ಸಾರಾಂಶ
ಡಾ.ಬಿ.ಆರ್ ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 75 ನೇ ಗಣರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ಕಡೂರುಸಂವಿಧಾನ ಭಾರತ ದೇಶದ ಪವಿತ್ರ ಗ್ರಂಥವಾಗಿದ್ದು ಅದಕ್ಕೆ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಶುಕ್ರವಾರ ತಾಲೂಕು ಆಡಳಿತದಿಂದ ಡಾ.ಬಿ.ಆರ್ ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 75 ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಹರು, ಮಹಾತ್ಮ ಗಾಂಧೀಜಿಯವರಿದ್ದ ಸಂವಿಧಾನ ರಚನಾ ಸಮಿತಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಭಾರತ ಹಲವು ಭಾಷೆಗಳ ವೈವಿಧ್ಯತೆ ಯಲ್ಲಿದ್ದ ಪ್ರದೇಶಗಳನ್ನು ಪ್ರಜಾಪ್ರಭುತ್ವದ ಗಣತಂತ್ರ ವ್ಯವಸ್ಥೆಗೆ ತರುವ ನಿಟ್ಟಿನಲ್ಲಿ ಅಂದಿನ ನಾಯಕರು ಸಮಾನತೆಯ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣದ ಆಶಯದಿಂದ ಎಲ್ಲ ರಾಜ್ಯಗಳನ್ನು ಒಗ್ಗೂಡಿಸಿ 1950ರ ಜನವರಿ 26 ರಂದು ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಘೋಷಿಸಲಾಯಿತು. ಲಕ್ಷಾಂತರ ನಾಯಕರ ಹೋರಾಟಗಳಿಂದ ವೈಜ್ಞಾನಿಕ, ಸಾಮಾಜಿಕ, ಆರ್ಥಿಕವಾಗಿ ಭಾರತ ಇಂದು ಬಲಾಢ್ಯ ದೇಶವಾಗಿದೆ ಎಂದರು. ಆದರೆ ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನವನ್ನು ಬೇರೆ ಬೇರೆ ರಾಜಕೀಯ ಪಕ್ಷಗಳ ಮುಖಂಡರು ಸಂವಿಧಾನವನ್ನು ಬದಲಿಸುತ್ತೇವೆ, ಸುಡುತ್ತೇವೆ ಎಂಬ ಮಾತುಗಳು ದೇಶದ್ರೋಹಿ ಹೇಳಿಕೆ. ಅಂತವರಿಗೆ ಕಾನೂನಿನಡಿ ಶಿಕ್ಷೆ ಆಗಬೇಕು ಎಂದರು.
ಶಿಕ್ಷಕರು ಮಕ್ಕಳಿಗೆ ನನ್ನ ದೇಶ, ನನ್ನ ಭಾರತ ಎಂಬ ಅಭಿಮಾನ ಮತ್ತು ಗೌರವ ಮೂಡಿಸುವ ಕೆಲಸ ಮಾಡಬೇಕು. ಆದರೆ ಎಲ್ಲೋ ಒಂದು ಕಡೆ ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಗಂಭೀರತೆ ಮರೆತಂತಿರದೆ ಜಾಗೃತಿ ವಹಿಸಬೇಕು ಎಂದರು.ಧ್ವಜಾರೋಹಣ ನೆರವೇರಿಸಿದ ತಾಲೂಕು ದಂಡಾಧಿಕಾರಿ ಕವಿರಾಜ್ ಮಾತನಾಡಿ, ನಮ್ಮದೇ ಆದ ಸಂವಿಧಾನ ರಚನೆಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಪಂಚದ ವಿವಿಧ ರಾಷ್ಟ್ರಗಳ ಸಂವಿಧಾನಗಳ ಅಧ್ಯಯನ ಮಾಡಿ 1950 ಜನವರಿ 26 ರಂದು ಸಂವಿಧಾನ ರಚನೆ ಒಕ್ಕೂಟದ ವ್ಯವಸ್ಥೆಯಲ್ಲಿರುವಂತೆ ಆರ್ಟಿಕಲ್ಸ್ 395 ಆರ್ಟಿಕಲ್ಸ್ ಮತ್ತು 482ಕ್ಕೆ ವಿಭಾಗವನ್ನು ವಿಸ್ತರಿಸಿ ಇಂದು 75ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಸಂವಿಧಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯ ನಿರ್ವಹಣೆ ಜೊತೆಯಲ್ಲಿ 1950ರ ಜನವರಿ 25ರಂದು ಚುನಾವಣಾ ಆಯೋಗ ಕೂಡ ರಚನೆಯಾಗಿ ಸಾರ್ವತ್ರಿಕ ಚುನಾವಣೆಗಳಲ್ಲಿ ಜನಪ್ರತಿನಿಧಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ, ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಕಾಯ್ದೆ ಮತ್ತು ನಿಯಮ ತಿಳಿಸಲಾಗಿದೆ. ರಾಜ್ಯ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಜನಪ್ರತಿನಿಧಿಗಳು ಆಡಳಿತ ಯಂತ್ರದ ಮೂಲಕ ಜಾರಿಗೊಳಿಸಲಾಗುವುದು. ಈ ನಿಟ್ಟಲ್ಲಿ ಕಡೂರನ್ನು ಮಾದರಿ ತಾಲೂಕನ್ನಾಗಿ ಮಾಡಲು ಶಾಸಕರೊಂದಿಗೆ ಕೈಜೋಡಿಸಿ ಕೆಲಸ ಮಾಡೋಣ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ತಾಲೂಕಿನ ಅಭಿವೃದ್ಧಿ ಹಿನ್ನೆಲೆಯಲ್ಲಿ ಶಾಸಕರೊಂದಿಗೆ ಕ್ಷೇತ್ರಕ್ಕೆ ಸರ್ಕಾರದಿಂದ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರಿಗಳು ಕೈಜೋಡಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಸಾಮಾನ್ಯ ಕುಟುಂಬದಿಂದ ಬಂದಿರುವ ಶಾಸಕರಾದ ಕೆ.ಎಸ್. ಆನಂದ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಂಡ ಕನಸನ್ನು ನನಸು ಮಾಡಲು ಅಧಿಕಾರಿಗಳು ಕೈಜೋಡಿಸಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜು ನಾಯ್ಕ, ತಾಪಂ ಕಾರ್ಯನಿರ್ವಾಹಕ ಸಿ. ಆರ್. ಪ್ರವೀಣ್ , ಬೀರೂರು ಪೋಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಮುಖಂಡರಾದ ಆಸಂದಿ ಕಲ್ಲೇಶ್, ಎನ್ ಬಶೀರ್ ಸಾಬ್, ಕಂದಾಯಾಧಿಕಾರಿ ರವಿಕುಮಾರ್, ಲಿಂಗರಾಜ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ---ಬಾಕ್ಸ್ ಸುದ್ದಿ---ತಾಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ದೇಶಾಭಿಮಾನ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಟ್ಟಣದ ನಿವೇದಿತಾ ಬುದ್ದಿ ಮಾಂಧ್ಯ ಶಾಲೆ ಮಕ್ಕಳು ಕಿವಿ ಕೇಳದಿದ್ದರೂ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದುದು ನೋಡುಗರ ಗಮನ ಸೆಳೆಯಿತು. ಶಿಕ್ಷಕರ ಸನ್ನೆಯಂತೆನರ್ತಿಸಿದ್ದು ಕಣ್ಣು, ಕಿವಿ,ಬಾಯಿ ಸರಿ ಇದ್ದವರನ್ನೂ ನಾಚಿಸುವಂತಿತ್ತು.
---ಕೋಟ್---ಭಾರತದಲ್ಲಿ ವಿದ್ಯಾಭ್ಯಾಸ ಮಾಡಿ ಇಂಗ್ಲೆಂಡ್, ಅಮೆರಿಕ, ಜರ್ಮನಿಯಂತಹ ದೇಶಗಳಿಗೆ ದುಡಿಮೆಗೆ ಹೋದರೆ ಆತನಿಂದ ಸಮಾಜಕ್ಕೆ ಮತ್ತು ದೇಶಕ್ಕೆ ಯಾವುದೇ ಲಾಭ ಇರುವುದಿಲ್ಲ. ನಾನು ಭಾರತದಲ್ಲಿಯೇ ಇದ್ದು, ವಿಜ್ಞಾನಿಯಾಗಿ, ಇಂಜಿನಿಯರ್ ಆಗಿ ದೇಶಕ್ಕಾಗಿ ದುಡಿದು ಕೆಲಸ ಮಾಡುತ್ತೇನೆ ಎಂಬ ಭಾವನೆಯನ್ನು ಶಿಕ್ಷಕರು ಮಕ್ಕಳಲ್ಲಿ ಮೂಡಿಸಬೇಕು
-.ಶಾಸಕ ಕೆ.ಎಸ್ . ಆನಂದ್.26ಕೆಕೆಡಿಯು1, 1ಎ,
ಕಡೂರು ತಾಲೂಕು ಆಡಳಿತದಿಂದ ಡಾ.ಬಿ.ಆರ್ ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 75 ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಕೆ.ಎಸ್ ಆನಂದ್ ಮಾತನಾಡಿದರು.