ಸಾರಾಂಶ
ತುರುವೇಕೆರೆ: ಕ್ರೀಡೆಯನ್ನು ಮೈಗೂಡಿಸಿಕೊಂಡರೆ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದು ಎಸ್‌ಬಿಐ ವ್ಯವಸ್ಥಾಪಕ ಸುರೇಶ್ ಹೇಳಿದರು.ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಕ್ರೀಡೆಯಲ್ಲಿ ಯಶಸ್ವಿಯಾದರೆ ನಿಮ್ಮ ದೇಹದಾಢ್ಯ ಉತ್ತಮಗೊಳ್ಳಲಿದೆ. ಆರೋಗ್ಯವೂ ಉತ್ತಮಗೊಳ್ಳಲಿದೆ ಅಲ್ಲದೆ, ಉತ್ತಮ ಸಾಧನೆ ಮಾಡಿದಲ್ಲಿ ಕ್ರೀಡಾ ಕ್ಷೇತ್ರದಿಂದ ಉದ್ಯೋಗವೂ ದೊರೆಯಲಿದೆ ಎಂದು ಹೇಳಿದರು. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಎಂಬುದು ಸಾಮಾನ್ಯ. ಗೆದ್ದ ಮಾತ್ರಕ್ಕೆ ಕೈಕಟ್ಟಿ ಕುಳಿತುಕೊಳ್ಳದೇ ಇನ್ನೂ ಉತ್ತಮ ಸಾಧನೆ ಮಾಡಲು ಮುಂದಾಗಬೇಕು. ಸೋತವರು ತಮ್ಮ ಸಾಧನೆಗೆ ಇನ್ನೂ ಶ್ರಮ ಅಗತ್ಯವಿದೆ ಎಂಬುದನ್ನು ಮನದಟ್ಟು ಮಾಡಿಕೊಂಡು ಸಾಧಿಸಲು ಛಲತೊಡಬೇಕು ಎಂದರು. ಕ್ರೀಡೆಯಲ್ಲಿ ಭಾಗವಹಿಸಿದ ನೂರಾರು ವಿದ್ಯಾರ್ಥಿಗಳಿಗೆ ಶ್ರೀ ಸ್ವಾಮಿ ವಿವೇಕಾನಂದ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀಹರಿಗೌಡ ಕ್ಯಾಪ್ ಮತ್ತು ಟಿ-ಷರ್ಟ್‌ಗಳನ್ನು ವಿತರಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.ಕ್ರೀಡಾಕೂಟದಲ್ಲಿ ಸುಮಾರು ೧೫ ಕಾಲೇಜಿನ ನಾಲ್ಕು ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎಲ್.ಅನಂತರಾಮು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ಹರಿಕಾರನಹಳ್ಳಿ ಮಂಜಪ್ಪ, ಶ್ರೀ ಸ್ವಾಮಿ ವಿವೇಕಾನಂದ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀಹರಿಗೌಡ, ಪ್ರಾಂಶುಪಾಲ ಆರ್.ವಿ.ನಟರಾಜ್, ಎಸ್.ಎಂ.ಕಾಂತರಾಜು, ಮಲ್ಲಿಕಾರ್ಜುನ್, ಪ್ರಕಾಶ್, ಗಣೇಶ್ ಕುಮಾರ್, ಮಹಮದ್ ರಯಾನ್, ಎಚ್.ಪಿ ಸುರೇಶ್, ಸಿ.ಟಿ.ರಾಜು, ಮುನಿರಾಜು, ಮಮತಾ, ಮಧುಶ್ರೀ, ಉಪನ್ಯಾಸಕ ನಂಜೇಗೌಡ, ಶಹನಜ್ ಬಾನು, ಕೋಮಲಾ ಮತ್ತಿತರರಿದ್ದರು.