ಹಾನಗಲ್ಲಿನಲ್ಲಿ ಜಗಜೀವನ್‌ರಾಂ ಜಯಂತಿ ಆಚರಣೆ

| Published : Apr 06 2025, 01:45 AM IST

ಸಾರಾಂಶ

ಆಹಾರ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಿದ ಬಾಬು ಜಗಜೀವನ್‌ರಾಂ ಅವರ ತತ್ವಾದರ್ಶಗಳ ಪಾಲನೆ ಅಗತ್ಯವಾಗಿದೆ.

ಹಾನಗಲ್ಲ: ಇಲ್ಲಿನ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶನಿವಾರ ಮಾಜಿ ಉಪಪ್ರಧಾನಿ ಬಾಬು ಜಗಜೀವನ್‌ರಾಂ ಜಯಂತಿ ಆಚರಿಸಲಾಯಿತು.ಬಾಬೂಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ತಹಸೀಲ್ದಾರ್ ರೇಣುಕಾ ಎಸ್. ಅವರು, ವಿದೇಶ ನೀತಿಗಳನ್ನು ಸಂಬಾಳಿಸಿಕೊಂಡು ದೇಶದಲ್ಲಿ ಹಸಿರು ಕ್ರಾಂತಿ ಅವತರಿಸಲು ಬಾಬೂಜಿ ಕಾರಣರಾಗಿದ್ದಾರೆ. ಅವರ ಜೀವನ ಮತ್ತು ಹೋರಾಟಗಳನ್ನು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ ನಂತರದ ಎರಡು ಭಾಗವಾಗಿ ಅವಲೋಕಿಸುವ ಅಗತ್ಯವಿದೆ ಎಂದರು.ಮುಖಂಡ ಹನುಮಂತಪ್ಪ ಮರಗಡಿ ಮಾತನಾಡಿ, ಆಹಾರ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಿದ ಬಾಬು ಜಗಜೀವನ್‌ರಾಂ ಅವರ ತತ್ವಾದರ್ಶಗಳ ಪಾಲನೆ ಅಗತ್ಯವಾಗಿದೆ ಎಂದರು.ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಪ್ರಮುಖರಾದ ಉಮೇಶ ದೊಡ್ಡಮನಿ, ನಿಂಗಪ್ಪ ಕಾಳೇರ, ಉಮೇಶ ಮಾಳಗಿ, ರಾಮಚಂದ್ರ ಕಲ್ಲೇರ, ರಾಜು ಗೌಡಗೇರಿ, ಸುರೇಶ ನಾಗಣ್ಣನವರ, ಹನುಮಂತಪ್ಪ ಕೋಣನಕೊಪ್ಪ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಿ.ಬಿ. ಹಿರೇಮಠ, ವಿವಿಧ ಇಲಾಖೆ ಅಧಿಕಾರಿಗಳಾದ ಎಸ್. ಆನಂದ, ವಿ.ವಿ. ಸಾಲಿಮಠ, ಮಂಜುನಾಥ ಬಣಕಾರ, ರಾಘವೇಂದ್ರ, ಶಿವಾನಂದ ಕ್ಯಾಲಕೊಂಡ ಇದ್ದರು.ಕೃಷಿ ಕ್ಷೇತ್ರಕ್ಕೆ ಕೊಡುಗೆ ಅಪಾರ

ಸವಣೂರು: ಬಾಬು ಜಗಜೀವನರಾಂ ಅವರು ಹಸಿರು ಕ್ರಾಂತಿ ಮತ್ತು ಭಾರತೀಯ ಕೃಷಿಯ ಆಧುನೀಕರಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಿದ್ದಾರೆ. ಅಲ್ಲದೇ ದಲಿತರಿಗೆ ಸಮಾನತೆಯನ್ನು ಸಾಧಿಸಲು ಸಮರ್ಪಿತವಾದ ಅಖಿಲ ಭಾರತ ಶೋಷಿತ ವರ್ಗಗಳ ಲೀಗ್‌ ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಉಪವಿಭಾಗಾದಿಕಾರಿ ಶುಭಂ ಶುಕ್ಲಾ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಕೋರ್ಟ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಬಾಬು ಜಗಜೀವನ್‌ರಾಂ ಜನಪ್ರಿಯವಾಗಿ ಬಾಬೂಜಿ ಎಂದು ಕರೆಯಲ್ಪಡುತ್ತಾರೆ ಹಾಗೂ ಅವರು ಭಾರತದ ಸ್ವಾತಂತ್ರ‍್ಯ ಹೋರಾಟಗಾರ ಮತ್ತು ಬಿಹಾರದ ರಾಜಕಾರಣಿಯಾಗಿದ್ದರು. ದಲಿತರಿಗೆ ಸಮಾನತೆಯನ್ನು ಸಾಧಿಸಲು ಸಮರ್ಪಿತವಾದ ಅಖಿಲ ಭಾರತ ಶೋಷಿತ ವರ್ಗಗಳ ಲೀಗ್ ಅನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ತಾಲೂಕು ಗ್ಯಾರಂಟಿ ಅನಿಷ್ಠಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ ಮಾತನಾಡಿ, ದೀನ- ದಲಿತರು ಸಾಕಷ್ಟು ತುಳಿತಕ್ಕೆ ಒಳಗಾಗಿದ್ದ ಸಮಯದಲ್ಲಿ ಅವರ ಏಳ್ಗೆಗಾಗಿ ಸಾಕಷ್ಟು ಹೋರಾಟ ಹಾಗೂ ಸಂಘಟನೆ ಮಾಡುವ ಮೂಲಕ ದಲಿತರಿಗೆ ನ್ಯಾಯವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ಗ್ರೇಡ್- 2 ತಹಸೀಲ್ದಾರ್ ಗಣೇಶ ಸವಣೂರ, ಬಿಇಒ ಎಂ.ಎಫ್. ಬಾರ್ಕಿ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಜೀವನ ಪಮಾರ, ಟಿಎಚ್‌ಒ ಚಂದ್ರಕಲಾ ಜೇ., ಕೃಷಿ ಸಹಾಯಕ ನೀರ್ದೇಶಕಿ ಸವಿತಾ ಚಕ್ರಸಾಲಿ, ಸಿಡಿಪಿಒ ಉಮಾ ಕೆ.ಎಸ್., ಪುರಸಭೆ ವ್ಯವಸ್ಥಾಪಕ ಮಹೇಶ ದೊಡ್ಡಣವರ, ಪ್ರಮುಖರಾದ ಲಕ್ಷ್ಮಣ ಕನವಳ್ಳಿ, ಆನಂದ ವಡಕ್ಕಮ್ಮನವರ, ಅಪ್ಪು ತೊಂಡೂರ, ಶ್ರೀಕಾಂತ ಲಕ್ಷ್ಮೇಶ್ವರ, ಗದಿಗೆಪ್ಪ ಕ್ಯಾಡದ, ರಂಗು ಬಾಲೇಹೊಸೂರ, ಪ್ರವೀಣ ಬಾಲೇಹೊಸೂರ, ನಾಗರಾಜ ಹರಿಜನ, ಮಲ್ಲೇಶ ಹರಿಜನ, ಗಂಗಪ್ಪ ಹರಿಜನ, ಉಮೇಶ ಮೈಲ್ಲಮ್ಮನವರ, ಬಸು ಮೈಲ್ಲಮ್ಮನವರ ಹಾಗೂ ಇತರರು ಇದ್ದರು.