ಸಾರಾಂಶ
ಚಿಂಚೋಳಿ: ಹಿಂದುಳಿದ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಕನಸು ಕಂಡಿದ್ದ ದಿ.ವೈಜನಾಥ ಪಾಟೀಲರವರ ಕನಸಿಗೆ ಕಾಂಗ್ರೆಸ್ ಅಡ್ಡಗಾಲು ಹಾಕಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಯುತ್ತಿರುವುದು ನಾಚಿಗೇಡು ಸಂಗತಿ ಎಂದು ಡಿಸಿಸಿ ಬ್ಯಾಂಕ ಮಾಜಿ ನಿರ್ದೇಶಕ ಗೌತಮ ವೈಜನಾಥ ಪಾಟೀಲ ಕಿಡಿಕಾರಿದ್ದಾರೆ.
ಚಿಂಚೋಳಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಬ್ಬು ಬೆಳೆಗಾರರು ಸಿದ್ದಸಿರಿ ಸೌಹಾರ್ದಾ ಸಹಕಾರ ನಿ.ಎಥೆನಾಲ್ ಪವರ ಘಟಕ ಪ್ರಾರಂಭಿಸಲು ೧೫ ದಿನಗಳಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.ಹಿಂದುಳಿದ ಪ್ರದೇಶದ ರೈತರು ಆರ್ಥಿಕ ಅಭಿವೃದ್ಧಿ ಆಗಬೇಕು ಮತ್ತು ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಬೇಕು. ಚಿಂಚೋಳಿ ಬಯೋಮೆಟ್ರಿಕ ಸಕ್ಕರೆ ಕಾರ್ಖಾನೆ ಪ್ರಾರಂಭದಿಂದ ಪರೋಕ್ಷವಾಗಿ ಅನೇಕ ಉದ್ಯೋಗಗಳು ಸೃಷ್ಟಿ ಆಗುತ್ತವೆ ಎಂದು ನಮ್ಮ ತಂದೆ ಮಾಜಿ ಸಚಿವ ದಿ.ವೈಜನಾಥ ಪಾಟೀಲರು ಕನಸು ಕಂಡಿದ್ದರು. ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಮತ್ತು ಪರವಾನಿಗೋಸ್ಕರ ನಮ್ಮ ಸ್ವಂತ ಮನೆ ಹೊಲವನ್ನು ಮಾರಾಟ ಮಾಡಿ ತುಂಬಾ ಕಷ್ಟಪಟ್ಟು ಪರವಾನಿಗೆ ಪಡೆದು ಪ್ರಾರಂಭಿಸಿದ ಸಕ್ಕರೆ ಕಾರ್ಖಾನೆ ರಾಜಕೀಯ ಸ್ವಾರ್ಥಕ್ಕಾಗಿ ಬಂದ್ ಮಾಡಿರುವ ಕಾಂಗ್ರೆಸ ಪಕ್ಷದವರು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ಚಿಂಚೋಳಿ ಸಕ್ಕರೆ ಕಾರ್ಖಾನೆ ಲೈಸೆನ್ಸ ಪಡೆದುಕೊಂಡು ತಮಿಳುನಾಡು, ಹೈದ್ರಾಬಾದ ಉದ್ಯಮಿಗಳಿಗೆ ಪ್ರಾರಂಭಿಸಲು ಅನುಮತಿ ನೀಡಲಾಯಿತು. ಆದರೆ ಹೈದ್ರಾಬಾದಿನ ಟರ್ಬೋ ಕಂಪನಿ ಪಂಜಾಬ ನ್ಯಾಶನಲ್ ಬ್ಯಾಂಕನಿಂದ ೩೭೦ಕೋಟಿ ರು. ಸಾಲಡೆದುಕೊಂಡರು. ಆದರೆ ಸಾಲವನ್ನು ಪಡೆದುಕೊಂಡರು ಸಹಾ ಸಕ್ಕರೆ ಕಾರಖಾನೆ ಪ್ರಾರಂಭಿಸಿಲ್ಲ. ೩ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಸಕ್ಕರೆ ಕಾರಖಾನೆ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸಿದ್ದಸಿರಿ ಎಥೆನಾಲ್ ಪವರ ಘಟಕ ಪ್ರಾರಂಭಿಸಲು ೯೦೦ಕೋಟಿ ರು. ಬಂಡವಾಳ ಹೂಡಿಕೆ ಮಾಡಿ ಪ್ರಾರಂಭಿಸಿ ರೈತರಿಗೆ ಕಬ್ಬನ್ನು ಖರೀದಿಸಿದ್ದಾರೆ.ತಾಲೂಕಿನ ಅನೇಕ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ಪಕ್ಷದ ಸರಕಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸುಪ್ರಿಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿ ಕಾರ್ಖಾನೆ ಬಾಗಿಲು ಬಂದ್ ಮಾಡಿಸಿದ್ದಾರೆ. ಸರಕಾರ ರೈತರ ಬಗ್ಗೆ ಕಾಳಜಿ ಇಲ್ಲ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದರು.
ಮಾಜಿ ಸಚಿವ ದಿ.ವೈಜನಾಥ ಪಾಟೀಲರು ಕಂಡಿದ್ದ ಕನಸು ನನಸಾಗಬೇಕಾದರೆ ಸಿದ್ದಸಿರಿ ಏಥೆನಾಲ್ ಪವರ ಘಟಕ ಕಾರಖಾನೆ ಪ್ರಾರಂಭಿಸಬೇಕೆಂದು ಅಗ್ರಹಿಸಿದರು.ನ್ಯಾಯವಾದಿ ಶಿವಶರಣಪ್ಪ ಜಾಪಟ್ಟಿ, ನಂದಿಕುಮಾರ ಪಾಟೀಲ.ನ್ಯಾಯವಾದಿ ಆರ್,ಆರ್,ಪಾಟೀಲ, ವೀರೇಶ ಎಂಪಳ್ಳಿ,ವಿರಣ್ಣ ಗಂಗಾಣಿ,ಜನಾರ್ಧನರಾವ ಕುಲಕರ್ಣಿ,ಸೂರ್ಯಕಾಂತ ಅಣವಾರ,ಸೂರ್ಯಕಾಂತ ಹುಲಿ,ರಾಜಶೇಖರ ಗುಡದಾ, ಗೋಪಾಲರೆಡ್ಡಿ ಕೊಳ್ಳುರ,ಸತೀಶ ಇಟಗಿ,ಪರ್ವತಕುಮಾರ ದೇಸಾಯಿ, ಬಸವರಾಜ ಚಿಮ್ಮಾಇದಲಾಯಿ,ನಾಗೇಂದ್ರ ಸರಡಗಿ,ಶಿವರಾಜ ಹಿತ್ತಲ ಮತ್ತಿತರಿದ್ದರು.