ಶಾಲಾ ಮಕ್ಕಳು ಕಾನೂನು ಅರಿವು ತಿಳಿಯುವುದು ಮುಖ್ಯ-ನ್ಯಾಯಾಧೀಶ ಅಶ್ವಿನಿ

| Published : Jun 17 2024, 01:32 AM IST

ಶಾಲಾ ಮಕ್ಕಳು ಕಾನೂನು ಅರಿವು ತಿಳಿಯುವುದು ಮುಖ್ಯ-ನ್ಯಾಯಾಧೀಶ ಅಶ್ವಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ಅರಿವು ಕುರಿತು ಶಾಲಾ ಮಕ್ಕಳಿಗೆ ಮಾಹಿತಿ ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನ್ಯಾಯಾಧೀಶ ಅಶ್ವಿನಿ ಚಂದ್ರಕಾಂತ ಹೇಳಿದರು.

ಶಿಗ್ಗಾಂವಿ: ಕಾನೂನು ಅರಿವು ಕುರಿತು ಶಾಲಾ ಮಕ್ಕಳಿಗೆ ಮಾಹಿತಿ ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನ್ಯಾಯಾಧೀಶ ಅಶ್ವಿನಿ ಚಂದ್ರಕಾಂತ ಹೇಳಿದರು.

ಜೆಎಂಎಫ್‌ಸಿ ಕೋರ್ಟ್‌ ಆಶ್ರಯದಲ್ಲಿ ಬಾಲ ಕಾರ್ಮಿಕ ವಿರೋಧಿ ನೀತಿಯ ಕುರಿತು ತಾಲೂಕಿನ ಹೊಸೂರು ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿಗ್ಗಾಂವಿ ತಾಲೂಕಿನ ಜೆಎಂಎಫ್‌ಸಿ ನ್ಯಾಯಾಧೀಶ ಅಶ್ವಿನಿ ಚಂದ್ರಕಾಂತ ಅವರ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಾನೂನು ಅರಿವು ಕುರಿತು ಶಾಲಾ ಮಕ್ಕಳಿಗೆ ಮಾಹಿತಿ ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

೧೪ ವರುಷದ ಮಕ್ಕಳು ದುಡಿಯುತ್ತಿದ್ದರೆ ಬಾಲಕಾರ್ಮಿಕರು, ೧೬ ವರ್ಷದ ಮೇಲ್ಪಟ್ಟ ವಯಸ್ಸಿನವರು ದುಡಿಯುತ್ತಿದ್ದರೆ ಅವರನ್ನ ಕಿಶೋರಾವಸ್ಥೆ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಉತ್ತಮ ಶಿಕ್ಷಣ ನೀಡುವುದರ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಬಹುದು ಎಂದು ಹೇಳಿದರು.ಯಾರಾದರೂ ಕೂಲಿ ಕೆಲಸಕ್ಕೆ ಕಳಿಸಿದರೆ ೧೦೯೮ ನಂಬರಿಗೆ ಕರೆ ಮಾಡಿ ತಿಳಿಸಿ ಎಂದ ಅವರು ಕಾನೂನು ಪ್ರಕಾರ ಅಪರಾಧ ಕಂಡು ಬಂದಲ್ಲಿ ಪಾಲಕರ ಮೇಲೆ ಹಾಗೂ ಕೂಲಿ ಕೆಲಸಕ್ಕೆ ಬರಮಾಡಿಕೊಂಡ ಮಾಲೀಕನಿಗೆ ೨ ವರ್ಷದ ಜೈಲು ೫೦ ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಮಕ್ಕಳಿಗೆ ಮಾಹಿತಿ ನೀಡಿದರು .ಕಾರ್ಯಕ್ರಮದ ಅತಿಥಿಗಳಾಗಿ ಪ್ಯಾನಲ್‌ ವಕೀಲರಾದ ಸಿ.ಎಂ. ಹರಕುಣಿ, ೧೪ ವರುಷದ ಮಕ್ಕಳು ಇಟ್ಟಿಗೆ ಕೆಲಸ, ಹೊಲದಲ್ಲಿ ಕೆಲಸ, ಹೋಟೆಲನಲ್ಲಿ ಕೆಲಸ ಸೇರಿದಂತೆ ವಿವಿಧ ಕಡೆಗೆ ಕೆಲಸ ಮಾಡುವ ಮಾಹಿತಿ ತಮಗೆ ದೊರಕಿದರೆ ತಕ್ಷಣ ೧೦೯೮ ಕರೆ ಮಾಡಿ ಹಾಗೂ ಸಂಬಂಧಪಟ್ಟ ಪೊಲೀಸ್ ಸ್ಟೇಷನಗೆ ತಿಳಿಸಿ ನೀವು ಕೊಟ್ಟ ಮಾಹಿತಿಯನ್ನು ಪೊಲೀಸರು ಗೌಪ್ಯವಾಗಿ ಇಟ್ಟುಕೊಂಡು ಅಪರಾಧ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಮಕ್ಕಳಿಗೆ ಅರ್ಥವಾಗುವ ಹಾಗೆ ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ದಾವಲಸಾಬ್ ಎಂ. ಹುಬ್ಬಳ್ಳಿ, ಉಪ ವಲಯ ಅರಣ್ಯ ಅಧಿಕಾರಿ ಪಿ.ಆರ್. ತೆಗ್ಗಿಹಳ್ಳಿ, ಶಿಗ್ಗಾಂವಿ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಆರ್.ಯು. ಕುಬಸದ, ಪ್ರೌಢಶಾಲೆ ಪ್ರಧಾನ ಗುರುಗಳಾದ ನರಸಿಂಹ ಕುಮಾರ್, ಶಾಲೆಯ ಶಿಕ್ಷಕರಾದ ಎನ್‌. ಎಸ್. ಬರದೂರ, ಭೀಮಣ್ಣ ಸುಣಗಾರ, ಉಮೇಶ್ ತಾವನಪ್ಪನವರ, ಶಾಂತವ್ವ ಸುಣಗಾರ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.