ಜಾಮಿಯ ಮಸೀದಿ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸಿ: ಹೊನ್ನಾಳಿ ಮುಸ್ಲಿಂ ಮುಖಂಡರು

| Published : Jan 24 2025, 12:47 AM IST

ಸಾರಾಂಶ

ತಾಲೂಕಿನ ಸಾಸ್ವೇಹಳ್ಳಿ ಗ್ರಾಮದ ಜಾಮಿಯ ಮಸೀದಿಯಲ್ಲಿ ಹಲವಾರು ಭ್ರಷ್ಟಾಚಾಗಳು ನಡೆದಿದೆ. ಈ ಬಗೆ ವಕ್ಫ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಏನು ಪ್ರಯೋಜನವಾಗಿಲ್ಲ, ಕೂಡಲೇ ಜಾಮಿಯ ಮಸೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು

ತಹಸೀಲ್ದಾರ್ ಪಟ್ಟರಾಜಗೌಡಗೆ ಮನವಿ ಸಲ್ಲಿಕೆ । ಸೂಕ್ತ ತನಿಖೆಗೆ ಒತ್ತಾಯ

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಸಾಸ್ವೇಹಳ್ಳಿ ಗ್ರಾಮದ ಜಾಮಿಯ ಮಸೀದಿಯಲ್ಲಿ ಹಲವಾರು ಭ್ರಷ್ಟಾಚಾಗಳು ನಡೆದಿದೆ. ಈ ಬಗೆ ವಕ್ಫ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಏನು ಪ್ರಯೋಜನವಾಗಿಲ್ಲ, ಕೂಡಲೇ ಜಾಮಿಯ ಮಸೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಗ್ರಾಮದ ಕೆಲವು ಮುಸ್ಲಿಂ ಮುಖಂಡರು ತಹಸೀಲ್ದಾರ್ ಪಟ್ಟರಾಜಗೌಡ ಅವರಿಗೆ ಮನವಿ ಸಲ್ಲಿಸಿದರು.

ಜಾಮಿಯ ಮಸೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ, ಕೂಡಲೇ ಸಮಗ್ರ ತನಿಖೆ ನಡೆಸಿ ಲೆಕ್ಕಪತ್ರ ನೀಡುವಂತೆ ವಕ್ಫ್ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ, ನಮಗೆ ಈಗಲಾದರೂ ನ್ಯಾಯ ದೊರಕಿಸಿಕೊಡಿ ಎಂದು ಅವರು ತಹಸೀಲ್ದಾರ್‌ ಅವರಿಗೆ ಮನವಿ ಮಾಡಿದರು.

ಇದಕ್ಕೂ ಮುನ್ನ ಜಾಮಿಯ ಮಸೀದಿಯ ಆಡಳಿತ ಮಂಡಳಿಯವರಿಗೂ ಮನವಿ ಮಾಡಿ ನಮಗೆ ಲೆಕ್ಕಪತ್ರ ನೀಡಿ ಎಂದು ಕೇಳಿದ್ದೆವು. ಆಗಲೂ ಸಹ ಆಡಳಿತ ಮಂಡಳಿಯವರು ನಮ್ಮ ಮನವಿಗೆ ಸೊಪ್ಪು ಹಾಕಲಿಲ್ಲ ಎಂದು ದೂರಿದರು.

ಈ ವಿಚಾರವಾಗಿ ನಾವು ವಕ್ಫ್,ಹೊನ್ನಾಳಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ, ಪತ್ರ ವ್ಯವಹಾರ ಮಾಡಿ ಆಡಿಟ್ ಮಾಡಿಸಿಲ್ಲ, ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಮಾಡಿ ಹಣ ದುರುಪಯೋಗ ಆಗಿದೆ, 30 ದಿನಗಳ ಒಳಗೆ ಎಲ್ಲಾ ದಾಖಲಾತಿಗಳನ್ನು ಹಸ್ತಾಂತರಿಸುವಂತೆ ಸೂಚಿಸಿದ್ದರೂ ಸಹ ಇಲ್ಲಿಯವರೆಗೂ ದಾಖಲೆಗಳನ್ನು ಆಡಳಿತಾಧಿಕಾರಿಗಳಿಗೆ ನೀಡಿಲ್ಲ ಎಂದು ಆರೋಪಿಸಿದರು.

ವಕ್ಫ್ ಕಾಯ್ದೆ 1995 (ತಿದ್ದುಪಡಿ ಕಾಯ್ದೆ 2013) ನಿಯಮ 68 (2) ರಡಿಯಲ್ಲಿ ತಿಳುವಳಿಕೆ ಪತ್ರ ನೀಡಿದ್ದರೂ ಸಹ ನೀವು ಸರ್ಕಾರದ ನಿಯಮ ಉಲ್ಲಂಘಿರುವುದರಿಂದ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಹೊನ್ನಾಳಿ ಉಪ ವಿಭಾಧಿಕಾರಿ ಅವರು ಮಸೀದಿಯವರಿಗೆ ನೋಟಿಸ್ ಜಾರಿ ಮಾಡಿದ್ದರೂ ಕೂಡ ಇನ್ನೂ ಲೆಕ್ಕಪತ್ರ ನೀಡಿಲ್ಲ ಎಂದು ವಿವರಿಸಿದರು. ಈಗಲಾದರೂ ಸರ್ಕಾರದಿಂದ ನಮಗೆ ನ್ಯಾಯ ಸಿಗಬೇಕು, ಇಲ್ಲದಿದ್ದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಅಬುಸಾಲೇಹ, ವಜೀರ್ ಸಾಬ್, ಅಮ್ಜದ್ ಆಲಿಖಾನ್, ಸಮೀಉಲ್ಲ, ಜಾಫರ್, ಮಹಮದ್ ಹನೀಫ್, ಮೆಹಬುಬ್ ಆಲಿಖಾನ್, ನಸರುಲ್ಲ, ಮಹಮದ್ ನಸರುಲ್ಲ, ಇತರರು ಇದ್ದರು. ಹೊನ್ನಾಳಿ ಫೋಟೋ 22ಎಚ್.ಎಲ್.ಐ1.

ಹೊನ್ನಾಳಿ ಸಾಸ್ವೇಹಳ್ಳಿಯ ಜಾಮಿಯ ಮಸೀದಿ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಆಗ್ರಹಿಸಿ ಸಾಸ್ವೇಹಳ್ಳಿ ಗ್ರಾಮದ ಕೆಲವು ಮುಸ್ಲಿಂ ಮುಖಂಡರು ತಹಸೀಲ್ದಾರ್ ಪಟ್ಟರಾಜಗೌಡಗೆ ಮನವಿ ಸಲ್ಲಿಸಿದರು.