ಸಾರಾಂಶ
- ಬೇಲಿಮಲ್ಲೂರಲ್ಲಿ ಮಹಿಳಾ ಗ್ರಾಮ ಸಭೆಯಲ್ಲಿ ಪಿಡಿಒ ಪರಮೇಶ್ವರಪ್ಪ
- - -ಹೊನ್ನಾಳಿ: ಭಾರತ ಸಂವಿಧಾನದಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಮತ್ತು ಒಕ್ಕೂಟದ ಮಹಿಳೆಯರು ಅರಿತು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರಪ್ಪ ಕೊಳೂರ ಹೇಳಿದರು.
ತಾಲೂಕಿನ ಬೇಲಿಮಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ, ಮಹಿಳಾ ಗ್ರಾಮ ಸಭೆಯಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು.ಬೇಲಿಮಲ್ಲೂರು ಗ್ರಾ.ಪಂ. ವ್ಯಾಪ್ತಿಗೆ ಸೇರುವ ಕೋಟೆಮಲ್ಲೂರು, ಕೋಟೆಮಲ್ಲೂರು ತಾಂಡಗಳಿಂದ ಆಗಮಿಸಿದ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಮತ್ತು ಮಹಿಳಾ ಒಕ್ಕೂಟದ ಸದಸ್ಯರಿಗೆ ಗ್ರಾ.ಪಂ. ವತಿಯಿಂದ ಆಯೋಜಿಸಲಾಗಿದ್ದ "ಮಹಿಳಾ ಗ್ರಾಮಸಭೆ "ಯಲ್ಲಿ ಅವರು ಮಾಹಿತಿ ನೀಡಿದರು.
ಸ್ತ್ರೀಶಕ್ತಿ ಸಂಘಗಳ ಸದಸ್ಯರು ನಿಮ್ಮ ಗ್ರಾಮಗಳ ವಿವಿಧ ಕೇರಿ ಮತ್ತು ಸುತ್ತಮುತ್ತ ವಾಸಿಸುವವರಿಗೆ ಪ್ಲಾಸ್ಟಿಕ್ ಉಪಯೋಗಿಸದಂತೆ ತಿಳಿಸಬೇಕು. ಬಾಲ್ಯವಿವಾಹ ತಡೆಗಟ್ಟುವಲ್ಲಿ ನಿಮ್ಮಗಳ ಪಾತ್ರ ಮಹತ್ವದ್ದಾಗಿದೆ. ಮದ್ಯಪಾನ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸ ಮಹಿಳೆಯವರು ಮಾಡಬೇಕು. ನೀರನ್ನು ಮಿತವಾಗಿ ಬಳಸಬೇಕು. ಬೇಸಿಗೆ ಹಿನ್ನೆಲೆ ಸಾಂಕ್ರಾಮಿಕ ರೋಗಗಳ ತಡೆಯಲು ನೀರನ್ನು ಕುದಿಸಿ, ಆರಿಸಿ ಕುಡಿಯಬೇಕು ಎಂದ ಅವರು, ಗ್ರಾಪಂ ವತಿಯಿಂದ ಎಸ್ಸಿ-ಎಸ್ಟಿ ಮಕ್ಕಳಿಗೆ ಶಿಕ್ಷಣಕ್ಕೆ ಸಿಗುದ ಸಹಾಯಧನ, ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ತಿಳಿಸಿದರು.ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ. ಕಮಲಮ್ಮ, ಉಪಾಧ್ಯಕ್ಷರು, ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ವಿವಿಧ ಗ್ರಾಮಗಳ ಸಂಘಟನೆಗಳ ಸದಸ್ಯರು, ಗ್ರಾಪಂ.ಸಿಬ್ಬಂದಿ ಇದ್ದರು. ಬಿಲ್ ಕಲೆಕ್ಟರ್ ಟಿ.ಕೆ.ಲೋಕೇಶ್ ಸ್ವಾಗತಿಸಿದರು. ಗ್ರಂಥಪಾಲಕ ಎಸ್.ಕೃಷ್ಣರಾವ್ ವಂದಿಸಿದರು.
- - - -3ಎಚ್.ಎಲ್.ಐ2ಜೆಪಿಜಿ:ಹೊನ್ನಾಳಿ ತಾಲೂಕು ಬೇಲಿಮಲ್ಲೂರು ಗ್ರಾ.ಪಂ.ನಲ್ಲಿ ನಡೆದ ಮಹಿಳಾ ಗ್ರಾಮ ಸಭೆಯಲ್ಲಿ ಪಿಡಿಒ ಪರಮೇಶ್ವರಪ್ಪ ಕೊಳೂರ ಮಾತನಾಡಿದರು.