ವೃದ್ಧರ ಸೇವೆ ಮಾಡುವುದು ನಾಗರಿಕ ಸಮಾಜದ ಹೊಣೆ

| Published : Feb 16 2025, 01:47 AM IST

ಸಾರಾಂಶ

ಮುಪ್ಪಿನಲ್ಲಿ ಹಿರಿಯರು ಮತ್ತು ವೃದ್ಧರ ಸೇವೆ ಮಾಡಿ ಸಮಾಜದಲ್ಲಿ ಅವರನ್ನು ಗೌರವಯುತವಾಗಿ ನೋಡಿಕೊಳ್ಳುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ ಎಂದು ಸಮಾಜ ಸೇವಕ ಕಮಲೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ದಾನಿಗಳು ವೃದ್ಧಾಶ್ರಮಗಳಿಗೆ ಕೈಲಾದ ಸಹಾಯ ಮಾಡಬೇಕು. ಈ ದಿನ ನಾನು ಉಪಹಾರ ನೀಡಿ ಕಿರು ಸಹಾಯ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುತ್ತೇನೆ. ವೃದ್ಧರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣೆಗೆ ಸಹಾಯ ಮಾಡುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಮುಪ್ಪಿನಲ್ಲಿ ಹಿರಿಯರು ಮತ್ತು ವೃದ್ಧರ ಸೇವೆ ಮಾಡಿ ಸಮಾಜದಲ್ಲಿ ಅವರನ್ನು ಗೌರವಯುತವಾಗಿ ನೋಡಿಕೊಳ್ಳುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ ಎಂದು ಸಮಾಜ ಸೇವಕ ಕಮಲೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಜೆ.ಹೊಸಹಳ್ಳಿ- ಗಂಗೂರು ಗ್ರಾಮದಲ್ಲಿ ಶುಕ್ರವಾರ ಬೆಳಕು ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಬೆಳಗಿನ ಉಪಹಾರ ನೀಡಿ ಮಾತನಾಡಿದ ಅವರು, ನಿವೃತ್ತ ಶಿಕ್ಷಕಿ ಗೀತಾ ಅವರು ವೃದ್ಧಾಶ್ರಮ ತೆರೆದು ಅಂಗವಿಕಲತೆ ಹೊಂದಿರುವ ಹಾಗೂ ವೃದ್ಧರ ಆರೈಕೆ ಮಾಡುತ್ತಿರುವುದು ಪುಣ್ಯದ ಕಾಯಕವಾಗಿದೆ. ದಾನಿಗಳು ವೃದ್ಧಾಶ್ರಮಗಳಿಗೆ ಕೈಲಾದ ಸಹಾಯ ಮಾಡಬೇಕು. ಈ ದಿನ ನಾನು ಉಪಹಾರ ನೀಡಿ ಕಿರು ಸಹಾಯ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುತ್ತೇನೆ. ವೃದ್ಧರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣೆಗೆ ಸಹಾಯ ಮಾಡುವುದಾಗಿ ತಿಳಿಸಿದರು.