ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಬಿಜಿಪುರ ಹೋಬಳಿಯ ಕ್ಯಾತನಹಳ್ಳಿಗೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಾಬು ಕೃಷ್ಣದೇವ್ ಭೇಟಿ ನೀಡಿ ರೈತರೊಂದಿಗೆ ಸಭೆ ನಡೆಸಿದರು.ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯಡಿ ನಡಕೇರಿ ಅರಸಮ್ಮ ನೀರು ಬಳಕೆದಾರರ ಸಹಕಾರ ಸಂಘದ ಆಡಳಿತ ಮಂಡಳಿ ಕಚೇರಿಯಲ್ಲಿ ಮಾತನಾಡಿದ ಅವರು, ಏಕ ಬೆಳೆ ಪದ್ಧತಿ ಒಳಗೊಂಡಂತೆ ಸಾಮೂಹಿಕ ಕೃಷಿಗೂ ಆದ್ಯತೆ ನೀಡಿದರೆ ರೈತರು ಕೃಷಿಯಲ್ಲಿ ಆರ್ಥಿಕ ಸದೃಢತೆ ಸಾಧಿಸಬಹುದು ಎಂದರು.
ವೈಜ್ಞಾನಿಕ ನೀರಾವರಿ ವ್ಯವಸ್ಥೆಯೊಂದಿಗೆ ಏಕಬೆಳೆ ಪದ್ಧತಿಯನ್ನು ಅನುಸರಿಸಿಕೊಂಡು ಸಾಮೂಹಿಕವಾಗಿ ಬೆಳೆ ಬೆಳೆಯಲು ಮುಂದಾಗಬೇಕು. ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆ ವ್ಯಾಪ್ತಿ ರೈತರು ಬೇಸಾಯ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವುದರಿಂದ ನೀವು ಬೆಳೆದ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಸೌಲಭ್ಯ ಹಾಗೂ ಅಧಿಕ ಪ್ರಮಾಣದ ಲಾಭಾಂಶ ಸಿಗಲಿದೆ ಎಂದರು.ಇದೇ ವೇಳೆ ಸಾಮೂಹಿಕ ಕೃಷಿ ಪದ್ಧತಿ ಹಾಗೂ ಏಕ ಬೆಳೆ ಪದ್ಧತಿ ಕುರಿತು ರೈತರಿಗೆ ಜಾಗೃತಿ ಮೂಡಿಸಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭರತೇಶ್ ಕುಮಾರ್, ಗೋಪಿನಾಥ್, ಜೈನ್ ಸಂಸ್ಥೆಯ ಯೋಜನೆ ಮುಖ್ಯಸ್ಥ ವಿಶ್ವೇಂದ್ರ ಸಿಂಗ್, ಗುರುದತ್ತ್, ಸಹಕಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಮರಿಸ್ವಾಮಿ ಪಾಲ್ಗೊಂಡಿದ್ದರು.
ಸಿದ್ದಗಂಗಾ ಶ್ರೀಗಳ ಧ್ಯಾನ ಮಂದಿರ ಅಭಿವೃದ್ಧಿಗೆ ಸಚಿವರ ಭರವಸೆಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಶ್ರೀಶಿವಕುಮಾರ ಮಹಾ ಸ್ವಾಮೀಜಿ ಉದ್ಯಾನವನದಲ್ಲಿ ನಿರ್ಮಾಣವಾಗುತ್ತಿರುವ ಧ್ಯಾನ ಮಂದಿರ ಹಾಗೂ ಪಾರ್ಕ್ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವುದಾಗಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.ಕಾಯಕಯೋಗಿ ಫೌಂಡೇಶನ್ ನಿರ್ವಹಣೆ ಮಾಡುತ್ತಿರುವ ಉದ್ಯಾನವನ ಹಸಿರಿನಿಂದ ಕಂಗೊಳಿಸುತ್ತಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ವಿವಿಧ ಸಂಘಟನೆಗಳ ಮುಖಂಡರಿಂದ ಅಭಿನಂದನೆ ಸ್ವೀಕರಿಸಿದ ಸಚಿವರು ಉದ್ಯಾನವನದಲ್ಲಿ ಸಸಿ ನೆಟ್ಟು ಕಾಯಕಯೋಗಿ ಧ್ಯಾನಮಂದಿರದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವ ಭರವಸೆ ನೀಡಿದರು.ತಾಪಂ ಮಾಜಿ ಅದ್ಯಕ್ಷ ತ್ಯಾಗರಾಜು, ಕಾಯಕಯೋಗಿ ಫೌಂಡೇಶನ್ ಅದ್ಯಕ್ಷ ಎಂ.ಶಿವಕುಮಾರ್, ಮುಖಂಡರಾದ ಎಂ.ಎಸ್.ಮಂಜುನಾಥ್, ಎಂ.ಆರ್.ರಘು, ಶಿವನಂಜು, ಬಸರಾಳು ಬಸವರಾಜ್, ಗುತ್ತಿಗರದಾರ ಭೈರಪ್ಪ, ಮಲ್ಲಿಕಾರ್ಜುನಯ್ಯ, ಬಿ.ಎಸ್.ಅನುಪಮಾ, ಜಗದೀಶ್ ಇತರರಿದ್ದರು.