಮತ್ತು ಮಹತ್ವದ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಅವಶ್ಯಕವಾಗಿದೆ ಎಂದು ಹಿರಿಯ ವೈದ್ಯ ಡಾ.ಬಿ. ಅಂಬಣ್ಣ ಹೇಳಿದರು.

ಇಲ್ಲಿನ ಸ.ಮಾ.ಹಿ.ಪ್ರಾ. ಶಾಲೆಯ ಆವರಣದಲ್ಲಿ ನಾಣಿಕೇರಿ ಯುವ ಸೇವಾ ಟ್ರಸ್ಟಿನ 2ನೇ ವರ್ಷದ ಮೂರು ದಿನಗಳ ನಾಣಿಕೇರಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣದೇವರಕೆರೆಯು 9 ಅಕ್ಷರಗಳನ್ನು ಹೊಂದಿರುವ ಊರಾಗಿದೆ. ಈ ಊರು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಾಮಂತರ ಆಳ್ವಿಕೆಯಲ್ಲಿ ಅತ್ಯಂತ ವೈಭವದೊಂದಿಗೆ ಮೆರೆದಿತ್ತು. ಸಾಕಷ್ಟು ಸಮೃದ್ಧಿ ಹೊಂದಿರುವ ಊರು ತುಂಗಭದ್ರಾ ಜಲಾಶಯದ ನಿರ್ಮಾಣದಲ್ಲಿ ಅಲ್ಲಿನ ಜನರು ತಮ್ಮ ಮನೆ, ಆಸ್ತಿ ಎಲ್ಲವನ್ನೂ ಬಿಟ್ಟು ಮರಿಯಮ್ಮನಹಳ್ಳಿ ಸೇರಿದಂತೆ ಇತರೆ ಊರುಗಳಿಗೆ ಅಲ್ಲಿನ ಜನರು ಚದುರಿ ಹೋಗಿದ್ದಾರೆ. ನಾರಾಯಣದೇವರಕೆರೆಯ ಕಲೆ, ಸಂಸ್ಕೃತಿ, ಪರಂಪರೆಯನ್ನು ಮರಿಯಮ್ಮನಹಳ್ಳಿಯ ಜನರು ಮುಂದುವರೆಸಿಕೊಂಡು ಬಂದಿರುವುದರಿಂದ ನಾಣಿಕೇರಿ ಉತ್ಸವದಲ್ಲಿ ಅಂದು ಕಂಡು ಬರುತ್ತಿದೆ ಎಂದರು.

ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ, ಸ್ಥಳೀಯ ಮುಖಂಡ ಎಸ್.ಕೃಷ್ಣ ನಾಯ್ಕ್ ಮಾತನಾಡಿದರು.

ಆರ್ಯ ವೈಶ್ಯ ಸಮಾಜದ‌ ಅಧ್ಯಕ್ಷ ಚಿದ್ರಿ ಸತೀಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಸಭೆಯಲ್ಲಿ ಮಾತನಾಡಿದರು. ನಾಣಿಕೇರಿ ಯುವ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎ.ರೆಹಮಾನ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮಾತಾ ಮಂಜಮ್ಮ ಜೋಗತಿ, ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ, ಜಿಪಂ ಮಾಜಿ ಸದಸ್ಯ ಗೋವಿಂದರ ಪರಶುರಾಮ, ಪಪಂ ಸದಸ್ಯ ಎಸ್.ಮಹಮದ್, ಸ್ಥಳೀಯ ಮುಖಂಡರಾದ ಎಲ್‌.ಪರಮೇಶ್ವರಪ್ಪ, ಗರಗ ಪ್ರಕಾಶ್, ಬಿ.ವಿಜಯಕುಮಾರ್‌, ತಳವಾರ್ ಹುಲುಗಪ್ಪ, ಎನ್.ಎಸ್‌. ಬುಡೇನಸಾಹೇಬ್‌, ವಸ್ತ್ರದ ಶಿವಶಂಕರಯ್ಯ, ಗುಂಡಾಸ್ವಾಮಿ, ರೋಗಾಣಿ ಮಂಜುನಾಥ, ಸಿ.ಡಿ. ಶೇಖಪ್ಪ, ಮಂಜುನಾಥ, ವೆಂಕಟೇಶ್, ಸುರೇಶ್‌, ನಾಗರಾಜ, ಬಸವರಾಜ, ರವಿಕುಮಾರ್, ರಮೇಶ್‌, ರಾಮಣ್ಣ, ರಾಘವೇಂದ್ರ, ವಿಶ್ವನಾಥ, ಹನುಮಂತಪ್ಪ, ರುದ್ರನಾಯ್ಕ ಇದ್ದರು.

ಮಹಾಂತೇಶ್‌ ನೆಲ್ಲುಕುದಿರೆ, ತಂಡದವರು ಪ್ರಾರ್ಥಿಸಿದರು. ಪಿ.ರಾಮಚಂದ್ರ ಸ್ವಾಗತಿಸಿದರು. ಆಕಾಶ್‌ ಪೂಜಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ವಂದಿಸಿದರು. ಬಿ.ಪರಶುರಾಮ ನಿರೂಪಿಸಿದರು.

ನಂತರ ಸ್ಥಳೀಯ ಕಲಾವಿದರಿಂದ ಮತ್ತು ಖಾಸಿಂ ಈವೆಂಟ್ಸ್ ನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.