ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರಾತ್ರಿಯಿಡೀ ಸುರಿದ ಮಳೆ

| Published : May 14 2024, 01:08 AM IST

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರಾತ್ರಿಯಿಡೀ ಸುರಿದ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ ಎಂಬುದಕ್ಕಿಂತ ಮಿತಿ ಮೀರಿ ಮಳೆ ಸದ್ದಿಲ್ಲದೆ ಇಡೀ ರಾತ್ರಿ ಸುರಿದಿದೆ.ಭಾನುವಾರ ಮಧ್ಯಾಹ್ನದ ವೇಳೆಗೆ ಮಲೆನಾಡಿನ ಹಲವೆಡೆ ಮಳೆ ಬಂದು ನಂತರ ಬಿಡುವು ನೀಡಿತು. ಆದರೆ, ಮಧ್ಯ ರಾತ್ರಿ ಇಡೀ ಜಿಲ್ಲೆಯಲ್ಲಿ ಆರಂಭವಾದ ಮಳೆ ಬೆಳಿಗ್ಗೆ 6.30ರವರೆಗೆ ನಿರಂತರವಾಗಿ ಒಂದೇ ಸಮನೆ ಬಂದಿತು. ಆಗಾಗ ಬಲವಾಗಿ ಬೀಸುತ್ತಿದ್ದ ಗಾಳಿ ವಿದ್ಯುತ್‌ ಸಂಪರ್ಕಕ್ಕೆ ಅಡಚಣೆ ಉಂಟು ಮಾಡಿತ್ತು.

ದಾರಿ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪ್ರವಾಸಿ ವಾಹನ । ಒಂದು ದಿನದ ಸರಾಸರಿ ವಾಡಿಕೆ ಬ್ರೇಕ್‌ ಮಾಡಿದ ಮಳೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ ಎಂಬುದಕ್ಕಿಂತ ಮಿತಿ ಮೀರಿ ಮಳೆ ಸದ್ದಿಲ್ಲದೆ ಇಡೀ ರಾತ್ರಿ ಸುರಿದಿದೆ.

ಭಾನುವಾರ ಮಧ್ಯಾಹ್ನದ ವೇಳೆಗೆ ಮಲೆನಾಡಿನ ಹಲವೆಡೆ ಮಳೆ ಬಂದು ನಂತರ ಬಿಡುವು ನೀಡಿತು. ಆದರೆ, ಮಧ್ಯ ರಾತ್ರಿ ಇಡೀ ಜಿಲ್ಲೆಯಲ್ಲಿ ಆರಂಭವಾದ ಮಳೆ ಬೆಳಿಗ್ಗೆ 6.30ರವರೆಗೆ ನಿರಂತರವಾಗಿ ಒಂದೇ ಸಮನೆ ಬಂದಿತು. ಆಗಾಗ ಬಲವಾಗಿ ಬೀಸುತ್ತಿದ್ದ ಗಾಳಿ ವಿದ್ಯುತ್‌ ಸಂಪರ್ಕಕ್ಕೆ ಅಡಚಣೆ ಉಂಟು ಮಾಡಿತ್ತು.ಭಾರಿ ಮಳೆಯಿಂದ ರಸ್ತೆ ಕಾಣದೆ ಟಿಟಿ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಶೃಂಗೇರಿ ತಾಲೂಕಿನ ಕುಂಚೇಬೈಲು ಗ್ರಾಮದ ಬಳಿ ನಡೆದಿದೆ. ವಿದ್ಯುತ್ ಕಂಬಕ್ಕೆ ಟಿಟಿ ವಾಹನ ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು ಅದೃಷ್ಟವಶಾತ್ ವಾಹನದಲ್ಲಿದ್ದ 9 ಜನ ಪ್ರಯಾಣಿಕರು ಪಾರಾಗಿದ್ದಾರೆ. ಟಿಟಿ ವಾಹನದಲ್ಲಿ 9 ಮಂದಿ ಹಾಸನದಿಂದ ಶೃಂಗೇರಿ ಕಡೆಗೆ ತೆರಳುತ್ತಿದ್ದರು. ಮಳೆ ಬರುತ್ತಿದ್ದ ಹಿನ್ನೆಲೆ ಚಾಲಕನಿಗೆ ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಗುದ್ದಿದ್ದಾನೆ. ವಿದ್ಯುತ್ ಸ್ಥಗಿತಗೊಂಡ ಹಿನ್ನಲೆ ಬಾರೀ ಅನಾಹುತ ತಪ್ಪಿದೆ.

ವಾಡಿಕೆಗೂ ಮೀರಿದ ಮಳೆ:

ಮೇ 13ರ ವಾಡಿಕೆ ಮಳೆ ಸರಾಸರಿ ಶೇ. 2.6 ಮಿ.ಮೀ. ಆದರೆ, ಈ ಬಾರಿ ಇದೇ ದಿನಾಂಕದಂದು ಸರಾಸರಿ ಶೇ. 22.9 ರಷ್ಟು ಮಳೆ ಬಂದಿದೆ. ಮಳೆ ಮಾಪನ ಇರುವ ಕೇಂದ್ರಗಳಲ್ಲಿ ದಾಖಲಾಗಿರುವ ಪ್ರಕಾರ ತರೀಕೆರೆ ತಾಲೂಕಿನ ಲಕ್ಕವಳ್ಳಿ ವಲಯದಲ್ಲಿ ದಾಖಲೆ ಮಳೆಯಾಗಿದೆ.

ಈ ಸಾಲಿನಲ್ಲಿ ಈವರೆಗೆ ಬಿದ್ದಿರುವ ಮಳೆ ಬಯಲುಸೀಮೆ ರೈತರಿಗೆ ತೃಪ್ತಕರವಾಗಿಲ್ಲ. ಹಾಗಾಗಿ ಹಿಂಗಾರು ಬಿತ್ತನೆಯಲ್ಲಿ ಹಿನ್ನೆಡೆಯಾಗಿದೆ. ಫಸಲಿಗೆ ಬಂದಿರುವ ಅಡಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಸರಬರಾಜು ಮಾಡ ಲಾಗುತ್ತಿದೆ. ಆದರೆ, ಭಾನುವಾರ ರಾತ್ರಿ ಬಿದ್ದ ಮಳೆ ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಕಾರಣ, ಮಳೆ ಅವಲಂಬಿತ ಕೃಷಿಯನ್ನು ತೊಡಗಿರುವ ಅಜ್ಜಂಪುರ, ತರೀಕೆರೆ ಹಾಗೂ ಕಡೂರು ತಾಲೂಕಿನ ಬಹುತೇಕ ಎಲ್ಲಾ ಭಾಗಗಳಲ್ಲೂ ಮಳೆ ಯಾಗಿದೆ. ಇದರ ಜತೆಗೆ ಚಿಕ್ಕಮಗಳೂರು ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್‌.ಆರ್‌.ಪುರ, ಕಳಸ ತಾಲೂಕಿ ನಾದ್ಯಂತ ರಾತ್ರಿಯಿಡೀ ಮಳೆ ಬಂದಿದೆ.ಮಳೆಯ ವಿವರ:

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಬಿದ್ದಿರುವ ಮಳೆ ವಿವರ (ಮೀ.ಮೀ.ಗಳಲ್ಲಿ) ಈ ಕೆಳಕಂಡಂತೆ ಇದೆ.

ಚಿಕ್ಕಮಗಳೂರು- 34.1 ಮಿ.ಮೀ., ಅಂಬಳೆ- 49, ಆಲ್ದೂರು- 29.3, ಸಂಗಮೇಶ್ವರ ಪೇಟೆ- 10.1, ಲಕ್ಯಾ- 39.1, ಅವುತಿ- 12.9, ಜಾಗರ- 27.2, ವಸ್ತಾರೆ- 33.9.

ಕಡೂರು- 61.5, ಬೀರೂರು- 26,, ಹಿರೇನಲ್ಲೂರು- 16.5, ಸಖರಾಯಪಟ್ಟಣ- 39.2, ಸಿಂಗಟಗೆರೆ- 36.8, ಯಗಟಿ- 24.7, ಪಂಚನಹಳ್ಳಿ- 39.1.

ಕೊಪ್ಪ- 33.1, ಹರಿಹರಪುರ- 19.2, ಮೇಗುಂದ- 4.6, ಮೂಡಿಗೆರೆ- 31.3, ಬಣಕಲ್‌- 33.4, ಗೋಣಿಬೀಡು- 14.5, ಬಾಳೂರು- 19.1

ನರಸಿಂಹರಾಜಪುರ- 22, ಬಾಳೆಹೊನ್ನೂರು- 14.6, ಶೃಂಗೇರಿ- 12.2, ಕಿಗ್ಗಾ- 13.1, ತರೀಕೆರೆ- 6.8, ಅಮೃತಾಪುರ- 13.4, ಲಕ್ಕವಳ್ಳಿ- 29.6 (ವಾಡಿಕೆ 0.6), ಲಿಂಗದಹಳ್ಳಿ- 16.4, ಅಜ್ಜಂಪುರ- 13.8, ಚೌಳಹಿರಿಯೂರು- 17, ಶಿವನಿ- 3.3, ಅಮೃತಾಪುರ- 11.9, ಹಿರೇನಲ್ಲೂರು- 12.8, ಕಳಸದಲ್ಲಿ 9.4 ಮಿ.ಮೀ. ಮಳೆ ಬಂದಿದೆ.

ಆದರೆ, ಸೋಮವಾರದಂದು ಕಡೂರು ಪಟ್ಟಣ ಸೇರಿದಂತೆ ಸುತ್ತಮುತ್ತ ತುಂತುರು ಮಳೆಯಾಗಿದೆ. ಆದರೆ, ಇನ್ನುಳಿದಂತೆ ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಡುವು ನೀಡಿತ್ತು.

---- ಬಾಕ್ಸ್‌---

-----------------------------------------------------ತಾಲೂಕು ವಾಡಿಕೆಬಿದ್ದ ಮಳೆ

(ಮೇ 13 ರ ಸರಾಸರಿ ಮಿ.ಮೀ.ಗಳಲ್ಲಿ)

----------------------------------------------------

ಚಿಕ್ಕಮಗಳೂರು5.029.3

---------------------------------------------------------

ಕಡೂರು 2.6 35.6

----------------------------------------------------------

ಕೊಪ್ಪ3.217.3

--------------------------------------------------------

ಮೂಡಿಗೆರೆ5.124.1

--------------------------------------------------------

ಎನ್‌.ಆರ್‌.ಪುರ 1.918.7

--------------------------------------------------------

ಶೃಂಗೇರಿ 2.7 12.9

---------------------------------------------------------

ತರೀಕೆರೆ3.6 17.6

-----------------------------------------

ಅಜ್ಜಂಪುರ1.6 10.8

-----------------------------------------

ಕಳಸ 2.2 9.4

-----------------------------------

ಒಟ್ಟು (ಸರಾಸರಿ) 2.622.9

--

ಪೋಟೋ ಫೈಲ್‌ ನೇಮ್‌ 13 ಕೆಸಿಕೆಎಂ 4

ಶೃಂಗೇರಿ ತಾಲೂಕಿನ ಕುಂಚೇಬೈಲು ಗ್ರಾಮದ ಬಳಿ ಪ್ರವಾಸಿಗರ ವಾಹನ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿರುವುದು.