ಸಾರಾಂಶ
ಮೂಡಲಗಿ: ತಾಲೂಕಿನ ಪಟ್ಟಗುಂದಿ ಗ್ರಾಮದಲ್ಲಿ ಶ್ರೀ ಜಡಿಸಿದ್ಧೇಶ್ವರ ಜಾತ್ರೆಯ ನಿಮಿತ್ತ ಸೋಮವಾರ ಸಂಜೆ ಅಪಾರ ಭಕ್ತ ಸಮೂಹದ ಜಯಘೋಷಣೆಯಲ್ಲಿ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಹಗ್ಗವಿಲ್ಲದೆ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಮೂಡಲಗಿ: ತಾಲೂಕಿನ ಪಟ್ಟಗುಂದಿ ಗ್ರಾಮದಲ್ಲಿ ಶ್ರೀ ಜಡಿಸಿದ್ಧೇಶ್ವರ ಜಾತ್ರೆಯ ನಿಮಿತ್ತ ಸೋಮವಾರ ಸಂಜೆ ಅಪಾರ ಭಕ್ತ ಸಮೂಹದ ಜಯಘೋಷಣೆಯಲ್ಲಿ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಹಗ್ಗವಿಲ್ಲದೆ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಜಡಿಸಿದ್ಧೇಶ್ವರರಿಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಿ ಸಕಲ ವಾದ್ಯಮೇಳಗಳೊಂದಿಗೆ ತೇರಿನ ಕಳಸದ ಮೆರವಣಿಗೆ ಜರುಗಿತು. ಪಟ್ಟಗುಂದಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ದೇವರುಗಳ ಪಲ್ಲಕ್ಕಿಗಳ ಉಪಸ್ಥಿತಿಯಲ್ಲಿ ಸಂಜೆ ಜರುಗಿದ ಹಗ್ಗವಿಲ್ಲದೆ ಶ್ರೀ ಜಡಿಸಿದ್ಧೇಶ್ವರ ರಥೋತ್ಸವಕ್ಕೆ ಭಕ್ತರು ಬೆಂಡು, ಬೆತ್ತಾಸು ಬಾಳೆ ಹಣ್ಣು, ತೆಂಗಿಕಾಯಿ ಅರ್ಪಿಸಿ ಪುನಿತರಾದರು. ನಂತರ ಮಹಾಪ್ರಸಾದ ಜರುಗಿತು.