ಸಾರಾಂಶ
ಐಆರ್‌ಸಿಟಿಸಿ ಮೂಲಕ ಮಹಾಕುಂಭ ಮೇಳಕ್ಕೆ ಪ್ರಯಾಣ ಕೈಗೊಳ್ಳುವವರಿಗೆ ಪ್ರಯಾಗರಾಜ್‌ನಲ್ಲಿ 400 ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಡಿಲಕ್ಸ್ ಟೆಂಟ್, ಪ್ರಿಮಿಯಂ ಟೆಂಟ್ ಎಂದು ವಿಂಗಡಿಸಲಾಗಿದೆ.
ಹುಬ್ಬಳ್ಳಿ:
ಭಾರತೀಯ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೇಶನ್ ವತಿಯಿಂದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ಜ. 10ರಿಂದ ಫೆ. 28ರ ವರೆಗೆ ಐಆರ್‌ಸಿಟಿಸಿ ಟೆಂಟ್ ಸಿಟಿ ಯೋಜನೆ ಆರಂಭಿಸಿದೆ ಎಂದು ಐಆರ್‌ಸಿಟಿಸಿ ಉಪವ್ಯವಸ್ಥಾಪಕ ಹರ್ಷದೀಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾಕುಂಭವು 4 ಪವಿತ್ರ ಸ್ಥಳಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪ್ರಮುಖ ಹಿಂದು ತೀರ್ಥಯಾತ್ರೆಯಾಗಿದೆ. ಅಲ್ಲಿ ಭಕ್ತರು ಆಧ್ಯಾತ್ಮಿಕ ಶುದ್ಧೀಕರಣ ಮತ್ತು ಪುನರ್ಯೌವನಗೊಳಿಸುವಿಕೆಗಾಗಿ ಸೇರುತ್ತಾರೆ. ಪ್ರಯಾಗರಾಜ್ ಮಹಾಕುಂಭವು ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮವಾಗಿದ್ದು ಲಕ್ಷಾಂತರ ಜನರನ್ನು ಸೆಳೆಯುತ್ತದೆ. ಈ ಹಿನ್ನಲೆಯಲ್ಲಿ ಯೋಜನೆ ಆರಂಭಿಸಲಾಗಿದೆ ಎಂದರು.
ಐಆರ್‌ಸಿಟಿಸಿ ಮೂಲಕ ಮಹಾಕುಂಭ ಮೇಳಕ್ಕೆ ಪ್ರಯಾಣ ಕೈಗೊಳ್ಳುವವರಿಗೆ ಪ್ರಯಾಗರಾಜ್‌ನಲ್ಲಿ 400 ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಡಿಲಕ್ಸ್ ಟೆಂಟ್, ಪ್ರಿಮಿಯಂ ಟೆಂಟ್ ಎಂದು ವಿಂಗಡಿಸಲಾಗಿದೆ. ಟೆಂಟ್‌ಗಳಲ್ಲಿ 24 ಗಂಟೆಗಳ ಭದ್ರತೆ, ಆರಾಮದಾಯಕ ಡೈನಿಂಗ್ ಹಾಲ್‌ಗಳಲ್ಲಿ ಅತಿಥಿಗಳಿಗಾಗಿ ಕ್ಯಾಟರಿಂಗ್ ಸೇವೆ, ವೈದ್ಯಕೀಯ ಸೇವೆ ದೊರೆಯಲಿದೆ. ಐಆರ್‌ಸಿಟಿಸಿ ಟೆಂಟ್ ಸಿಟಿ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ವಾಸ್ತವ್ಯ ಕಾಯ್ದಿರಿಸಲು www.irctctourim ಗೆ ಭೇಟಿ ನೀಡಬಹುದು. ಇಲ್ಲವೆ 1800110139 ಸಂಪರ್ಕಿಸಬಹುದು ಎಂದರು.ಸುದ್ದಿಗೋಷ್ಠಿಯಲ್ಲಿ ಐಆರ್‌ಸಿಟಿಸಿ ಪ್ರಾದೇಶಿಕ ಅಧಿಕಾರಿ ಸೋಮೇಶ್ವರ ರಾಯ್, ಕಾರ್ಯನಿರ್ವಾಹಕ ಅಧಿಕಾರಿ ಪ್ರಜಿತ್ ಸೇರಿದಂತೆ ಹಲವರಿದ್ದರು.