ಚನ್ನಪಟ್ಟಣ: ತಮ್ಮ ಕುಟುಂಬ ಮತ್ತು ಜೀವದ ಹಂಗನ್ನು ತೊರೆದು ೩೫ ವರ್ಷ ಸಾವನ್ನು ಬೆನ್ನಿಗೆ ಕಟ್ಟಿಕೊಂಡು ಸೇವೆ ಮಾಡುವ ಸೈನಿಕರೇ ದೇಶದ ರಕ್ಷಕರು. ದೇಸಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ತಿಳಿಸಿದರು

ಚನ್ನಪಟ್ಟಣ: ತಮ್ಮ ಕುಟುಂಬ ಮತ್ತು ಜೀವದ ಹಂಗನ್ನು ತೊರೆದು ೩೫ ವರ್ಷ ಸಾವನ್ನು ಬೆನ್ನಿಗೆ ಕಟ್ಟಿಕೊಂಡು ಸೇವೆ ಮಾಡುವ ಸೈನಿಕರೇ ದೇಶದ ರಕ್ಷಕರು. ದೇಸಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ತಿಳಿಸಿದರು.

ಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮತ್ತು ರೇಷ್ಮೆನಾಡು ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದ ವೇಳೆ ಜಿಲ್ಲೆಯ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಮಾತನಾಡಿದ ಅವರು,

ದೇಶಕ್ಕೆ ಅನ್ನದಾತ ಮತ್ತು ಸೈನಿಕ ಇಬ್ಬರು ಎರಡು ಕಣ್ಣುಗಳಿದ್ದಂತೆ ಅನ್ನದಾತ ದೇಶದ ಜನರಿಗೆ ಆಹಾರ ನೀಡಿ ಜೀವದಾನ ಮಾಡಿದರೆ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ನಮ್ಮ ದೇಶದ ಜನರ ಪ್ರಾಣ ಕಾಯುತ್ತಿದ್ದಾರೆ. ಇಂತಹ ದೇಶ ರಕ್ಷಕರನ್ನು ಸ್ಮರಿಸಿ ಗೌರವಿಸುವುದು ಹೆಮ್ಮೆಯ ವಿಚಾರ ಎಂದರು.

ಇಂದು ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಾರೆ. ಉದ್ಯಮಿಗಳ ಮಕ್ಕಳು ಉದ್ಯಮಿಯಾಗುತ್ತಾರೆ. ಇತರ ಪೋಷಕರು ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್, ಪೊಲೀಸ್ ಆಗಬೇಕು ಎಂದು ಬಯಸುತ್ತಾರೆ. ಆದರೆ ನಮ್ಮ ದೇಶ ಸೇವೆಗೆ ಗ್ರಾಮೀಣ ರೈತರ ಮಕ್ಕಳೆ ಹೆಚ್ಚು ಸೇವೆ ಮಾಡುತ್ತಿದ್ದಾರೆ. ಮುಂದಿನ ಯುವಪೀಳಿಗೆ ದೇಶ ರಕ್ಷಣೆಗೆ ಕಂಕಣ ತೊಡಬೇಕಿದೆ ಎಂದರು.

ನಿವೃತ್ತ ಯೋಧ ರಾಂಪುರ ಮಂಜುಳಾ ಬೋಳೇಗೌಡ ಮಾತನಾಡಿ, ದೇಶ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು ಮನೆಗೊಬ್ಬ ಅನ್ನದಾತ ಇದ್ದಂತೆ ಮನೆಗೊಬ್ಬ ದೇಶ ರಕ್ಷಣೆಗೆ ನಿಂತಾಗ ಮಾತ್ರ ನಮ್ಮ ದೇಶ ಮತ್ತಷ್ಟು ಸುರಕ್ಷಿತವಾಗಿರಲಿದೆ. ದೇಶ ಸೇವೆ ಮಾಡುವುದೇ ನಮ್ಮ ಅದೃಷ್ಟ, ಎಲ್ಲರಿಗೂ ಆ ಸೌಭಾಗ್ಯ ಸಿಗುವುದಿಲ್ಲ ಎಂದರು.

ಇದೇ ವೇಳೆ ನಿವೃತ್ತ ಯೋಧರಾದ ಶಿವಣ್ಣ, ರಾಜಪ್ಪ, ನಂದೀಶ್ , ನಿಂಗೇಗೌಡ, ಬಸವರಾಜು, ಟಿ.ಕೆ.ಪ್ರಭುಲಿಂಗ, ಮಹೇಶ್, ಬಿ. ರಾಮಯ್ಯ, ದೇವೇಗೌಡ, ಗುರುರಾಜ್ ಎಂ.ಪಿ, ರಾಮಕೃಷ್ಣಯ್ಯ, ಓಂಕಾರೇಶ್ವರ ಬಿ.ಎಚ್., ರಮೇಶ್, ಧನಂಜಯ್ಯ, ಶಿವರಾಮೇಗೌಡ, ಮಂಜುನಾಥ್, ಶಿವರಾಮೇಗೌಡ, ಶಿವಸ್ವಾಮಿ, ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ.ವೀರೇಗೌಡರ, ನಿವೃತ್ತ ಪ್ರಾಂಶುಪಾಲ ನಿಂಗೇಗೌಡ, ನಗರಸಭಾ ಮಾಜಿ ಸದಸ್ಯ ಶಬ್ಬೀರ್ ಉಲ್ಲಾಬೇಗ್, ಲಾಯರ್ ಶಿವರಾಜೇಗೌಡ, ಸಮಾಜ ಸೇವಕ ಎಲೇಕೇರಿ ರವೀಶ್, ಸಿ ಚನ್ನಪ್ಪ, ಪಿ. ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ವಾಸಿಲ್ ಆಲಿಖಾನ್, ಸಿ.ವಿ.ರಾಮು ಇತರರಿದ್ದರು.

ಪೊಟೋ೨೮ಸಿಪಿಟಿ೨:

ಚನ್ನಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮತ್ತು ರೇಷ್ಮೆನಾಡು ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.