ನೀರು ಬಳಕೆಗಾಗಿ ಪ್ರತಿ ಮನೆಯಲ್ಲೂ ಮೀಟರ್ ಅಳವಡಿಕೆ ಮುಖ್ಯ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Mar 29 2025, 12:33 AM IST

ನೀರು ಬಳಕೆಗಾಗಿ ಪ್ರತಿ ಮನೆಯಲ್ಲೂ ಮೀಟರ್ ಅಳವಡಿಕೆ ಮುಖ್ಯ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ನೀರಿನ ಬಳಕೆಗಾಗಿ ಪ್ರತಿ ಮನೆಯಲ್ಲೂ ಮೀಟರ್ ಅಳವಡಿಸುವುದು ಬಹಳ ಮುಖ್ಯವಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ತರೀಕೆರೆ ಸರ್ಕಾರಿ ಪ್ರಥಮ ದರ್ಜೆ.ಕಾಲೇಜಿನಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ, ತರೀಕೆರೆ

ನೀರಿನ ಬಳಕೆಗಾಗಿ ಪ್ರತಿ ಮನೆಯಲ್ಲೂ ಮೀಟರ್ ಅಳವಡಿಸುವುದು ಬಹಳ ಮುಖ್ಯವಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಿ.ಎಂ. ಉಷಾ ಯೋಜನೆ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ 21 ನೇ ಶತಮಾನದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳು : ಸವಾಲುಗಳು ಮತ್ತು ಅವಕಾಶಗಳು ವಿಷಯ ಕುರಿತು ನಡೆದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ನೀರಿನ ಮಿತ ಹಾಗೂ ಜಲ ಸಂರಕ್ಷಣೆ ಕುರಿತು ಮಾತನಾಡಿದ ಅವರು ಪೇಟೆಂಟ್ ಕುರಿತಾಗಿ ಇರುವ ಸಮಸ್ಯೆಗಳ ಬಗ್ಗೆ ತಿಳಿಸಿ, ಬಾಸುಮತಿ ಅಕ್ಕಿ, ಅರಿಶಿನಗಳ ಪೇಟೆಂಟ್‌ ನ್ನು ಭಾರತ ಉಳಿಸಿಕೊಂಡಿಸಿದ್ದರ ಹೇಳಿದರು.ಕಾಲೇಜಿನ ಫಲಿತಾಂಶ ಉತ್ತಮವಾಗಿದ್ದು ಇದರಿಂದ ತಮಗೆ ಸಂತೋಷವಾಗಿದೆ. ಸದಾ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಮತ್ತು ಕಾಲೇಜಿಗೆ ಹೊಸ ಕಟ್ಟಡಗಳನ್ನು ಮಂಜೂರು ಮಾಡಿಸುವ ಭರವಸೆ ನೀಡಿದರು.

ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ರಸಾಯನಶಾಸ್ತ್ರ ಸ್ನಾತಕೋತ್ತರ ವಿಭಾಗ ಪ್ರೊ. ಜೆ.ಮಂಜಣ್ಣ ಸಂಕಿರಣದ ಮುಖ್ಯಾಂಶಗಳ ಬಗ್ಗೆ ಪ್ರಸ್ತಾಪಿಸಿ ಉಪಯುಕ್ತ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ವೇಟ್ರಿವೇಲ್ ನಾಗಾರ್ಜುನ, ಡಾ. ಅಗಲ್ಯಾ.ವಿ ಪ್ರಸ್ತುತ ಭಾರತದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ವಿಷಯದಲ್ಲಿ ಹೊರಹೊಮ್ಮುತ್ತಿರುವ ಪ್ರವೃತ್ತಿಗಳು ಹಾಗೂ ಅವುಗಳನ್ನು ನಿರ್ವಹಿಸುವ ವಿಧಾನ, ಅದರ ಬಗ್ಗೆ ಕಾನೂನಾತ್ಮಕ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಗಳ ಮೂಲಕ ಉಪನ್ಯಾಸದಲ್ಲಿ ಪ್ರಸ್ತುತಪಡಿಸಿದರು.ಕಾಲೇಜು ಪ್ರಾಂಶುಪಾಲ ಡಾ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಚಾರ ಸಂಕಿರಣದ ಅವಶ್ಯಕತೆಯನ್ನು ಉದಾಹರಣೆಗಳ ಮೂಲಕ ಮನವರಿಕೆ ಮಾಡಿದರು.

ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜುಗಳ ಉಪನ್ಯಾಸಕರು ಪ್ರಬಂಧಗಳನ್ನು ಮಂಡಿಸಿದರು. ಕುಮಾರಿ ಹರ್ಷಿತಾ , ಡಾ.ಶಿವರುದ್ರಪ್ಪ, ದತ್ತಾತ್ರೇಯ. ಐಕ್ಯೂಎ ಸಿ ಸಂಚಾಲಕರಾದ ಪ್ರೊಫೆಸರ್ ಕಿರಣ್ , ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.28ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ದ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಡಾ.ಮಂಜುನಾಥ್ ಇದ್ದರು.