ಭಾರತ ಸಂವಿಧಾನ ಅರ್ಥೈಸಿಕೊಳ್ಳೋದು ವಿದ್ಯಾರ್ಥಿಗಳ ಕರ್ತವ್ಯ

| Published : Nov 30 2023, 01:15 AM IST

ಸಾರಾಂಶ

ಮುಖ್ಯ ಅತಿಥಿ, ಕುವೆಂಪು ವಿಶ್ವವಿದ್ಯಾಲಯದ ರಾ.ಸೇ.ಯೋಜನೆ ಸಂಯೋಜಕ ಡಾ.ನಾಗರಾಜ ಪರಿಸರ ಮಾತನಾಡಿ, ಸಾಧನೆ ಸೋಮಾರಿಯ ಸೊತ್ತಲ್ಲ. ಅದು ಸಾಧಕನ ಸೊತ್ತು. ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಮಾಜಿಕ ಹೊಣೆಗಾರಿಕೆ ಇಟ್ಟುಕೊಂಡು ಮುನ್ನಡೆಯಬೇಕು ಎಂದರು. ಇಂದಿನ ಔಪಚಾರಿಕ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ಜೀವನಾನುಭವವನ್ನು ನೀಡುವಲ್ಲಿ ಸೋತಿದೆ. ಎನ್ಎಸ್ಎಸ್ ಯುವಕರಿಗೆ ತಮ್ಮನ್ನು ತಾವು ಅರ್ಥೈಸಿಕೊಳ್ಳಲು ಮತ್ತು ಸಮಾಜವನ್ನು ಅರ್ಥಮಾಡಿಕೊಂಡು ಮುನ್ನಡೆಯಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಾನವ ಮಾನವನಾಗಿ ಬದುಕಲು ಸಾಧ್ಯವಾಗಿದ್ದು, ಅಸಮಾನ ಭಾರತವನ್ನು ಸಮಾನವಾಗಿ ಕಟ್ಟಿದ್ದು, ಎಲ್ಲರಿಗೂ ಎಲ್ಲ ಅವಕಾಶಗಳನ್ನು ಕೊಟ್ಟಿರುವುದು ನಮ್ಮ ಸಂವಿಧಾನ. ಹಾಗಾಗಿ, ಇಂದಿನ ಯುವಜನತೆ ಭಾರತ ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಿಬಿಆರ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅನಲ ಹೇಳಿದರು.

ನಗರದ ಬಾಪೂಜಿ ನಗರದ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಮತ್ತು ಎನ್ಎಸ್ಎಸ್ ಪುನರ್ಮನನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನವು ಪ್ರತಿಯೊಬ್ಬರಿಗೂ ಸ್ವಾಭಿಮಾನವನ್ನು, ನೈತಿಕ ಸ್ಥೈರ್ಯವನ್ನು ತಂದುಕೊಟ್ಟು ಬದುಕಿನ ಬಗ್ಗೆ ಆಶಾಭಾವಯನ್ನು ಮೂಡಿಸಿದೆ. ಪೋಷಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ ಹಾಗೆ ಇಂದಿನ ಮಕ್ಕಳು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿಲ್ಲ. ಅದಾಗಬಾರದು. ದೇಶ, ದೇಶದ ಧ್ವಜ, ಗುರು ಹಿರಿಯರಿಗೆ ಗೌರವ ಕೊಡಬೇಕು ಎಂದ ಅವರು, ಸಂವಿಧಾನ ನಮಗೆ ಎಲ್ಲವನ್ನೂ ನೀಡಿದ್ದರೂ ಅದು ವಿದ್ಯಾರ್ಥಿಗಳಿಗೆ ಇನ್ನೂ ಸರಿಯಾಗಿ ಅರ್ಥ ಆಗದಿರುವುದು ದುರಂತ ಎಂದು ವಿಷಾದಿಸಿದರು.

ಮುಖ್ಯ ಅತಿಥಿ, ಕುವೆಂಪು ವಿಶ್ವವಿದ್ಯಾಲಯದ ರಾ.ಸೇ.ಯೋಜನೆ ಸಂಯೋಜಕ ಡಾ.ನಾಗರಾಜ ಪರಿಸರ ಮಾತನಾಡಿ, ಸಾಧನೆ ಸೋಮಾರಿಯ ಸೊತ್ತಲ್ಲ. ಅದು ಸಾಧಕನ ಸೊತ್ತು. ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಮಾಜಿಕ ಹೊಣೆಗಾರಿಕೆ ಇಟ್ಟುಕೊಂಡು ಮುನ್ನಡೆಯಬೇಕು ಎಂದರು.

ಇಂದಿನ ಔಪಚಾರಿಕ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ಜೀವನಾನುಭವವನ್ನು ನೀಡುವಲ್ಲಿ ಸೋತಿದೆ. ಎನ್ಎಸ್ಎಸ್ ಯುವಕರಿಗೆ ತಮ್ಮನ್ನು ತಾವು ಅರ್ಥೈಸಿಕೊಳ್ಳಲು ಮತ್ತು ಸಮಾಜವನ್ನು ಅರ್ಥಮಾಡಿಕೊಂಡು ಮುನ್ನಡೆಯಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಚನ್ನಪ್ಪ ವಹಿಸಿದ್ದರು. ಎನ್.ಯು.ಆರ್ ಹೆಗ್ಗಡೆ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಎನ್ ಎಸ್ ಎಸ್ ಅಧಿಕಾರಿಗಳಾದ ಸೋಮಶೇಖರ್, ರೇಷ್ಮಾ, ಸುಧಾಕರ್ ಮತ್ತು ಪ್ರಾಧ್ಯಾಪಕರಾದ ರಾಜಕುಮಾರ್, ರಾಜಶ್ರಿ, ಡಾ. ಅಣ್ಣಪ್ಪ ಎನ್. ಮಳೀಮಠ್, ವಿದ್ಯಾರ್ಥಿಗಳಾದ ಅವಿನಾಶ್, ದೀಕ್ಷಾ, ಭುವನೇಶ್ವರಿ, ಪಾಂಡು ಇದ್ದರು.

- - - -ಫೋಟೋ:

ಸಂವಿಧಾನ ದಿನಾಚರಣೆ -ಎನ್ಎಸ್ಎಸ್ ಪುನರ್ಮನನ ಕಾರ್ಯಕ್ರಮವನ್ನು ಸಿಬಿಆರ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಆ. ಅನಲ ಉದ್ಘಾಟಿಸಿದರು.