ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಒಳ ಮೀಸಲಾತಿ ಯೋಜನೆಯನ್ನು ಕೂಡಲೇ ಜಾರಿಗೆ ತರಬೇಕು ಎಂದು ನಮ್ಮೆಲ್ಲರ ಒತ್ತಾಯ ಎಂದು ಮಾದಿಗ ದಂಡೂರ ಸಮಿತಿಯ ಅಧ್ಯಕ್ಷ ದಂಡೋರ ಮಂಜುನಾಥ್ ತಿಳಿಸಿದ್ದಾರೆ.ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಭಾನುವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಡಾ. ಬಾಬು ಜಗಜೀವನ್ ರಾಮ್ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ಮಾತನಾಡಿ ಕಳೆದ ೩೦ ವರ್ಷಗಳಿಂದ ಒಳ ಮೀಸಲಾತಿ ಯೋಜನೆಯನ್ನು ಜಾರಿಗೆ ತರದೆ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ಸರ್ಕಾರದಿಂದ ಅಂಗೀಕಾರವಾಗಿದೆ ಹಾಗೂ ರಾಜ್ಯಪಾಲರ ಅನುಮೋದನೆಯೂ ಕೂಡ ದೊರೆತಿದೆ.ರಾಜ್ಯ ಸರ್ಕಾರ ಇದಕ್ಕೆ ಅನುಮೋದನೆ ನೀಡುತ್ತಿಲ್ಲ ಈಗಾಗಲೇ ಜಾರಿಗೆ ತರಬೇಕಾದ ಮಾದಿಗರ ಮೀಸಲಾತಿಯನ್ನು ಜಾರಿಗೆ ತಂದಿಲ್ಲ. ಇಂದಿನಿಂದಲೇ ಒಳ ಮೀಸಲಾತಿ ಜಾರಿಗೆ ತಂದರೆ ಎಲ್ಲಾ ಮಹನೀಯರ ಜನ್ಮದಿನಾಚರಣೆಯನ್ನು ಆಚರಿಸಲು ಮುಂದಾಗುತ್ತೇವೆ. ಶೇಕಡ ೧೬ರಷ್ಟು ಒಳ ಮೀಸಲಾತಿ ಜಾರಿಯಲ್ಲಿದ್ದು ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನರಿಗೆ ಶೇಕಡ ೬%ರಷ್ಟು ನೀಡಲಿ ಇನ್ನು ಉಳಿದ ೯% ರಷ್ಟು ಮೀಸಲಾತಿಯನ್ನು ಬೇರೆ ಸಮುದಾಯದ ಜನರಿಗೆ ನೀಡಲಿ ಇದರಲ್ಲಿ ನಮ್ಮ ವಿರೋಧ ಇರುವುದಿಲ್ಲ, ಅದರಲ್ಲೂ ನಮ್ಮ ಸಮುದಾಯದ ಜನರಿಗೆ ಬಹಳಷ್ಟು ಅನ್ಯಾಯವಾಗಿದೆ. ಆದ್ದರಿಂದ ನಮ್ಮ ಸಮುದಾಯಕ್ಕೆ ಮೊದಲು ನ್ಯಾಯ ಒದಗಿಸಿ ಕೊಡಬೇಕೆಂಬುದು ಒತ್ತಾಯ ಆಗಿದೆ ಎಂದರು.ಇದೇ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಪರಶುರಾಮ್, ಮುಖಂಡರಾದ ನಂಜುಂಡಪ್ಪ, ಪುನೀತ್, ಗಣೇಶ್ ಇನ್ನು ಮುಂತಾದವರು ಹಾಜರಿದ್ದರು.ಒಳ ಮೀಸಲಿಗೆ ಆಗ್ರಹಿಸಿ ಜಗಜೀವನ್ ರಾಂ ಜಯಂತಿ ಬಹಿಷ್ಕಾರ
ರಾಜ್ಯ ಸರ್ಕಾರ ಇದಕ್ಕೆ ಅನುಮೋದನೆ ನೀಡುತ್ತಿಲ್ಲ ಈಗಾಗಲೇ ಜಾರಿಗೆ ತರಬೇಕಾದ ಮಾದಿಗರ ಮೀಸಲಾತಿಯನ್ನು ಜಾರಿಗೆ ತಂದಿಲ್ಲ. ಇಂದಿನಿಂದಲೇ ಒಳ ಮೀಸಲಾತಿ ಜಾರಿಗೆ ತಂದರೆ ಎಲ್ಲಾ ಮಹನೀಯರ ಜನ್ಮದಿನಾಚರಣೆಯನ್ನು ಆಚರಿಸಲು ಮುಂದಾಗುತ್ತೇವೆ. ಶೇಕಡ ೧೬ರಷ್ಟು ಒಳ ಮೀಸಲಾತಿ ಜಾರಿಯಲ್ಲಿದ್ದು ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನರಿಗೆ ಶೇಕಡ ೬%ರಷ್ಟು ನೀಡಲಿ ಇನ್ನು ಉಳಿದ ೯% ರಷ್ಟು ಮೀಸಲಾತಿಯನ್ನು ಬೇರೆ ಸಮುದಾಯದ ಜನರಿಗೆ ನೀಡಲಿ ಇದರಲ್ಲಿ ನಮ್ಮ ವಿರೋಧ ಇರುವುದಿಲ್ಲ, ಆದ್ದರಿಂದ ನಮ್ಮ ಸಮುದಾಯಕ್ಕೆ ಮೊದಲು ನ್ಯಾಯ ಒದಗಿಸಿ ಕೊಡಬೇಕೆಂಬುದು ಒತ್ತಾಯ ಆಗಿದೆ ಎಂದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.