ಸಾರಾಂಶ
ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಜುಲೈ 28ರಂದು ಹಮ್ಮಿಕೊಂಡಿರುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪ್ರೊ.ಶಿವಲಿಂಗಪ್ಪ ಬಾವಿಕಟ್ಟಿ ಅವರ ಮನೆಗೆ ಭೇಟಿ ನೀಡಿದ ತಾಲೂಕು ಕಸಾಪದ ಅಧ್ಯಕ್ಷೆ ಭಾರತಿ ಮದಬಾವಿ ಅಧಿಕೃತ ಆಹ್ವಾನ ನೀಡಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಜುಲೈ 28ರಂದು ಹಮ್ಮಿಕೊಂಡಿರುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪ್ರೊ.ಶಿವಲಿಂಗಪ್ಪ ಬಾವಿಕಟ್ಟಿ ಅವರ ಮನೆಗೆ ಭೇಟಿ ನೀಡಿದ ತಾಲೂಕು ಕಸಾಪದ ಅಧ್ಯಕ್ಷೆ ಭಾರತಿ ಮದಬಾವಿ ಅಧಿಕೃತ ಆಹ್ವಾನ ನೀಡಿದರು.ಪ್ರೊ.ಶಿವಲಿಂಗಪ್ಪ ಬಾವಿಕಟ್ಟಿಯವರು ಸಮ್ಮೇಳನಕ್ಕೆ ನಡೆದಿರುವ ಸಿದ್ಧತೆಗಳ ಬಗ್ಗೆ ಮೆಚ್ಚುಗೆ ಸೂಚಿಸಿ ಈ ಸಮ್ಮೇಳನ ಚಾರಿತ್ರಿಕವಾಗಿ ಮೂಡಿ ಬಂದು ಪರಂಪರೆ ರೂಪಿಸುವಲ್ಲಿ ತಮಗೆ ಯಾವ ಸಂದೇಹವೂ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರೊ.ಚಂದ್ರಶೆಖರ ಅಕ್ಕಿ, ಮಹಾಂತೇಶ ತಾಂವಶಿ, ಡಾ.ಮಹಾನಂದಾ ಪಾಟೀಲ, ಸುರೇಶ ಮುದ್ದಾರ, ಈಶ್ವರಚಂದ್ರ ಬೆಟಗೇರಿ, ಜಯಾನಂದ ಮಾದರ, ಪುಷ್ಪಾ ಮುರಗೋಡ, ಪ್ರೊ.ವಸುಂದರ ಕಾಳೆ, ಕುಂದರನಾಡಿನ ರಾಯನಗೌಡ ಪಾಟೀಲ, ಎಂ.ಎನ್. ಮಾವಿನಕಟ್ಟಿ, ಜಿ.ಆರ್. ಸನದಿ, ಬಿ.ಬಿ. ನಿರ್ವಾಣಿ, ಬಿ.ಸಿ. ಅಲ್ಲನ್ನವರ, ಗುರುವಯ್ಯ ಹಿರೇಮಠ, ಆನಂದ ಬಿಳಿಕಿಚಡಿ, ಮಲ್ಲಿಕಾರ್ಜುನ ಹೊಳೆಯಾಚಿ, ಎನ್.ಕೆ. ಹುಡೇದ, ಎಂ.ಆರ್. ಬಾಗೇವಾಡಿ ಹಾಗೂ ಬಾವಿಕಟ್ಟಿ ಕುಟುಂಬಸ್ಥರು ಹಾಗೂ ಅಭಿಮಾನಿ ಬಳಗ ಉಪಸ್ಥಿತರಿದ್ದರು.