ಸಾರಾಂಶ
ಶಾಲಾ ಮಕ್ಕಳ ಪ್ರತಿಭಾ ಕಾರಂಜಿಗೆ, ಗ್ರಾಮಸ್ಥರ ಪ್ರೋತ್ಸಾಹ, ಸಹಕಾರ ದೊಡ್ಡ ಮಟ್ಟದಲ್ಲಿ ದೊರೆತ್ತಿದ್ದು, ಕರ್ನಾಟಕ ರಾಜೋತ್ಸವ ಹಬ್ಬದ ಸಂಭ್ರಮದಂತೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕರು ಲವಲವಿಕೆಯಿಂದ ಭಾಗವಹಿಸುತ್ತಿರುವುದು ಹೆಮ್ಮೆ ಎನ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ ಪಾಟೀಲ್ ಶ್ಲಾಘಿಸಿದರು.
ಕನ್ನಡಪ್ರಭ ವಾರ್ತೆ ಆನವಟ್ಟಿ
ಶಾಲಾ ಮಕ್ಕಳ ಪ್ರತಿಭಾ ಕಾರಂಜಿಗೆ, ಗ್ರಾಮಸ್ಥರ ಪ್ರೋತ್ಸಾಹ, ಸಹಕಾರ ದೊಡ್ಡ ಮಟ್ಟದಲ್ಲಿ ದೊರೆತ್ತಿದ್ದು, ಕರ್ನಾಟಕ ರಾಜೋತ್ಸವ ಹಬ್ಬದ ಸಂಭ್ರಮದಂತೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕರು ಲವಲವಿಕೆಯಿಂದ ಭಾಗವಹಿಸುತ್ತಿರುವುದು ಹೆಮ್ಮೆ ಎನ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ ಪಾಟೀಲ್ ಶ್ಲಾಘಿಸಿದರು.ಬುಧವಾರ ಜಡೆ ಹೋಬಳಿಯ, ತುಮರಿಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಮಂತ್ರಿ ಎಸ್. ಮಧು ಬಂಗಾರಪ್ಪ ಅವರು ಮಕ್ಕಳ ಕಲಿಕೆಗೆ ಹಾಗೂ ಪ್ರತಿಭೆಗಳನ್ನು ಹೊರಹೊಮ್ಮಿಸಲು ಸಾಕಾಷ್ಟು ಪ್ರೋತ್ಸಾಹದಾಯಕ ಕಾರ್ಯಕ್ರಮ ರೂಪಿಸುತ್ತಿದ್ದಾರೆ ಎಂದರು.ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗೇಗೌಡ, ತುಮರಿಕೊಪ್ಪ ಸರ್ಕಾರಿ ಶಾಲೆಗೆ ನೂರು ವರ್ಷ ತುಂಬುತ್ತಿದ್ದು, ಮುಂದಿನ ದಿನಗಳಲ್ಲಿ ಶತಮಾನೋತ್ಸವ ಸಮಾರಂಭ ಆಚರಿಸಲಾಗುವುದು ಎಂದು ಭರವಸೆ ನೀಡಿದರು.
ಮಕ್ಕಳು ಮಾಡಿದ್ದ ಮಣ್ಣಿನ ಮಾದರಿಗಳಲ್ಲಿ ನವಿಲಿನ ಮಾದರಿ, ನೋಡುಗರನ್ನು ಸೆಳೆದಿತ್ತು. ಛದ್ಮಾವೇಷ, ಅಭಿನಯ ಗೀತೆ, ಪ್ರಾಣಿ-ಪಕ್ಷಿಗಳ ಮಿಮಿಕ್ರಿ, ಪ್ರಬಂಧ, ಧಾರ್ಮಿಕ ಪಠಣೆ, ಕಂಠಪಾಠ, ಆಶುಭಾಷಣ ಸೇರಿಂದತೆ ಮಕ್ಕಳ ಪ್ರತಿಭೆ ಗುರುತಿಸುವಂತಹ ಸ್ಪರ್ಧೆಗಳು ನಡೆದವು.ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಾರ್ತ್ಯಪ್ಪ, ಮುಖ್ಯ ಶಿಕ್ಷಕ ಮೃತ್ಯುಂಜಯ ಗೌಡ, ಶಿಕ್ಷಣ ಸಂಯೋಜಕ ಅರುಣ್ ಕುಮಾರ್, ಸಿಆರ್‌ಪಿ ರಾಜು ಗಂಜೇರ್, ವಿವಿಧ ಶಿಕ್ಷಕರ ಸಂಘದ ಸದಸ್ಯರಾದ ಕೆ.ಸಿ ಶಿವಕುಮಾರ್, ಗಣಪತಿ, ಪ್ರಕಾಶ್ ಮಡ್ಲೂರ್, ಕುಮಾರ್, ಓಂಕಾರ ಇದ್ದರು.