ಸಾರಾಂಶ
ಫಲಾಹುಲ್ ಇಸ್ಲಾಂ ಮದರಸಾದಲ್ಲಿ ಮೌಲಿದ್ ಹಾಗೂ ಇಶ್ಕ್ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ಮಡಿಕೇರಿ: ಪ್ರವಾದಿ ಪೈಗಂಬರ್ ಮೊಹಮ್ಮದ್ (ಸ.ಅ) ಅವರ ನಬಿ 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸಿದ್ದಾಪುರ ರೇಂಜ್ ಸಮಿತಿಯ ಆಶ್ರಯದಲ್ಲಿ 40ಎಕರೆ ಫಲಾಹುಲ್ ಇಸ್ಲಾಂ ಮದರಸದಲ್ಲಿ ಮೌಲಿದ್ ಹಾಗೂ ಇಶ್ಕ್ ಮಜ್ಲಿಸ್ ಕಾರ್ಯಕ್ರಮ ನಡೆಯಿತು.ಸಿದ್ದಾಪುರ ರೇಂಜ್ ಉಪಾಧ್ಯಕ್ಷ ನೌಫಲ್ ಹುದವಿ ಅವರು ಪ್ರಾರ್ಥನೆ ನೆರವೇರಿಸಿದರು. ರೇಂಜ್ ಅಧ್ಯಕ್ಷ ಎಂ. ಆರಿಫ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಕೆಎಸ್‌ಬಿವಿ ರೇಂಜ್ ಕನ್ವೀನರ್ ಅಬ್ದುಲ್ ಅಜೀಜ್ ಬಾಖವಿ ಉದ್ಘಾಟಿಸಿದರು. ಅಬ್ದುಲ್ ರವೂಫ್ ಹುದವಿ ಮುಖ್ಯ ಭಾಷಣ ಮಾಡಿದರು. ಮೌಲಿದ್ ಮತ್ತು ಸಮಾರೋಪ ಪ್ರಾರ್ಥನೆಯನ್ನು ಮಹಲ್ ಖತೀಬ್ ಹುಸೇನ್ ಅಝ್ಹರಿ ನೇತೃತ್ವ ವಹಿಸಿದ್ದರು. ರೇಂಜ್ ಪ್ರಧಾನ ಕಾರ್ಯದರ್ಶಿ ಬಶೀರ್ ಹಸನಿ ಪ್ರಾಸ್ತಾವಿಕ ಭಾಷಣ ಮಾಡಿದದರು.
ಅಬ್ದುಲ್ ಕರೀಂ ಮುಸ್ಲಿಯಾರ್, ಬೀರನಕುಟ್ಟಿ ಹಾಜಿ, ಅಬ್ದುಲ್ ರಶೀದ್, ಹಸನ್ ಬಾಖವಿ, ಸಿ.ಎಂ.ಅಲವಿ ಮುಸ್ಲಿಯಾರ್, ಅಹ್ಮದ್ ಯಮಾನಿ, ಅಬ್ದುಲ್ ಜಬ್ಬಾರ್ ಫೈಝಿ, ಹಂಸಕುಟ್ಟಿ ಫೈಝಿ, ಝೈನುದ್ದೀನ್ ಫೈಝಿ, ಮುಹಮ್ಮದ್ ಅಲಿ ಮುಸ್ಲಿಯಾರ್, ಅಶ್ರಫ್ ಅಝ್‌ಹರಿ, ಅಬ್ದುರ್ರಹ್ಮಾನ್ ಫಾದಿಲಿ, ಹುಸೈನ್ ಅಝ್ಹರಿ, ಮನ್ಸೂರ್ ಹಸನಿ, ಇಬ್ರಾಹಿಂ ಬಾದುಶಾ ಸಅದಿ, ಕುಂಞಿ ಮುಹಮ್ಮದ್ ಮುಸ್ಲಿಯಾರ್, ಹರ್ಷಾದ್ ದಾರಿಮಿ ಉಪಸ್ಥಿತರಿದ್ದರು.