ಮಹಿಳೆಯರಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ: ವಿನೋದ್ ಗೌಡ

| Published : Aug 24 2024, 01:21 AM IST

ಸಾರಾಂಶ

It is our duty to protect women: Vinod Gowda

ಕನ್ನಡಪ್ರಭ ವಾರ್ತೆ ಶಹಾಪುರ

ಸಮಾಜದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ವಿನೋದ್ ಗೌಡ ಮಾಲಿಪಾಟೀಲ್ ಹೇಳಿದರು. ದೋರನಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಹಿಳಾ ವೈದ್ಯರಿಂದ ರಾಖಿ ಕಟ್ಟಿಸಿಕೊಂಡು ಅವರು ಮಾತನಾಡಿದರು.

ಗ್ರಾ.ಪಂ. ಉಪಾಧ್ಯಕ್ಷ ಈರಣ್ಣ ಕಸನ್ ಮಾತನಾಡಿ, ಇತ್ತೀಚೆಗೆ ಕೋಲ್ಕತ್ತಾದಲ್ಲಿ ಮಹಿಳಾ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಘಟನೆ ನೋವು ತಂದಿದೆ. ಇಂತಹ ಪ್ರಕರಣಗಳನ್ನು ಮರುಕಳಿಸದಂತೆ ಎಚ್ಚರವವಹಿಸಿ ಸಮಾಜದಲ್ಲಿ ಮಹಿಳೆಯರನ್ನು ರಕ್ಷಣೆಯ ಜೊತೆಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವಲ್ಲಿ ಮುಂದಾಗಬೇಕು ಎಂದು ಹೇಳಿದರು.

ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಮಾತನಾಡಿದರು. ಡಾ. ಭಾಗ್ಯಶ್ರೀ ಪಾಟೀಲ್, ಡಾ. ಅರುಣ ಪಾಟೀಲ್, ನಿಖಿತಾ, ಆಶಾ ಕಾರ್ಯಕರ್ತರು, ಸಿಬ್ಬಂದಿಗಳು ಹಾಗೂ ಗ್ರಾಮದ ಮುಖಂಡರು ಮತ್ತು ಯುವಕರು ಇದ್ದರು.

--------

23ವೈಡಿಆರ್5:ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಹಿಳಾ ವೈದ್ಯರು ಗ್ರಾಮದ ಸಹೋದರರಿಗೆ ರಾಖಿ ಕಟ್ಟಿ ಸಿಹಿ ಹಂಚಿದರು.