ಸಾರಾಂಶ
ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಸಾಮಾಜಿಕ ಅಸಮಾನತೆ, ರಾಜಕೀಯ ಅಸಮಾನತೆ ಸರಿದೂಗಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿ ರಚಿಸಿ, ದೇಶದ ಎಲ್ಲ ಬಡವರು, ದಲಿತರು, ಮಹಿಳೆಯರು, ಸುರಕ್ಷಿತವಾಗಿ ಬದುಕಲು ಅತ್ಯಂತ ಉತ್ತಮ ಸಂವಿಧಾನವನ್ನು ರಚಿಸಿ 1949 ನವೆಂಬರ್ 26ರಂದು ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ
- ಜಿಲ್ಲಾ ಪಚಾಯಿತಿ ಮಾಜಿ ಅಧ್ಯಕ್ಷ ಕೆ. ಮರೀಗೌಡ ಸಲಹೆ---------
ಕನ್ನಡಪ್ರಭ ವಾರ್ತೆ ಮೈಸೂರುಸಂವಿಧಾನವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ ಹೇಳಿದರು.
ನಿವೇದಿತನಗರದಲ್ಲಿರುವ ರೋಟರಿಯ ದಿ ಆಕ್ಮಿ ಸ್ಕೂಲ್ನಲ್ಲಿ ನಡೆದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಮಹಾತ್ಮಗಾಂಧಿ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿ ಹುತಾತ್ಮರಾದವರನ್ನು ನಾವು ಇಂದು ಸ್ಮರಿಸಬೇಕು. ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಸಾಮಾಜಿಕ ಅಸಮಾನತೆ, ರಾಜಕೀಯ ಅಸಮಾನತೆ ಸರಿದೂಗಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿ ರಚಿಸಿ, ದೇಶದ ಎಲ್ಲ ಬಡವರು, ದಲಿತರು, ಮಹಿಳೆಯರು, ಸುರಕ್ಷಿತವಾಗಿ ಬದುಕಲು ಅತ್ಯಂತ ಉತ್ತಮ ಸಂವಿಧಾನವನ್ನು ರಚಿಸಿ 1949 ನವೆಂಬರ್ 26ರಂದು ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂದರು.
ಮಕ್ಕಳು ಈ ದೇಶದ ಸಂಪತ್ತಾಗಿದ್ದು, ಯುವಶಕ್ತಿಯನ್ನು ದೇಶದ ಸಂಪತ್ತನ್ನಾಗಿ ಮಾಡಿದಾಗ ಈ ದೇಶ ಸುಭದ್ರವಾಗಿರುತ್ತದೆ ಎಂದ ಅವರು ನಾಡಿನ ಜನತೆಗೆ 75ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.ರೋಟರಿ ಅಧ್ಯಕ್ಷರಾದ ವೆಂಕಟೇಶ್ವರರಾವ್, ಆರ್. ಅರುಣ್ ಸಿಂಗ್, ಪ್ರಾಂಶುಪಾಲೆ ಆರ್. ಸುಭಾಷಿಣಿ, ರಾಜು ಮುರಳೀಧರ್, ಶಾಲಿನಿ, ರವಿ, ಪ್ರಕಾಶ್ ಇದ್ದರು.
ಶಾಲಾ ಮಕ್ಕಳು ವಿವಿಧ ವೇಷಭೂಷಣಗಳನ್ನು ಧರಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.