21 ದಿನದೊಳಗೆ ಜನನ, ಮರಣ ಪ್ರಮಾಣ ಪತ್ರ ವಿತರಿಸಿ: ಡಿಸಿ

| Published : Oct 17 2024, 12:52 AM IST

21 ದಿನದೊಳಗೆ ಜನನ, ಮರಣ ಪ್ರಮಾಣ ಪತ್ರ ವಿತರಿಸಿ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜನನ ಹಾಗೂ ಮರಣ ನೋಂದಣಿ ಮತ್ತು ಉಪನೋಂದಣಾಧಿಕಾರಿಗಳು ಜನನ, ಮರಣ ಘಟಿಸಿದ 21 ದಿನಗಳೊಳಗಾಗಿ ನೋಂದಣಿ ಮಾಡಿ, ಪ್ರಮಾಣ ಪತ್ರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ದಾವಣಗೆರೆಯಲ್ಲಿ ಸೂಚನೆ ನೀಡಿದ್ದಾರೆ.

ದಾವಣಗೆರೆ: ಜನನ ಹಾಗೂ ಮರಣ ನೋಂದಣಿ ಮತ್ತು ಉಪನೋಂದಣಾಧಿಕಾರಿಗಳು ಜನನ, ಮರಣ ಘಟಿಸಿದ 21 ದಿನಗಳೊಳಗಾಗಿ ನೋಂದಣಿ ಮಾಡಿ, ಪ್ರಮಾಣ ಪತ್ರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ. ಜಿಲ್ಲಾಮಟ್ಟದ ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಹಾಗೂ ಕೃಷಿ ಅಂಕಿ ಅಂಶಗಳ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನನ ಮತ್ತು ಮರಣ ನೋಂದಣಿ ಮಾಡುವ ಸಮಯದಲ್ಲಿ ಮರಣ ದಿನಾಂಕ ಹಾಗೂ ನೋಂದಣಿ ಘಟಕವನ್ನು ತಪ್ಪಾಗಿ ಆಯ್ಕೆ ಮಾಡುತ್ತಿರುವುದು ಮತ್ತು ಬೇರೆಯವರ ಆಧಾರ್ ನಂಬರ್‌ ಜೋಡಣೆ ಮಾಡಿ ಮರಣ ಪ್ರಮಾಣ ಪತ್ರ ವಿತರಿಸುತ್ತಿರುವುದು ಕಂಡುಬಂದಿದೆ. ಈ ರೀತಿಯ ತಪ್ಪುಗಳು ಇನ್ನೂ ಮುಂದೆ ಆಗದಂತೆ ಎಚ್ಚರವಹಿಸಿ, ಕೆಲಸ ನಿರ್ವವಹಿಸಬೇಕು ಎಂದು ಸೂಚನೆ ನೀಡಿದರು.

ಬೆಳೆ ಕಟಾವು ಪ್ರಯೋಗಳನ್ನು ಕೈಗೊಳ್ಳಲು ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹರಿಹರ 260, ಜಗಳೂರು 482, ದಾವಣಗೆರೆ 362, ಹೊನ್ನಾಳಿ 266, ಚನ್ನಗಿರಿ 428, ನ್ಯಾಮತಿ 212 ಬೆಳೆ ಕಟಾವು ಪ್ರಯೋಗಳನ್ನು ನಿಯೋಜನೆಗೊಳಿಸಲಾಗಿದೆ. ಇದರಲ್ಲಿ ನಮೂನೆ 1 ಹರಿಹರ 58, ಜಗಳೂರು 20 , ದಾವಣಗೆರೆ 101, ಹೊನ್ನಾಳಿ 82, ಚನ್ನಗಿರಿ 20 ಹಾಗೂ ನ್ಯಾಮತಿ 64 ಬಾಕಿ ಇದ್ದು. ಬಾಕಿ ಇರುವ ಪ್ರಯೋಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ನಮೂನೆ 2ರ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಸಾಂಖ್ಯಿಕ ಅಧಿಕಾರಿ ನೀಲಾ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಜನವರಿ 2024ರಿಂದ ಸೆಪ್ಟಂಬರ್ 2024 ರವರೆಗೆ ಜನನ 4744, ಮರಣ 4985 ಒಟ್ಟು 9729 ಆಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

- - - -16ಕೆಡಿವಿಜಿ39ಃ: