ಜಗಳೂರು: ಮುಖ್ಯ ಅತಿಥಿಗಳ ಊಟಕ್ಕೆ ಪಾಸ್ ವ್ಯವಸ್ಥೆ

| Published : Jan 12 2025, 01:17 AM IST

ಜಗಳೂರು: ಮುಖ್ಯ ಅತಿಥಿಗಳ ಊಟಕ್ಕೆ ಪಾಸ್ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು: ಜಗಳೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳಿಗೆ ಊಟಕ್ಕೆ ಪಾಸ್ ವ್ಯವಸ್ಥೆಯನ್ನು ವಾಲ್ಮೀಕಿ ಭವನದಲ್ಲಿ ಮಾಡಲಾಗಿತ್ತು. ಹೊರಗಿನಿಂದ ಬಂದ ಕನ್ನಡಪ್ರೇಮಿಗಳಿಗೆ ೨ ಊಟದ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಊಟಕ್ಕೆ ಪಾಯಸ, ಅನ್ನ ಸಾಂಬಾರ್ ಮಾಡಿಸಲಾಗಿತ್ತು. ಮುಖ್ಯ ಅತಿಥಿಗಳಿಗೆ ಭವನದ ಒಳಗೆ ರೊಟ್ಟಿ, ಪಾಯಿಸಾ, ಅನ್ನ, ಸಂಬಾರ್‌ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮೀಣರ ಲಗ್ಗೆ:

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಪ್ರತಿ ಹಳ್ಳಿಗಳಿಂದ ಜನರು ಆಗಮಿಸಿದ್ದರು. ಬೆಳಗ್ಗೆಯಿಂದಲ್ಲೇ ಮೆರವಣಿಗೆಯಿಂದ ಹಿಡಿದು, ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ವಿದ್ಯಾರ್ಥಿಗಳು, ಹಲವಾರು ಸಂಘಟನೆಗಳ ಪದಾಧಿಕಾರಿಗಳು, ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮೊದಲ ದಿನದ ಸಮ್ಮೇಳನದಲ್ಲಿ ಹಲವಾರು ಪುಸ್ತಕಗಳು ಲೋಕಾರ್ಪಣೆಗೊಂಡವು. ಕಾವ್ಯ ಸಂಭ್ರಮ, ಪಾರಿಜಾತ, ಕನಸಿನ ಕಡಲು, ಕಿರು ಬೆಳಕಿನ ಸೂಜಿ, ಅಂತರ್ಮುಖಿ, ನೆನಪಿನ ಕುದುರೆ, ಬಯಲು ಸಿರಿ, ದಾವಣಗೆರೆ ಜಿಲ್ಲಾ ಗ್ರಾಮ ದೇವತೆಗಳು ಎಂಬ ಹೆಸರಿನ ಕೃತಿಗಳು ಬಿಡುಗಡೆಯಾದವು.