ನಾಮಪತ್ರ ಸಲ್ಲಿಕೆಗೂ ಮುನ್ನ ಜಾಧವ್‌ ಟೆಂಪಲ್‌ ರನ್‌

| Published : Apr 19 2024, 01:03 AM IST

ನಾಮಪತ್ರ ಸಲ್ಲಿಕೆಗೂ ಮುನ್ನ ಜಾಧವ್‌ ಟೆಂಪಲ್‌ ರನ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಬೆಂಬಲದೊಂದಿಗೆ ಗುರುವಾರ ನಾಮಪತ್ರ ಸಲ್ಲಿಸಿರುವ ಡಾ. ಉಮೇಶ್ ಜಾಧವ್, ನಾಮಪತ್ರ ಸಲ್ಲಿಕೆ, ರ್‍ಯಾಲಿಗೂ ಮುನ್ನ ಅನೇಕ ಪವಿತ್ರ ಕ್ಷೇತ್ರಗಳ ದರ್ಶನ ಮಾಡಿ ಗುರುಗಳು, ಸಂತರು, ಶರಣರ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಬೆಂಬಲದೊಂದಿಗೆ ಗುರುವಾರ ನಾಮಪತ್ರ ಸಲ್ಲಿಸಿರುವ ಡಾ. ಉಮೇಶ್ ಜಾಧವ್, ನಾಮಪತ್ರ ಸಲ್ಲಿಕೆ, ರ್‍ಯಾಲಿಗೂ ಮುನ್ನ ಅನೇಕ ಪವಿತ್ರ ಕ್ಷೇತ್ರಗಳ ದರ್ಶನ ಮಾಡಿ ಗುರುಗಳು, ಸಂತರು, ಶರಣರ ಆಶೀರ್ವಾದ ಪಡೆದರು.

ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಮುಂಚಿತವಾಗಿ ಮನೆಯಲ್ಲಿ ಪೂಜೆ ನೆರವೇರಿಸಿ ನಂತರ ಮನೆದೇವರಾದ ರಟಕಲ್ ರೇವಗ್ಗಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ, ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನ ಹಾಗೂ ಬ್ರಹ್ಮಪುರ ಶ್ರೀ ರಾಘವೇಂದ್ರ ಸ್ವಾಮಿ ಗುಡಿಗೆ ಭೇಟಿ ನೀಡಿ ದರ್ಶನ ಪಡೆದರು. ನಂಬಿ ಬಂದವರ ಪಾಲಿನ ಆರಾಧ್ಯದೈವ ಶ್ರೀ ರಟಕಲ್‌ ರೇವಣ ಸಿದ್ದೇಶ್ವರ ದೇವಸ್ಥಾನಕ್ಕೆ, ದಾಸೋಹ ಪರಂಪರೆಯ ಮೂಲಕ ಜಗತ್ತಿಗೆ ಶರಣ ಸಂದೇಶವನ್ನು ಸಾರಿದ ಶ್ರೀ ಶರಣಬಸವೇಶ್ವರ ಸಂಸ್ಥಾನಕ್ಕೆ ಹಾಗೂ ಬ್ರಹ್ಮಪುರದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿದರು. ಸರ್ವಕಾರ್ಯ ಯಶಸ್ವಿಯಾಗಲು ಭಗವಂತನ ಆಶೀರ್ವಾದ ಪಡೆದರು.

ನಂತರ ಅವರು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ, ಜಗತ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಬಸವೇಶ್ವರ ಪ್ರತಿಮೆಗೆ ಮತ್ತು ಮಹಾನಗರ ಪಾಲಿಕೆಯ ಉದ್ಯಾನವನದಲ್ಲಿರುವ ಬಾಬು ಜಗಜೀವನ್ ರಾಮ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ರಟಕಲ್ ರೇವಗ್ಗಿ ಶ್ರೀ ರೇವಣಸಿದ್ದೇಶ್ವರ ರು ಜಾಧವ್ ಅವರ ಮನೆ ದೇವರಾಗಿದ್ದು ಪ್ರತಿ ನಾಮಪತ್ರ ಸಲ್ಲಿಸುವಾಗಲೂ ಮೊದಲ ಪೂಜೆ ಸಲ್ಲಿಸುವುದು ವಾಡಿಕೆ.ಈ ಸಂದರ್ಭದಲ್ಲಿ ಬಸವರಾಜ ಪಾಟೀಲ್ ಪಾಟೀಲ್ ಬೆಡಸೂರು, ಶಿವರಾಜ್ ಪಾಟೀಲ್ ಗೋಣಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂಜೀವ್ ಜಾಧವ್ ಅವರನ್ನು ಸ್ವಾಗತಿಸಿದರು. ಶ್ರೀ ಶರಣ ಬಸವೇಶ್ವರ ಸಂಸ್ಥಾನ ಮಠದಲ್ಲಿ ಕಾರ್ಯದರ್ಶಿಗಳಾದ ಬಸವರಾಜ್ ದೇಶಮುಖ ಅವರು ಸ್ವಾಗತಿಸಿ ದರ್ಶನದ ನಂತರ ಸತ್ಕಾರ ಮಾಡಿದರು. ಬ್ರಹ್ಮ ಪುರುಷ ರಾಘವೇಂದ್ರ ಗುಡಿಯಲ್ಲಿ ಜಾಧವ್ ಅವರನ್ನು ಪಂಡಿತರಾದ ಅಭಯಾಚಾರ್ಯ, ವಿನೋದಾಚಾರ್ಯ ಗಲಗಲಿ, ರಾಮಚಂದ್ರ ಘಂಟಿ, ಬಿಜೆಪಿಯ ಹಿರಿಯ ಮುಖಂಡರಾದ ದಯಾಘನ ಧಾರವಾಡಕರ್, ಕೃಷ್ಣ ಜಿ ಕುಲಕರ್ಣಿ, ಹರಿಪ್ರಸನ್ನ ಕುಲಕರ್ಣಿ, ಪ್ರಹ್ಲಾದ ಪೂಜಾರಿ, ಸರ್ವಜ್ಞ ಮತ್ತಿತರರು ಸ್ವಾಗತಿಸಿದರು.