ಸಾರಾಂಶ
ದಾಬಸ್‍ಪೇಟೆ: ಕಾರ್ತಿಕ ಮಾಸದಲ್ಲಿ ದೀಪ ಹಚ್ಚಿ ಮನುಷ್ಯ ತನ್ನಲ್ಲಿರುವ ಅಜ್ಞಾನ ಹೋಗಲಾಡಿಸಿಕೊಂಡಂತೆ, ಅಂತರಾತ್ಮವನ್ನೂ ಶುದ್ಧೀಕರಣಗೊಳಿಸಿಕೊಳ್ಳಬೇಕು. ನಾಗರಿಕತೆ ಬೆಳೆದಂತೆ ಗ್ರಾಮಗಳು ವೃದ್ಧಾಶ್ರಮಗಳು ಆಗುತ್ತಿರುವುದು ಬೇಸರದ ಸಂಗತಿ ಎಂದು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ದಾಬಸ್‍ಪೇಟೆ: ಕಾರ್ತಿಕ ಮಾಸದಲ್ಲಿ ದೀಪ ಹಚ್ಚಿ ಮನುಷ್ಯ ತನ್ನಲ್ಲಿರುವ ಅಜ್ಞಾನ ಹೋಗಲಾಡಿಸಿಕೊಂಡಂತೆ, ಅಂತರಾತ್ಮವನ್ನೂ ಶುದ್ಧೀಕರಣಗೊಳಿಸಿಕೊಳ್ಳಬೇಕು. ನಾಗರಿಕತೆ ಬೆಳೆದಂತೆ ಗ್ರಾಮಗಳು ವೃದ್ಧಾಶ್ರಮಗಳು ಆಗುತ್ತಿರುವುದು ಬೇಸರದ ಸಂಗತಿ ಎಂದು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸೋಂಪುರ ಹೋಬಳಿಯ ಹಳೇ ನಿಜಗಲ್ ಗ್ರಾಮದಲ್ಲಿರುವ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಕಾರ್ತೀಕ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ನಗರಪಟ್ಟಣಗಳ ಆಕರ್ಷಣೆಗೆ ಹಳ್ಳಿಗರ ವಲಸೆಯೂ ಹೆಚ್ಚುತ್ತಿದೆ. ಹಾಗೆಯೇ ನಗರಗಳ ಪರಿಸರವೂ ಹಾಳುಗುತ್ತಿದೆ. ಗ್ರಾಮ ಸಂಸ್ಕೃತಿ ಉಳಿಸಲು ಬಿ.ಪಿ.ಪ್ರಕಾಶ್ ಮತ್ತು ಕುಟುಂಬದವರು ಹರಳೂರು ಜಾತ್ರೆ ಹಾಗೂ ಅಷ್ಟಲಕ್ಷ್ಮೀ ದೇವಾಲಯದಲ್ಲಿ ವಿಶೇಷ ದೀಪೋತ್ಸವ ಆಚರಿಸುತ್ತಿರುವುದು ಧಾರ್ಮಿಕತೆಯ ಪ್ರತೀಕ. ಯಾರ ದುಡಿಮೆಯಲ್ಲಿ ಪರಿಶ್ರಮ, ಕಾಯಕ ನಿಷ್ಠೆ ಮತ್ತು ಹೃದಯ ಶ್ರೀಮಂತಿಕೆ ಇರುತ್ತದೋ ಅವರಿಗೆ ಮಾತ್ರ ದೇವರು ಒಳಿಯುತ್ತಾನೆ ಎಂದು ಹೇಳಿದರು.ದೇವಾಲಯದ ಮುಖ್ಯಸ್ಥ ಬಿ.ಪಿ.ಪ್ರಕಾಶ್ ಮಾತನಾಡಿ, ಕಾರ್ತಿಕ ದೀಪೋತ್ಸವ ಎಂದರೆ ಭಕ್ತಿಯೆಂಬ ಹಣತೆ ಹಚ್ಚುವ ಕಾರ್ಯಕ್ರಮ. ನಮ್ಮ ಪೂರ್ವಜರು ಹೊಲದಲ್ಲಿ ಉಳುಮೆ ಮಾಡುವ ವೇಳೆಯಲ್ಲಿ ಲಕ್ಷ್ಮಿ ವಿಗ್ರಹ ದೊರೆತಿತ್ತು. ಇದೀಗ ಅದೇ ವಿಗ್ರಹವನ್ನು ಪ್ರತಿಷ್ಠಾಪಿಸಿ ಕಳೆದ ಕೆಲ ವರ್ಷಗಳ ಹಿಂದೆ ದೇವಾಲಯ ನಿರ್ಮಾಣ ಮಾಡಿದ್ದೆವು. ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ದೀಪೋತ್ಸವ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತೇವೆ. ಅದೇ ರೀತಿ ಗ್ರಾಮಸ್ಥರ, ಭಕ್ತರ ಸಹಕಾರ ಉತ್ತಮವಾಗಿದೆ. ವಿಶೇಷ ಹೂವಿನ ಅಲಂಕಾರ ಈ ವರ್ಷದ ವಿಶೇಷ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೂಡಿಕೆ ತಜ್ಞ ರುದ್ರಮೂರ್ತಿ, ವಂಡರ್ ಲಾ ಉಪ ವ್ಯವಸ್ಥಾಪಕ ರುದ್ರೇಶ್, ಅಮರಜ್ಯೋತಿ, ಪ್ರಭು, ತುಮಕೂರಿನ ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷೆ ಶಿವಲಿಂಗಮ್ಮ, ಹರಳೂರು ಪ್ರಕಾಶ್, ಹೇಮಲತಾ ಪ್ರಕಾಶ್, ಅಕ್ಷತಾ ರೂಪೇಶ್, ಆಕಾಶವಾಣಿ ಕಲಾವಿದ ಅರುಣ್ ಚಂದ್ರಶೇಖರ್, ಉಮಾದೇವಿ, ಶೋಭಾ, ಅದಿತ್, ಅರ್ಚಕರಾದ ನಾರಾಯಣಾಚಾರ್ ಹಾಗೂ ಭಕ್ತರು ಹಾಜರಿದ್ದರು.ಪೋಟೋ 1 :
ಸೋಂಪುರ ಹೋಬಳಿಯ ಹಳೇ ನಿಜಗಲ್ ಗ್ರಾಮದಲ್ಲಿರುವ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಕಾತೀಕ ದೀಪೋತ್ಸವಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ದೇವಾಲಯದ ಮುಖ್ಯಸ್ಥ ಬಿ.ಪಿ.ಪ್ರಕಾಶ್, ಹೂಡಿಕೆ ತಜ್ಞ ರುದ್ರಮೂರ್ತಿ, ವಂಡರ್ ಲಾ ಉಪ ವ್ಯವಸ್ಥಾಪಕ ರುದ್ರೇಶ್ ಇತರರಿದ್ದರು.;Resize=(128,128))