ಸಾರಾಂಶ
ಬೆಳಗಾವಿ ಝೂನಲ್ಲಿ ಕೃಷ್ಣಮೃಗಗಳ ನಿಗೂಢ ಸಾವಿನ ಸರಣಿ ಮುಂದುವರಿದಿದ್ದು, ಭಾನುವಾರ ಮತ್ತೊಂದು ಕೃಷ್ಣಮೃಗ ಮೃತಪಟ್ಟಿದ್ದು, ಸಾವಿನ ಸಂಖ್ಯೆ 29ಕ್ಕೇರಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಲೂಕಿನ ಭೂತರಾಮನಹಟ್ಟಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ನಿಗೂಢ ಸಾವಿನ ಸರಣಿ ಮುಂದುವರಿದಿದ್ದು, ಭಾನುವಾರ ಮತ್ತೊಂದು ಕೃಷ್ಣಮೃಗ ಮೃತಪಟ್ಟಿದ್ದು, ಸಾವಿನ ಸಂಖ್ಯೆ 29ಕ್ಕೇರಿದೆ. ಗಳಲೆ ರೋಗದಿಂದ ಕೃಷ್ಣ ಮೃಗಗಳು ಸಾವನ್ನಪ್ಪಿರುವ ಬಗ್ಗೆ ತಜ್ಞ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣ ಏನೆಂಬುದು ವರದಿ ಬಂದ ಬಳಿಕವೇ ನಿಖರವಾಗಿ ಗೊತ್ತಾಗಲಿದೆ. ಮೃತ ಕೃಷ್ಣ ಮೃಗಗಳ ಕಿಡ್ನಿ, ಹೃದಯ, ಲಿವರ್, ರಕ್ತ ಎಲ್ಲದರ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಅದನ್ನು ಅರಣ್ಯ ಇಲಾಖೆ ಸಚಿವರಿಗೆ ಸಲ್ಲಿಸಲಾಗುವುದು ಎಂದು ವೈದ್ಯ ಡಾ.ಚಂದ್ರಶೇಖರ ತಿಳಿಸಿದ್ದಾರೆ.ಕೃಷ್ಣಮೃಗಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ಕಿರು ಮೃಗಾಯಲಯಕ್ಕೆ ಭಾನುವಾರ ತಜ್ಞರ ತಂಡ ಭೇಟಿ ನಾಲ್ಕು ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿತು. ಬ್ಯಾಕ್ಟೀರಿಯಾ ಸೋಂಕಿನಿಂದ (ಗಳಲೆ ಕಾಯಿಲೆಯಿಂದ) ಗುರುವಾರ 20, ಶನಿವಾರ 8, ಈ ಭಾನುವಾರ 1 ಕೃಷ್ಣಮೃಗ ಮೃತಪಟ್ಟಿವೆ. ಈ ಪೈ ಕಿ 25 ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಅಂತ್ಯಕ್ರಿಯೆ ನಡೆಸಲಾಗಿತ್ತು. ಪ್ರಾಣಿಗಳಿಗೆ ಬಂದ ರೋಗದ ಕುರಿತು ಅಧ್ಯಯನ ಮಾಡಲು ಶವಪರೀಕ್ಷೆ ನಡೆಸಿ, ಸ್ಯಾಂಪಲ್ ಸಂಗ್ರಹಿಸಿದ್ದೇವೆ. ಸ್ಯಾಂಪಲ್‌ನ್ನು ಬನ್ನೇರುಘಟ್ಟ ಮೃಗಾಲಯದಲ್ಲಿರುವ ಲ್ಯಾಬ್‌ಗೆ ಕಳುಹಿಸಲಾಗಿದೆ ಇನ್ನೆರಡು ದಿನದಲ್ಲಿ ವರದಿ ಬರಲಿದೆ ಎಂದು ಡಾ.ಮಂಜುನಾಥ ತಿಳಿಸಿದರು.
ಕೋಟ್..... ಗಳಲೆ ರೋಗದಿಂದ ಕೃಷ್ಣಮೃಗಗಳು ಮೃತಪಟ್ಟಿರುವ ಶಂಕೆಯಿದೆ. ಘಟನೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯಕಂಡು ಬಂದಿಲ್ಲ. 8 ಕೃಷ್ಣ ಮೃಗಗಳು ಮೃತಪಟ್ಟ ವೇಳೆಯೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದರೂ, ಸಿಬ್ಬಂದಿ ತಪ್ಪು ಕಂಡು ಬಂದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. - ಡಾ.ಸುನೀಲ ಪನ್ವಾರ್, ಕರ್ನಾಟಕ ಮೃಗಾಲಯಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ;Resize=(128,128))
;Resize=(128,128))