ಇಂದಿನ ಪಿಳಿಗೆಗೆ ಸಂಪ್ರದಾಯ ಪರಿಚಯಿಸುವುದು ಅತ್ಯಗತ್ಯ

| Published : Jan 17 2024, 01:50 AM IST

ಸಾರಾಂಶ

ಎಸ್.ಕೆ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಲಾದ ಸುಗ್ಗಿ ಹುಗ್ಗಿ ಜನಪದ ಕಲಾ ವೈಭವ ಕಾರ್ಯಕ್ರಮದಲ್ಲಿ ರೈತಾಪಿ ಜನತೆಯ ಅಗತ್ಯವಿರುವ ಸಂಗ್ರಹಿಸಲಾಗಿಟ್ಟ ಕಾಳು ಕಡಿ ಜೋಳದ ತೆನೆ, ಈ ಎಲ್ಲ ದವಸ ದಾನ್ಯಗಳಿಗೆ ಮಹಾಪೂಜೆ ಸಲ್ಲಿಸಿಕೆಯಲ್ಲಿ ಎಸ್.ಕೆ.ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಧ್ಯಕ್ಷ ವೇ.ಮುರುಘೇಶ ವಿರಕ್ತಮಠ ಹೇಳಿದ್ದು ಹೀಗೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ರೈತಾಪಿ ಜನತೆಯ ಈ ಹಿಂದಿನ ಕಾಲದಿಂದ ಸಾಗಿಬಂದಂತಹ ಸುಗ್ಗಿ ಹುಗ್ಗಿಯ ಈ ಕಾರ್ಯಕ್ರಮಗಳು ಮಹತ್ವದ ಕಾರ್ಯಕ್ರಮಗಳಾಗಿ ಮಾರ್ಪಟ್ಟಿದ್ದು, ಈ ಹಿಂದಿನ ಸಂಪ್ರದಾಯ ಇಂದಿನ ಪಿಳಿಗೆಗೆ ಪರಿಚಯ ಪಡಿಸುವುದು ಅತ್ಯಗತ್ಯವಾಗಿದೆ ಎಂದು ಎಸ್.ಕೆ.ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಧ್ಯಕ್ಷ ವೇ.ಮುರುಘೇಶ ವಿರಕ್ತಮಠ ಹೇಳಿದರು.

ಎಸ್.ಕೆ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಲಾದ ಸುಗ್ಗಿ ಹುಗ್ಗಿ ಜನಪದ ಕಲಾ ವೈಭವ ಕಾರ್ಯಕ್ರಮದಲ್ಲಿ ರೈತಾಪಿ ಜನತೆಯ ಅಗತ್ಯವಿರುವ ಸಂಗ್ರಹಿಸಲಾಗಿಟ್ಟ ಕಾಳು ಕಡಿ ಜೋಳದ ತೆನೆ, ಈ ಎಲ್ಲ ದವಸ ದಾನ್ಯಗಳಿಗೆ ಮಹಾಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಹಳೆಯ ಸಂಸ್ಕೃತಿಯನ್ನು ಇಂದಿನ ಪಿಳಿಗೆಗೆ ಪರಿಚಯಿಸುವುದು ಅಗತ್ಯವಾಗಿದೆ ಎಂಬುವುದರಲ್ಲಿಂದಲೇ ಇಂದು ಸಂಕ್ರಾತಿ ಹಬ್ಬದ ಆಚರಣೆಯ ಕಾರ್ಯ ಇದಾಗಿದೆ. ಜನರ ಆಡುವ ಮಾತುಗಳಿಂದಲೇ ಜನಪದ ಎಂಬುವುದು ಬಳಕೆಗೆ ಬಂದಿದ್ದು, ಇಂದಿನವರೆಗೂ ಎಲ್ಲರಿಗೂ ಪರಿಚಿತಗೊಳ್ಳಲು ಕಾರಣವಾಗಿದೆ ಎಂದರು.

ಸುಮಾರು 800 ವಿದ್ಯಾರ್ಥಿಗಳು 25 ಜನ ಶಿಕ್ಷಕರನ್ನೊಳಗೊಂಡು ಪ್ರಾರಂಭಗೊಂಡಿರುವ ಈ ಶಾಲೆಯಲ್ಲಿ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತಲ್ಲದೇ ಈ ಭೋಜನದಲ್ಲಿ ಹಿಂದಿನ ಕಾಲದ ಬಾನ ಮಸರು, ಸಜ್ಜಿ ರೋಟ್ಟಿ, ಜೋಳದ ರೋಟ್ಟಿ, ಎಳ್ಳ ಹೋಳಿಗೆ, ಶೇಂಗಾ ಹೋಳಿಗೆ, ಚಪಾತಿ, ಪುಂಡಿ ಪಲ್ಲೆ, ತುಂಬಗಾಯಿ ಬದನೆಕಾಯಿ ಪಲ್ಲೆ ಸಜ್ಜೆ ಕಡಬು, ಕಾಳ ಪಲ್ಲೆ, ಹಿಟ್ಟಿನ ಪಲ್ಲೆ, ಶೇಂಗಾ, ಅಗಸಿ ಜಟ್ನಿ, ಅಲ್ಲದೇ ಕಲ್ಲನ ಕಾರ ತಯಾರಿಸಿದ್ದನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅತಿಥಿ ಮಹೋದಯರು ಸವಿದು ಸುಗ್ಗಿ ಹಬ್ಬದ ಸಂಭ್ರಮ ಕಂಡರಲ್ಲದೇ ನಂತರ ವಿವಿಧ ನಮೂನೆಯ ಈ ಹಿಂದಿನ ಕಾಲದಲ್ಲಿ ಸಾಗಿಬಂದ ಲಗೋರಿ ಆಟ, ಚಿಣಿಪಿಣಿ ಆಟ, ಚಂಡಿನ ಅಪ್ಪೆ ದುಪ್ಪದ ಆಟ, ಕಬ್ಬಡ್ಡಿ, ಈ ಎಲ್ಲ ಆಟಗಳೊಂದಿಗೆ ಕೊನೆಗೆ ಗಾಳಿ ಪಟ ಹಾರಿಸುವ ಆಟದಿಂದ ಸಂಭ್ರಮಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಸದಸ್ಯರಾದ ರಮೇಶ ಸಾಲಂಕಿ, ಮುಖ್ಯ ಗುರುಮಾತೆರಾದ ಲಕ್ಷ್ಮೀ ಮಣೂರ, ಗೀತಾ ಹಿರೇಮಠ, ಶಿಕ್ಷಕರಾದ ಎಸ್.ಎ.ಶರಣರ, ಮಾಳಿಂಗರಾಯ ಪೂಜಾರಿ, ವಿಜಯಲಕ್ಷ್ಮೀ ದೊಡಮನಿ, ಸುಕನ್ಯಾ ಸೊಂಡೂರ, ಅಮೃತಾ ಅರಕೇರಿ, ಪರಶುರಾಮ ಪಡಸಾಲಿ, ಅಮೀನಾ ಮಕಾಂದಾರ, ಸಾಮವೀಲ್ ಸರ್, ಕೀರ್ತಿ ಹಿರೇಮಠ, ಶಿವಲೀಲಾ ಸಜ್ಜನ, ಸವೀತಾ ಹಿರೇಮಠ, ಮಂಗಳಾ ಗೌಡಗೇರಿ, ಸವಿತಾ ಆಲ್ಯಾಳ, ಶೈಲಾ ತೋಳನೂರ ಮೊದಲಾದವರು ಉಪಸ್ಥಿತರಿದ್ದರು. ಎಸ್.ಎ.ಶರಣರ ಸ್ವಾಗತಿಸಿದರು, ಶೈಲಾ ತೋಳನೂರ ವಂದಿಸಿದರು. ನಮ್ಮ ಹಿಂದಿನ ಸಾಂಪ್ರದಾಯದ ಉಡುಗೆ ತೊಡುಗೆಗಳೊಂದಿಗೆ ಊಟದ ವ್ಯವಸ್ಥೆಯಲ್ಲಿಯೂ ಬಹಳ ವ್ಯತ್ಯಾಸವಿದ್ದರೂ ಹಿಂದಿನ ಊಟದ ವ್ಯವಸ್ಥೆ ಹೇಗಿತ್ತು? ಉಡುಗೆ-ತೊಡುಗೆ ಹೇಗಿತ್ತೆಂಬುವುದನ್ನು ಮಕ್ಕಳ ಗಮನಕ್ಕೆ ತರಲು ಅವರಿಂದಲೇ ಅವರಿಗೊಸ್ಕರ ತಿಳುವಳಿಕೆ ಮೂಡಿಸುವ ಕಾರ್ಯ ನಮ್ಮ ಶಾಲಾ ಶಿಕ್ಷಕರು ಮಾಡಿದ್ದಾರೆ. ಇದೊಂದು ಈ ಹಿಂದಿನ ಸಂಪ್ರದಾಯದ ಮೇಲುಕು ಹಾಕುವಂತಹ ಕಾರ್ಯ ಸಂಕ್ರಾತಿ ಹಬ್ಬದಲ್ಲಿ ಮೂಡಿ ಬಂದಿರುವುದು ಶ್ಲಾಘನೀಯವಾಗಿದೆ.

- ಮುರುಘೇಶ ವಿರಕ್ತಮಠ, ಅಧ್ಯಕ್ಷರು, ಎಸ್.ಕೆ.ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ.