ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಭಾಷೆಯು ಅದರದೇ ಆದಂತಹ ವಿಶೇಷ ಲಿಪಿ, ಸಂಸ್ಕೃತಿ ಹಾಗೂ ವೈವಿಧ್ಯತೆಯೊಂದಿಗೆ ಇಂದು ಶ್ರೀಮಂತ ಭಾಷೆ ಎನಿಸಿಕೊಂಡಿದೆ. ಇಂತಹ ಶ್ರೀಮಂತಿಕೆ ಹೊಂದಿರುವ ಭಾಷೆಯನ್ನು ಹಾಗೂ ಅದರ ವೈವಿಧ್ಯತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲ ಕನ್ನಡಿಗರ ಕರ್ತವ್ಯ ಎಂದು ನಗರದ ಅನನ್ಯ ಇಂಟರ್‌ ನ್ಯಾಷನಲ್ ಶಾಲೆಯ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಹೇಳಿದರು.

ಹಾವೇರಿ: ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಭಾಷೆಯು ಅದರದೇ ಆದಂತಹ ವಿಶೇಷ ಲಿಪಿ, ಸಂಸ್ಕೃತಿ ಹಾಗೂ ವೈವಿಧ್ಯತೆಯೊಂದಿಗೆ ಇಂದು ಶ್ರೀಮಂತ ಭಾಷೆ ಎನಿಸಿಕೊಂಡಿದೆ. ಇಂತಹ ಶ್ರೀಮಂತಿಕೆ ಹೊಂದಿರುವ ಭಾಷೆಯನ್ನು ಹಾಗೂ ಅದರ ವೈವಿಧ್ಯತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲ ಕನ್ನಡಿಗರ ಕರ್ತವ್ಯ ಎಂದು ನಗರದ ಅನನ್ಯ ಇಂಟರ್‌ ನ್ಯಾಷನಲ್ ಶಾಲೆಯ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಹೇಳಿದರು.

ನಗರದ ಹೊರವಲಯದ ಕಾಗಿನೆಲೆ ರಸ್ತೆಯಲ್ಲಿರುವ ಅನನ್ಯ ಇಂಟರ್‌ ನ್ಯಾಷನಲ್ ಸಿಬಿಎಸ್‌ಇ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕನ್ನಡ ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೇಶಕ್ಕೆ ಕನ್ನಡ ಭಾಷೆ ಹಾಗೂ ಕರ್ನಾಟಕದ ಕೊಡುಗೆ ಅಪಾರ. ಜಗತ್ತು ಹಿಂದಿರುಗಿ ನೋಡುವಂತೆ ಪ್ರಾಕೃತಿಕ ಸೌಂದರ್ಯ, ಸಂಸ್ಕೃತಿ, ಸಾಹಿತ್ಯ, ಹಬ್ಬಗಳು ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ನಮ್ಮ ಕರ್ನಾಟಕದ ಕನ್ನಡ ರಾಜ್ಯೋತ್ಸವದ ಹಬ್ಬ ಪ್ರತಿ ಕನ್ನಡಿಗರ ಹಬ್ಬ ಆಗಿರಬೇಕು. ಕರ್ನಾಟಕದಲ್ಲಿ ಅನೇಕ ಧರ್ಮಗಳು, ಜಾತಿಗಳು ಇದ್ದರೂ ಏಕತೆಯಿಂದ ಕನ್ನಡತನವನ್ನು ಪೂಜಿಸುತ್ತಾರೆ ಹಾಗೂ ಪ್ರೀತಿಸುತ್ತಾರೆ ಇದರಿಂದ ಕನ್ನಡದ ಶ್ರೀಮಂತಿಕೆ ಹಾಗೂ ಆ ಭಾಷೆಗಿರುವ ಮಹತ್ವ ತಿಳಿಯುತ್ತದೆ ಎಂದರು.ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ ಮಾತನಾಡಿ, ಹಾವೇರಿ ಜಿಲ್ಲೆ ಕರ್ನಾಟಕದ ಹೃದಯ ಭಾಗ ಪ್ರತಿ ರಂಗದಲ್ಲಿಯೂ ನಮ್ಮ ಜಿಲ್ಲೆ ಮುಂಚೂಣಿಯಲ್ಲಿದೆ. ಯಾಲಕ್ಕಿ ಕಂಪಿನ ನಾಡಿನಲ್ಲಿ ಅನನ್ಯ ಶಾಲೆಯಂತಹ ಸಿಬಿಎಸ್‌ಇ ಶಾಲೆ ವಿಜೃಂಭಣೆಯಿಂದ ಇಂದು ಕನ್ನಡ ಹಬ್ಬವನ್ನು ಮಾಡಿದ್ದು ಬಹುಶಃ ಜಿಲ್ಲೆಯ ಇತರೇ ಶಾಲೆಗಳಿಗೆ ಸ್ಫೂರ್ತಿ ಎಂದರು. ವ್ಯಾಪಾರಸ್ಥರು ಹಾಗೂ ಶಿಕ್ಷಣಪ್ರೇಮಿ ರಾಜೇಂದ್ರ ಸಜ್ಜನರ ಮಾತನಾಡಿ, ಮಕ್ಕಳಿಗೆ ಶಿಕ್ಷಣದಲ್ಲಿ ಕೇವಲ ಅಂಕಗಳನ್ನು ಗಳಿಸುವ ನಿಟ್ಟಿನಲ್ಲಿ ಶಿಕ್ಷಣವನ್ನು ಕೊಡುತ್ತಿರುವಾಗ ನಾಡಿನ ಸಂಸ್ಕೃತಿ ಹಾಗೂ ಕನ್ನಡತನದ ನಾಡ ಪ್ರೇಮವನ್ನು ಬೆಳೆಸಲು ಅನನ್ಯ ಶಾಲೆ ವಿಜೃಂಭಣೆಯಿಂದ ನಡೆಸುತ್ತಿರುವ ಈ ಕನ್ನಡ ಹಬ್ಬದ ಹೆಜ್ಜೆ ಸಮಾಜದಲ್ಲಿ ಎಲ್ಲರಿಗೂ ಮಾದರಿ ಎಂದರು.ಶಾಲೆಯ ಮಕ್ಕಳಿಂದ ನೃತ್ಯ ಭಾಷಣ, ಹಾಡುಗಳು, ರೂಪಕಗಳು, ಛದ್ಮವೇಷ, ರಂಗೋಲಿ ಹಾಗೂ ನಾಟಕ ಒಳಗೊಂಡಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಆಕರ್ಷಕ ಮೆರವಣಿಗೆ: ಕನ್ನಡ ಹಬ್ಬದ ನಿಮಿತ್ತ ಶೃಂಗಾರಗೊಂಡ ಚಕ್ಕಡಿಯಲ್ಲಿ ಗಣ್ಯರ ಸ್ವಾಗತ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಶಾಲೆಯ ಮುಖ್ಯದ್ವಾರದಿಂದ ಸಭಾಂಗಣದವರೆಗೂ ಮಕ್ಕಳು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಕನ್ನಡದ ಘೋಷಣೆಗಳನ್ನು ಉದ್ಘಾರಿಸುತ್ತಾ ಸಾಗಿದ್ದು ವಿಶೇಷವಾಗಿತ್ತು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಅವರ ತಾಯಿ ಪಾರ್ವತಮ್ಮ ಹಾವೇರಿ, ಕಾರ್ಯದರ್ಶಿ ಸೌಮ್ಯ ಹಾವೇರಿ, ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಶಂಕರ್ ಬಿಸರಳ್ಳಿ, ಮಂಜುಗೌಡ ಪಾಟೀಲ್, ನಾಗರಾಜ್ ಕ್ಯಾಬಳ್ಳಿ, ಪ್ರಾಂಶುಪಾಲರಾದ ಮಂಜುಳಾ ಎಂ, ಉಪ-ಪ್ರಾಂಶುಪಾಲರಾದ ಅಲ್ತಾಫ್ ಯತ್ನಳ್ಳಿ, ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.