ಸಾರಾಂಶ
ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮೊದಲ ಬಾರಿಗೆ ಆರ್‌ಎಸ್‌ಎಸ್ ಕಚೇರಿ ಕೇಶವ ಕುಂಜಕ್ಕೆ ಮಂಗಳವಾರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಭೇಟಿ ನೀಡಿದರು.
ಹುಬ್ಬಳ್ಳಿ: ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮೊದಲ ಬಾರಿಗೆ ಆರ್‌ಎಸ್‌ಎಸ್ ಕಚೇರಿ ಕೇಶವ ಕುಂಜಕ್ಕೆ ಮಂಗಳವಾರ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಂಘದ ಹಿರಿಯ ಸು.ರಾಮಣ್ಣ ಅವರೊಂದಿಗೆ ಕೆಲಕಾಲ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರ ಕುಶಲೋಪರಿ ವಿಚಾರಿಸಿದರು. ಬಳಿಕ ಸಂಘದ ಕಾರ್ಯಾಲಯದಲ್ಲಿರುವ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಎಸ್.ಎಸ್. ಶೆಟ್ಟರ ಫೌಂಡೇಶನ್‌ನ ಸಂಕಲ್ಪ ಶೆಟ್ಟರ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ ಸೇರಿದಂತೆ ಇತರರು ಇದ್ದರು.ಭರ್ಜರಿ ಸ್ವಾಗತ:
ಬಿಜೆಪಿ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರನ್ನು ಎಸ್‌ಎಸ್‌ಕೆ ವಿಶ್ವೇಶ್ವರನಗರ ಪಂಚಟ್ರಸ್ಟ್ ಕಮಿಟಿಯ ಮಹಿಳಾ ಮಂಡಳದ ಅಧ್ಯಕ್ಷೆ ಪುಷ್ಪಾಬಾಯಿ ಪೂಜಾರಿ ಸನ್ಮಾನಿಸಿದರು. ಈ ವೇಳೆ ಕೇಂದ್ರ ಪಂಚ ಟ್ರಸ್ಟ್ ಪ್ರತಿನಿಧಿ ಟಿ.ವಿ. ಪೂಜಾರಿ, ಮಾಲಾಬಾಯಿ ಪವಾರ, ಅನುಸೂಯಾ ಕಲಬುರ್ಗಿ, ರೂಪಾ ಕಲಬುರ್ಗಿ, ಶಕುಂತಲಾ ಪೂಜಾರಿ, ಗೀತಾಬಾಯಿ ಲದವಾ, ನರ್ಮದಾಬಾಯಿ ದಲಬಂಜನ, ಅಮೃತಾ ಇರಕಲ್, ಸ್ಮೀತಾ ಮಗಜಿಕೊಂಡಿ, ನಮ್ರತಾ ಭಾಂಡಗೆ, ಗೀತಾ ಪಾಟೀಲ, ಪ್ರಭಾವತಿ ಕಲಬುರ್ಗಿ ಇದ್ದರು.ಅದರಂತೆ ಕೇಶ್ವಾಪುರ ಸುನಂದಾ ಕಾಲನಿ ಸಮಾಜದ ಪ್ರಮುಖರಾದ ಪರಶುರಾಮ ಹಬೀಬ, ರಾಘವೇಂದ್ರ ಬದ್ದಿ, ಶಂಕರ ಖೋಡೆ, ದಯಾನಂದ ಮಗಜಿಕೊಂಡಿ ಹೂಗುಚ್ಛ ನೀಡಿ ಸನ್ಮಾನಿಸಿದರು.