ಹೃದಯ ಆರೋಗ್ಯ ಹದಗೆಟ್ಟರೆ ಸುಧಾರಿಸುವುದು ಸುಲಭದ ಮಾತಲ್ಲ: ಡಾ.ಶಿವಕುಮಾರ

| Published : Oct 02 2024, 01:01 AM IST / Updated: Oct 02 2024, 01:02 AM IST

ಹೃದಯ ಆರೋಗ್ಯ ಹದಗೆಟ್ಟರೆ ಸುಧಾರಿಸುವುದು ಸುಲಭದ ಮಾತಲ್ಲ: ಡಾ.ಶಿವಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನ ದೇಹದ ಅಂಗಗಳಲ್ಲಿ ಪ್ರಮುಖಖವಾಗಿ ಹೃದಯವು ಒಂದು ಅಂಗವಾಗಿದೆ.

ಹೂವಿನಹಡಗಲಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಪತಂಜಲಿ ಯೋಗ ಚಾರಿಟೇಬಲ್ ಟ್ರಸ್ಟ್, ಮಲ್ಲಿಗೆ ಯೋಗಾ ಚಾರಿಟೇಬಲ್ ಟ್ರಸ್ಟ್, ಜೆಸಿಐ ಹಡಗಲಿ, ಬೀಚಿ ಬೆಂಬಲಿಗರ ಬಳಗದ ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆ ಕುರಿತು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಘೋಷ ವಾಕ್ಯಗಳೊಂದಿಗೆ ಜಾಗೃತಿ ಮೂಡಿಸುತ್ತಾ, ಮ್ಯಾರಥಾನ್ ಮಾಡಲಾಯಿತು.ಪಟ್ಟಣದ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ, ಮಾನವ ಸರಪಳಿ ಮಾಡಿ, ಹೃದಯದ ಕಾಳಜಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ವೈದ್ಯ ಡಾ.ಶಿವಕುಮಾರ ಮಾತನಾಡಿ, ಮನುಷ್ಯನ ದೇಹದ ಅಂಗಗಳಲ್ಲಿ ಪ್ರಮುಖಖವಾಗಿ ಹೃದಯವು ಒಂದು ಅಂಗವಾಗಿದೆ. ಇದು ಹದಗೆಟ್ಟರೆ ಸುಧಾರಿಸುವುದು ಸುಲಭದ ಮಾತಲ್ಲ. ಹಾಗಾಗಿ ಹೃದಯವನ್ನು ಜೋಪಾನ ಮಾಡೋಣ ಎಂದರು.

ವೈದ್ಯ ಡಾ.ಲಕ್ಷ್ಮಣ ಲಮಾಣಿ ಮಾತನಾಡಿ, ದೇಶದ ಆಸ್ತಿಯಾಗಿರುವ ಯುವಕರು ಪ್ರಸ್ತುತ ದಿನಗಳಲ್ಲಿ ಅತಿ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಯುವಕರು ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕೆಂದು ಹೇಳಿದರು.

ವೈದ್ಯ ಡಾ.ಪ್ರಕಾಶ ಅಟವಾಳಗಿ, ವೈದ್ಯ ಡಾ.ವೀರೇಶ, ಇಂದುಮತಿ ಮಾತನಾಡಿದರು.

ಎಸ್‌.ಬಿ. ಪಾಟೀಲ್, ಡಾ.ಸೋಮಶೇಖರ, ಡಾ.ಉಮೇಶ ಜೆ.ಡಿ., ಡಾ.ವೀರೇಶ್, ಡಾ.ಕವಿತಾ, ಡಾ.ಕೀರ್ತಿ, ರಫಿನಾ, ಕೋಡಿಹಳ್ಳಿ ಕೊಟ್ರೇಶ, ಹಿರಿಯ ಆರೋಗ್ಯ ನಿರೀಕ್ಷಕ ಶಿವಕುಮಾರ, ಬಸವರಾಜ, ಶಿವಪ್ಪ, ವಿರೂಪಾಕ್ಷಪ್ಪ, ಶ್ರೀನಿವಾಸಲು ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.