ಬೆಲೆಯೇರಿಕೆಗೆ ಬಿಜೆಪಿ ಕಾರಣವೆಂಬುದು ಸುಳ್ಳು ಜಾಹಿರಾತು

| Published : Apr 21 2024, 02:17 AM IST

ಬೆಲೆಯೇರಿಕೆಗೆ ಬಿಜೆಪಿ ಕಾರಣವೆಂಬುದು ಸುಳ್ಳು ಜಾಹಿರಾತು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಸೋಲಿನ ಭೀತಿಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷ ಹತಾಶೆಯಿಂದ ಬೆಲೆಯೇರಿಕೆಗೆ ಬಿಜೆಪಿ ಕಾರಣ ಎಂದು ಸುಳ್ಳು ಜಾಹೀರಾತು ನೀಡುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೆ.ಆರ್.ಮಹೇಶ್ ಒಡೆಯರ್ ಆರೋಪಿಸಿದರು.

ಜಿಲ್ಲಾ ಬಿಜೆಪಿ ವಕ್ತಾರ ಕೆ.ಆರ್.ಮಹೇಶ್ ಒಡೆಯರ್

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯದಲ್ಲಿ ಸೋಲಿನ ಭೀತಿಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷ ಹತಾಶೆಯಿಂದ ಬೆಲೆಯೇರಿಕೆಗೆ ಬಿಜೆಪಿ ಕಾರಣ ಎಂದು ಸುಳ್ಳು ಜಾಹೀರಾತು ನೀಡುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೆ.ಆರ್.ಮಹೇಶ್ ಒಡೆಯರ್ ಆರೋಪಿಸಿದರು.

ಕಡೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ 21ರಂದು ಕಡೂರು ಕ್ಷೇತ್ರದ 253 ಬೂತ್ ಗಳಲ್ಲಿ ಬಿಜೆಪಿ ಮಹಾಅಭಿಯಾನ ಹೆಸರಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 22 ರಂದು ಬೀರೂರಿನ ಕೆಎಲ್ ಕೆ ಮೈದಾನದಲ್ಲಿ ಬೆಳಿಗ್ಗೆ 11 ಕ್ಕೆ ನಡೆಯಲಿರುವ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ದೇವೇಗೌಡರು ಮತ್ತು ವಿವಿಧ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಮೂಲಕ ಬಹಳಷ್ಟು ಯೋಜನೆಗಳನ್ನು ಕಡೂರು ಕ್ಷೇತ್ರಕ್ಕೆ ಉಪಯೋಗಕಾರಿ ಆಗುವಂತೆ ಮಾಡಿದ್ದಾರೆ. ಅಲ್ಲದೆ ಮಾಜಿ ಶಾಸಕ ವೈ ಎಸ್ ವಿ ದತ್ತರವರು ಸಹ ಉತ್ತಮ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಹಾಸನ ಲೋಕಸಭೆ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಲಿದ್ದಾರೆ ಎಂದರು. ಕಾಂಗ್ರೆಸ್ ನವರು ನೀಡಿರುವ ಜಾಹೀರಾತುಗಳಲ್ಲಿ ಬೆಲೆಯೇರಿಕೆ ಬಗ್ಗೆ ಅವರೇ ಸುಳ್ಳು ಹೇಳಿದ್ದಾರೆ. ಗ್ಯಾಸ್ ಸಿಲಿಂಡರ್ 830 ಕ್ಕೆ ಸಿಗುತ್ತಿರುವುದು ಸುಳ್ಳಲ್ಲ. ವಾಸ್ತವ ಸಂಗತಿ ಮರೆಮಾಚಿ ಜನರ ಕಣ್ಣಿಗೆ ಮಂಕುಬೂದಿ ಎರಚುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡುವುದನ್ನು ನಿಲ್ಲಿಸಲಿ ಎಂದರು.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ತನ್ನ ವರದಿಯಲ್ಲಿ ಭಾರತದಲ್ಲಿ ಹಣದುಬ್ಬರ ಉಂಟಾಗಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದೆ. ಭಾರತದ ಆರ್ಥಿಕತೆ ಸ್ಥಿರವಾಗಿರಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ದಿಟ್ಟ ನಿಲುವುಗಳು ಬಹುಮುಖ್ಯ ಕಾರಣ ಎಂಬುದನ್ನು ಕಾಂಗ್ರೆಸ್ ಅರಿಯಬೇಕು. ಸೋಲಿನ ಭೀತಿಯಿಂದ ಜನತೆಗೆ ಸುಳ್ಖು ಮಾಹಿತಿ ನೀಡುವುದನ್ನು ನಿಲ್ಲಿಸಬೇಕು ಎಂದರು. ಬಿಜೆಪಿ ಜಿಲ್ಲಾ ಓಬಿಸಿ ಅಧ್ಯಕ್ಷ ಟಿ.ಆರ್.ಲಕ್ಕಪ್ಪ, ಬಿಜೆಪಿ ಕಡೂರು ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಕುಮಾರ್, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಅಗ್ನಿ ಮತ್ತಿತರರು ಇದ್ದರು.

-- ಬಾಕ್ಸ್ --

ನೇಹ ಹತ್ಯೆ: ಬಿಜೆಪಿ ತೀವ್ರ ಖಂಡನೆ

ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲವೆಂಬ ಭಾವನೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ರಾಜ್ಯಸರಕಾರ ಸಮಾಜ ಘಾತುಕ ಶಕ್ತಿಗಳನ್ನು ರಕ್ಷಿಸದೆ ಕಠಿಣ ಕ್ರಮಗಳ ಮೂಲಕ ರಾಜ್ಯದ ಜನರ ರಕ್ಷಣೆಗೆ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಮಹೇಶ್ ವಡೆಯರ್ ಒತ್ತಾಯಿಸಿದರು.

20ಕೆಕೆಡಿಯು1. ಕೆ ಆರ್ ಮಹೇಶ್ ವಡೆಯರ್.