ಕನ್ನಡ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು

| Published : Nov 02 2025, 04:15 AM IST

ಕನ್ನಡ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆ ಸದೃಡವಾಗಿ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ನಡ ಭಾಷೆ ಸದೃಡವಾಗಿ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕನ್ನಡ ನಾಡಿನಲ್ಲಿ ಮಾತೃಭಾಷೆಯಾದ ಕನ್ನಡಕ್ಕೆ ಪ್ರಥಮ ಆದ್ಯತೆ ಎಂಬ ನೀತಿಯನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಇದಕ್ಕೆ ಪೂರಕವಾಗಿ ಎಲ್ಲ ಹಂತಗಳಲ್ಲಿ ಕನ್ನಡದ ಅನುಷ್ಠಾನಕ್ಕೆ ಮುಂದಾಗಿದೆ. ಈ ನೆಲದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಪರಂಪರೆ ಆರಾಧಿಸುತ್ತಿದ್ದು, ಅದನ್ನು ಉಳಿಸಿ ಬೆಳೆಸು ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಿದೆ. ಆಲಮಟ್ಟಿ ಜಲಾಶಯವನ್ನು 519.6 ಮೀಟರ್‌ನಿಂದ 524.256 ಮೀ. ಎತ್ತರಿಸುವುದರಿಂದ ಮುಳುಗಡೆಯಾಗುವ ರೈತರ ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ ಖುಷ್ಕಿ ಒಣಭೂಮಿ ಎಕರೆಗೆ ₹30 ಲಕ್ಷ ಪರಿಹಾರ ನೀಡಲು ಸಚಿವ ಸಂಪುಟದಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡು ಆದೇಶ ಹೊರಡಿಸಿದೆ. ಅಗತ್ಯವಿರುವ ಹೆಚ್ಚುವರಿ ₹75 ಸಾವಿರ ಕೋಟಿ ಮೊತ್ತವನ್ನು ನಾಲ್ಕು ಆರ್ಥಿಕ ವರ್ಷದಲ್ಲಿ ಭರಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಕ್ಕೆ ಶೀಘ್ರದಲ್ಲಿಯೇ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಅವಶ್ಯವಿರುವ ವೈದ್ಯಕೀಯ ಕಾಲೇಜು ಕಟ್ಟಡ, ಬಾಲಕರ, ಬಾಲಕಿಯರ ಹಾಸ್ಟೇಲ್‌ಗಳು, ಬೋಧಕ ಸಿಬ್ಬಂದಿ ವಸತಿ ಗೃಹಗಳು ಹಾಗೂ ಇತರೆ ಪೂರಕ ಕಾಮಗಾರಿಗಳಿಗೆ ಅವಶ್ಯವಿರುವ ₹450 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಲಾಗಿದೆ. ಜಿಲ್ಲೆಯಲ್ಲಿ ಕೈಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಶೇ.99.56ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಮುಧೋಳ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ₹210 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ನವನಗರದ ಯುನಿಟ್-1 ಮತ್ತು 2ರಲ್ಲಿ ಮೂಲಸೌಲಭ್ಯಕ್ಕಾಗಿ ₹18.48 ಕೋಟಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ. ಪ್ರಸಿದ್ಧ ಐತಿಹಾಸಿಕ ತುಳಸಿಗೇರಿ ಆಂಜನೇಯ ದೇವಸ್ಥಾನ ಮೂಲಸೌಲಭ್ಯ ಅಭಿವೃದ್ಧಿಗೆ ₹1.70 ಕೋಟಿ ವೆಚ್ಚದ ಕ್ರೀಯಾ ಯೋಜನೆ ರೂಪಿಸಲಾಗುತ್ತಿದೆ. ಬೀಳಗಿ ತಾಲೂಕಿನ ಹೆರಕಲ್ ಬ್ಯಾರೇಜ್‌ ಪ್ರದೇಶದಲ್ಲಿ ಜಂಗಲ್ ರೆಸಾರ್ಟ್‌, ವಾಟರ್ ಸ್ಪೋರ್ಟ್ಸ್‌ ಮತ್ತು ಬೋಟಿಂಗ್ ಪಕ್ಷಿ ವೀಕ್ಷಣಾ ಕೇಂದ್ರ, ರಾಕ್ ಕ್ಲೈಂಬಿಂಗ್ ಚಟುವಟಿಕೆ ಸೇರಿದಂತೆ ಚಿಕ್ಕ ಸಂಗಮದಲ್ಲಿ ಸಂಗಮೇಶ್ವರ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಈ ವೇಳೆಯಲ್ಲಿ ಸಮೂಹ ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಪಥ ಸಂಚಲನದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಗ್ಯಾಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅನೀಲಕುಮಾರ ದಡ್ಡಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್‌ ವಾಸುದೇವಸ್ವಾಮಿ ಸೇರಿದಂತೆ ಇತರರು ಇದ್ದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಗೋವಿಂದರಾಮ ಕರವಾ, ಜ್ಯೋತಿ ಪಾಟೀಲ (ಹಿಂದೂಸ್ತಾನಿ ಸಂಗೀತ), ಚಂದ್ರಕಾಂತ ಆಲೂರ, ಶ್ಯಾಮಲಾ ಲಕ್ಷ್ಮೇಶ್ವರ (ಸಂಗೀತ), ಅನಿತಾ ಪಾಟೀಲ (ಸಾಹಿತ್ಯ), ನಾಗಪ್ಪ ಕತ್ತಿ (ವಚನ ಸಾಹಿತ್ಯ), ತಪ್ಪಣ್ಣ ರಾಮವಾಡಗಿ (ಗಇರ್ ಗಮ್ಮತ್ತ), ಲಲತವ್ವ ಮೇತ್ರಿ, ಬೌರವ್ವ ಬಾಗನ್ನವರ, ದೊಡ್ಡವ್ವ ಹುಗ್ಗಿ (ಚೌಡಕಿಪದ), ಸಿದ್ದಪ್ಪ ಕಂಚು, ಹನಮಪ್ಪ ಭಜಂತ್ರಿ, ಉಮ್ಮಣ್ಣಪ್ಪ ಯರಗಲ್ಲ (ಕರಡಿ ಮಜಲು), ಲಚ್ಚಮ್ಮ ಖಜ್ಜಿಡೋಣಿ, ಚಂದ್ರಶೇಖರ ನಡುವಿನಮನಿ (ಭಜನಾಪದ), ಹಣಮಂತ ಕಾಲತಿಪ್ಪಿ (ಹಾರ್ಮೋನಿಯಂ), ಮನೋಹರ ಮಾಯಾಚಾರ್ಯ (ಶಿಲ್ಪಕಲೆ), ಬಸವರಾಜ ಕಡೆಮನಿ, ಲಕ್ಷ್ಮಣ ಕತ್ತಿ, ಶರಣಬಸಪ್ಪ ಖಂಡೋಜಿ (ನಾಟಕ), ಮಲ್ಲಯ್ಯ ಸಂಬಾಳಮಠ, ಸೈದಪ್ಪ ತಳಗೇರಿ, ಅನಂತ ಬಬಲೇಶ್ವರ (ಹವ್ಯಾಸಿ ರಂಗಭೂಮಿ), ರೇಷ್ಮಾ ಅಳವಂಡಿ (ವೃತ್ತಿ ರಂಗಭೂಮಿ), ಶಿವಾನಂದ ಮಾಳಿ, ಭೀಮನಗೌಡ ಗೌಡರ (ರಂಗಭೂಮಿ), ಕೃಪಾ ಸುಂಕದ, ಉದಯಕುಮಾರ ಅಂಗಡಿ (ಕ್ರೀಡೆ), ಶಿವಲಿಂಗಪ್ಪ ರಾಂಪೂರ, ಹುಚ್ಚಪ್ಪ ಯಂಡಿಗೇರಿ (ಸಮಾಜ ಸೇವೆ), ಶಂಕರ ಹನಗಂಡಿ, ಅಲ್ಲಾಸಾಬ ಯಾದವಾಡ, ರೋಹಿತ ವಿ.ಕೆ (ಸಮಾಜ ಸೇವೆ), ಸಂಗಪ್ಪ ಜಡಿಮಠ, ವಿವೇಕಾನಂದ ಗರಸಂಗಿ, ಮಲ್ಲಿಕಾರ್ಜುನ ತುಂಗಳ, ಶ್ರೀನಿವಾಸ ಬಬಲಾದಿ, ಅನಿರುದ್ದ ಗಲಗಲಿ (ಪತ್ರಿಕಾ ಕ್ಷೇತ್ರ್ರ), ಅಶೋಕ ಚಿತ್ರಗಾರ (ವೈದ್ಯಕೀಯ), ಪ್ರಶಾಂತಕುಮಾರ ಹಂಚಾಟಿ (ಸಾಮಾಜಿಕ ಮತ್ತು ಆರ್ಥಿಕ), ಡಾ.ವಿ.ಎಚ್.ಮೂಲಿಮನಿ (ಜೀವರಸಾಯನ ಶಾಸ್ತ್ರ), ಬಸವರಾಜ ಕಾಂಬಳೆ (ರೈತ ಮುಖಂಡ), ಅಜೀತ ಮಣ್ಣಿಕೇರಿ (ಶಿಕ್ಷಣ), ಪುಲಕೇಶಿ ಪಾವಟಿ (ನ್ಯಾಯಾಂಗ), ರಾಮಣ್ಣ ಬಿರಾದಾರ (ಪೊಲೀಸ್), ಸಂಗಪ್ಪ ಹಂಡರಗಲ್ಲ (ಭಜನಾಪದ) ಈ ಎಲ್ಲರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.