ಸಾರಾಂಶ
ಕನ್ನಡಪ್ರಭ ವಾರ್ತೆ ನಿಡಗುಂದಿ ದೇಹದಲ್ಲಿ ಉಸಿರು ನಿಲ್ಲುವರೆಗೂ ಶಿಕ್ಷಕರ ಸೇವೆಗೆ ಸದಾ ಸಿದ್ಧನಿದ್ದೇನೆ. ಅವರ ಪ್ರೀತಿ, ಆಶೀರ್ವಾದ ಹಾಗೂ ಹಿರಿಯರ ತ್ಯಾಗದ ಫಲವಾಗಿ ರಾಜ್ಯಾಧ್ಯಕ್ಷನಾಗಲು ಸಾಧ್ಯವಾಗಿದೆ. ಹುದ್ದೆಗಳು ಜಾತಿ ಆಧಾರದಲ್ಲಿ ಸುಲಭವಾಗಿ ಸಿಗುತ್ತವೆ ಎನ್ನುವುದು ಸತ್ಯ. ಎಲ್ಲ ವ್ಯವಸ್ಥೆಗಳ ಮಧ್ಯ ತಮ್ಮೆಲ್ಲರ ಆಶೀರ್ವಾದದಿಂದ ಸ್ಥಾನ ಲಭಿಸಿದೆ ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ ಹೇಳಿದರು.
ಕನ್ನಡಪ್ರಭ ವಾರ್ತೆ ನಿಡಗುಂದಿದೇಹದಲ್ಲಿ ಉಸಿರು ನಿಲ್ಲುವರೆಗೂ ಶಿಕ್ಷಕರ ಸೇವೆಗೆ ಸದಾ ಸಿದ್ಧನಿದ್ದೇನೆ. ಅವರ ಪ್ರೀತಿ, ಆಶೀರ್ವಾದ ಹಾಗೂ ಹಿರಿಯರ ತ್ಯಾಗದ ಫಲವಾಗಿ ರಾಜ್ಯಾಧ್ಯಕ್ಷನಾಗಲು ಸಾಧ್ಯವಾಗಿದೆ. ಹುದ್ದೆಗಳು ಜಾತಿ ಆಧಾರದಲ್ಲಿ ಸುಲಭವಾಗಿ ಸಿಗುತ್ತವೆ ಎನ್ನುವುದು ಸತ್ಯ. ಎಲ್ಲ ವ್ಯವಸ್ಥೆಗಳ ಮಧ್ಯ ತಮ್ಮೆಲ್ಲರ ಆಶೀರ್ವಾದದಿಂದ ಸ್ಥಾನ ಲಭಿಸಿದೆ ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ ಹೇಳಿದರು.
ನಿಡಗುಂದಿಯ ಕಮದಾಳ ಪುನರ್ವಸತಿ ಕೇಂದ್ರದ ಮುದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಹಾಗೂ ಅಭಿಮಾನ ಬಳಗ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನನ್ನ ಬೆಳವಣಿಗೆಗೆ ಸಂಘದಲ್ಲಿ ಅನೇಕರು ಶಕ್ತಿಯನ್ನು ತುಂಬಿದ್ದಾರೆ. ಅವರ ನಂಬಿಕೆ ಪರಿಣಾಮ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ಪಡೆದಿರುವೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಡೆಯುತ್ತೇನೆ. ಸಿಎಂ ಸಿದ್ದರಾಮಯ್ಯನವರು ರಾಜ್ಯದ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಜತೆಗಿದ್ದಾರೆ. 6ನೇ ವೇತನ ಆಯೋಗದಲ್ಲಿ ಶೇ.30ರಷ್ಟು ಲಾಭವನ್ನು ಕೊಟ್ಟಿದ್ದಾರೆ. 7ನೇ ವೇತನ ಆಯೋಗದಲ್ಲಿ ₹ 10,508 ಕೋಟಿ, ಕಳೆದ ವೇತನ ಆಯೋಗದಲ್ಲಿ ಹತ್ತು ಸಾವಿರ ಕೋಟಿ ಕೊಟ್ಟಿದ್ದರು. ಭವಿಷ್ಯದಲ್ಲಿ ಡಿಗ್ರಿ ಮುಗಿಸಿದ 58 ಸಾವಿರ ಜನರಿಗೆ ಒಂದು ಇನ್‌ಕ್ರಿಮೆಂಟ್ ಕೊಡಿಸುವಲ್ಲಿ ₹ 130 ಕೋಟಿ ಹೊರೆಯಾಗುತ್ತದೆ. ಆದರೂ, ಆ ಕನಸನ್ನು ನನಸು ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಬಸವರಾಜ ಬಾಗೇನೂರ, ಅರ್ಜುನ್ ಲಮಾಣಿ, ಎಸ್.ಎಂ.ಲೋಕನ್ನವರ ಮಾತನಾಡಿ, ಜಾತಿ ವ್ಯವಸ್ಥೆಯಲ್ಲಿ ಬೆಂಗಳೂರಿನಲ್ಲಿ ಅಧಿಕಾರ ಪಡೆಯುವುದು ಸುಲಭದ ಮಾತಲ್ಲ. ಚಂದ್ರಶೇಖರ ನುಗ್ಲಿ ವಯಸ್ಸು ಚಿಕ್ಕದಾಗಿದ್ರೂ ಜಾತ್ಯಾತೀತವಾಗಿ ಬೆಳೆದು ಅಧಿಕಾರ ಪಡೆದುಕೊಂಡಿದ್ದಾರೆ. ಶಿಕ್ಷಕರ ಸಂಘದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿದ ಅವರು, ಸಂಘಟನಾ ಶಕ್ತಿ, ಎಲ್ಲರ ಪ್ರೀತಿಸುವ ಗುಣ ರಾಜ್ಯಾಧ್ಯಕ್ಷ ಸ್ಥಾನ ಪಡೆಯಲು ಸಹಕಾರಿಯಾಗಿದೆ ಎಂದರು.ಶಿಕ್ಷಕ ಬಸವರಾಜ ಹಂಚಲಿ ಮಾತನಾಡಿದರು. ಜಿಓಸಿಸಿ ಬ್ಯಾಂಕ್ ಅಧ್ಯಕ್ಷ ಆನಂದ ಗೌಡರ, ಮಾಗಡಿ ಮೂರ್ತಿ, ಶಹಂಶಾದ್ ಬೇಗಂ ಕನಕಗಿರಿ, ಮಗದುಮ್ ಮುಲ್ಲಾ, ಪ.ಪಂ ಸದಸ್ಯ ಶಿವಾನಂದ ಮುಚ್ಚಂಡಿ, ಎಂ.ಎಂ ಮುಲ್ಲಾ, ಸಂಗಮ, ಎಂ.ಎಸ್ ಮುಕಾರ್ತಿಹಾಳ, ಸಲಿಂ ದಡೇದ, ಚಂದ್ರಶೇಖರ ಕೋಳೇಕರ, ಮಹೇಶ ಗಾಳಪ್ಪಗೋಳ, ಪ.ಪಂ ಸದಸ್ಯ ಕರಿಯಪ್ಪ ಸಿಂದಗಿ, ಹನಮಂತ ಮಾಳಗೊಂಡ ಇತರರಿದ್ದರು.ನಿಡಗುಂದಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿಯವರಿಗೆ ಬೆಳ್ಳಿ ಗದೆ ನೀಡಿ ಗೌರವಿಸಲಾಯಿತು. ಜಿಲ್ಲಾ ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕ ಬಳಿಕ ನಿಡಗುಂದಿಗೆ ಆಗಮಿಸಿದ ಹಿನ್ನಲೆ ಹೊಸಬಸ್ ನಿಲ್ದಾಣದಿಂದ ಅದ್ಧೂರಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.-----
ಕೋಟ್ಖಾಲಿ ಹುದ್ದೆಗಳು, ಬಿಸಿಯೂಟ, ಮೊಟ್ಟೆ ದರ ಏರಿಸುವುದು ಸೇರಿದಂತೆ ಶಿಕ್ಷಕರ ಹಲವಾರು ಸಮಸ್ಯೆಗಳ ಪರಿಹಾರದ ಜತೆಗೆ ಸರ್ಕಾರ ಮಕ್ಕಳಿಗೆ ಉಚಿತ ಸಮಸ್ತ್ರದ ಹಾಗೂ ಪ್ರತಿ ಮಗುವಿಗೆ ಆರು ನೋಟ್ ಬುಕ್ ಕೊಡಿಸುವಲ್ಲಿ ಪ್ರಯತ್ನ ಮಾಡುತ್ತೇನೆ. ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿ ಶಾಲೆಯ ಶೌಚಾಲಯ ಸ್ವಚ್ಚತೆಗೊಳಿಸುವ ಕಾರ್ಯ ಮಾಡಿಸಬೇಕು. ತಾಲೂಕಿನ ಪ್ರತಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ.
ಚಂದ್ರಶೇಖರ ನುಗ್ಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ