ಜನರ ಆಶಯದಂತೆ ಬಿಜೆಪಿ ಪ್ರಣಾಳಿಕೆ ಸಿದ್ಧಗೊಳಿಸುತ್ತಿರುವುದು ಅನುಕರಣೀಯ-ಮಾಜಿ ಸಚಿವ ಬಂಡಿ

| Published : Mar 10 2024, 01:50 AM IST

ಜನರ ಆಶಯದಂತೆ ಬಿಜೆಪಿ ಪ್ರಣಾಳಿಕೆ ಸಿದ್ಧಗೊಳಿಸುತ್ತಿರುವುದು ಅನುಕರಣೀಯ-ಮಾಜಿ ಸಚಿವ ಬಂಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ೧೦ ವರ್ಷದ ಅವಧಿಯಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುವುದರ ಜತೆಗೆ ಜನ ಮೆಚ್ಚುಗೆ ಆಡಳಿತ ನಡೆಸಿದ ಪ್ರಧಾನಿ ಮೋದಿ ಅವರು ಜನರ ಆಶಯದಂತೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ಮುಂದಾಗಿದ್ದು ಅನುಕರಣೀಯ ಎಂದು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಗಜೇಂದ್ರಗಡ: ಕಳೆದ ೧೦ ವರ್ಷದ ಅವಧಿಯಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುವುದರ ಜತೆಗೆ ಜನ ಮೆಚ್ಚುಗೆ ಆಡಳಿತ ನಡೆಸಿದ ಪ್ರಧಾನಿ ಮೋದಿ ಅವರು ಜನರ ಆಶಯದಂತೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ಮುಂದಾಗಿದ್ದು ಅನುಕರಣೀಯ ಎಂದು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಪತ್ರ ಜನಾಭಿಪ್ರಾಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.ಜನಾರ್ಶೀವಾದದಿಂದ ೨೦೧೪ ಹಾಗೂ ೨೦೧೯ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ರೈತಪರ, ಕಾರ್ಮಿಕರ ಹಿತ ಕಾಯುವ ಯೋಜನೆಗಳ ಜತೆಗೆ ಜನಸಾಮಾನ್ಯರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ. ಪರಿಣಾಮ ದೇಶವನ್ನು ಅಭಿವೃದ್ಧಿ ಹಾದಿಯಲ್ಲಿ ಸಾಗಿಸುವುದರ ಜತೆಗೆ ವೈರಿ ರಾಷ್ಟ್ರಗಳ ಹೆಡೆಮುರಿ ಕಟ್ಟಲು ಸರ್ಜಿಕಲ್ ಸ್ಟ್ರೈಕ್‌ಗಳ ಮೂಲಕ ಭಾರತದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ನೀಡುವ ಮೂಲಕ ವಿಶ್ವದ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ದೇಶವನ್ನು ಮುಂಚೂಣಿಯಲ್ಲಿ ತಂದು ನಿಲ್ಲಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

ದೇಶಾದ್ಯಂತ ೧ ಕೋಟಿ ಜನರ ಅಭಿಪ್ರಾಯ ಸಂಗ್ರಹಿಸುವ ಗುರಿಯನ್ನು ಬಿಜೆಪಿ ಹೊಂದಿದ್ದು, ರಾಜ್ಯದಲ್ಲಿ ಕನಿಷ್ಠ ೩ ಲಕ್ಷ ಜನರ ಅಭಿಪ್ರಾಯಗಳನ್ನು ಸಂಗ್ರಹಿಸುವ ಸಂಕಲ್ಪ ಮಾಡಲಾಗಿದೆ. ಹೀಗಾಗಿ ಜನಸವೇಕ ಎಂದರೆ ಹೇಗಿರಬೇಕು, ಜನಸೇವಕನ ಕೆಲಸ ಎಂದರೆ ಜನಾಭಿಪ್ರಾಯಕ್ಕೆ ಮೊದಲಾದ್ಯತೆ ನೀಡಬೇಕು ಎಂದು ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿರುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ. ಹೀಗಾಗಿ ಮತಕ್ಷೇತ್ರದಲ್ಲಿನ ಅಭಿವೃದ್ಧಿ ಜತೆಗೆ ದೇಶದ ಭದ್ರತೆ ಮತ್ತು ಪ್ರಗತಿಗೆ ರೈತರು, ಯುವ ಸಮೂಹ ಹಾಗೂ ಮಹಿಳೆಯರು ಸೇರಿ ಎಲ್ಲ ವರ್ಗದ ಜನರಿಂದ ಸಲಹೆ, ಅಭಿಪ್ರಾಯಗಳನ್ನು ಪತ್ರದಲ್ಲಿ ಸಂಗ್ರಹಿಸಲಾಗುವುದು. ದೇಶದ ಜನತೆಯ ಆಶಯದಂತೆ ಮತ್ತೊಮ್ಮೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರಚೆನೆಯಾಗಲಿದ್ದು, ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ಜನಪರ ಮತ್ತು ರೈತಪರ ಕಾರ್ಯಕ್ರಮಗಳನ್ನು ಪ್ರಚಾರ ಮಾಡಬೇಕು ಎಂದರು.

ಈ ವೇಳೆ ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ, ಪ್ರಕೋಷ್ಠ ಜಿಲ್ಲಾ ಸಂಚಾಲಕರಾದ ಶಶಿಧರ ದಿಂಡೂರ, ರಮೇಶ ಸಜ್ಜುಗಾರ, ಪುರಸಭೆ ಹಂಗಾಮಿ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಸ್ಥಾಯಿ ಸಮಿತಿ ಮಾಜಿ ಚೇರ್ಮನ್ ಕನಕಪ್ಪ ಅರಳಿಗಿಡದ, ಬಿ.ಎಂ. ಸಜ್ಜನರ, ಮುದಿಯಪ್ಪ ಕರಡಿ, ಶಿವಾನಂದ ಮಠದ, ಉಮೇಶ ಮಲ್ಲಾಪೂರ, ಬಾಳು ಗೌಡರ, ಮಲ್ಲು ಕುರಿ ಸೇರಿ ಇತರರು ಇದ್ದರು.