ದೇಶವನ್ನು ಸ್ವಾವಲಂಬಿ ಮಾಡಿದ ಜಗಜೀವನ ರಾಮ್: ಶಾಸಕ ಡಿ.ಜಿ.ಶಾಂತನಗೌಡ

| Published : Apr 06 2025, 01:50 AM IST

ಸಾರಾಂಶ

ಸ್ವಾತಂತ್ರ್ಯಬಂದ ಸಂದರ್ಭದಲ್ಲಿ ಇದ್ದ ಕೇವಲ 33 ಕೋಟಿ ಜನಸಂಖ್ಯೆಗೆ ಆಹಾರ ಪೂರೈಸಲಾಗದೇ ಇತರೆ ದೇಶಗಳ ಮೇಲೆ ಪರವಾಲಂಭಿಯಾಗಿದ್ದ ನಮ್ಮ ದೇಶವನ್ನು ಕೇಂದ್ರದ ಮಂತ್ರಿಯಾಗಿದ್ದ ಬಾಬು ಜಗಜೀವನ ರಾಂ ಅವರು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಯೋಜನೆ ತಂದು ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿಸಿದ ಧೀಮಂತ ನಾಯಕ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕು ಆಡಳಿತ ಆಯೋಜನೆ । ಡಾ.ಬಾಬು ರಾಂ ಭಾವಚಿತ್ರಕ್ಕೆ ಪುಷ್ಪನಮನ

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಸ್ವಾತಂತ್ರ್ಯಬಂದ ಸಂದರ್ಭದಲ್ಲಿ ಇದ್ದ ಕೇವಲ 33 ಕೋಟಿ ಜನಸಂಖ್ಯೆಗೆ ಆಹಾರ ಪೂರೈಸಲಾಗದೇ ಇತರೆ ದೇಶಗಳ ಮೇಲೆ ಪರವಾಲಂಭಿಯಾಗಿದ್ದ ನಮ್ಮ ದೇಶವನ್ನು ಕೇಂದ್ರದ ಮಂತ್ರಿಯಾಗಿದ್ದ ಬಾಬು ಜಗಜೀವನ ರಾಂ ಅವರು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಯೋಜನೆ ತಂದು ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿಸಿದ ಧೀಮಂತ ನಾಯಕ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕು ಅಡಳಿತ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಡಾ.ಬಾಬು ಜಗಜೀವನ ರಾಂ 118ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಜಗಜೀವನ ರಾಂ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿ ಮಾತನಾಡಿದರು.

ದೇಶದಲ್ಲಿಯೇ ಅತ್ಯಂತ ಹಿಂದುಳಿದ ರಾಜ್ಯವಾಗಿದ್ದ ಬಿಹಾರದ ಪುಟ್ಟ ಗ್ರಾಮದಲ್ಲಿ ಜನಿಸಿದ ಜಗಜೀವನ ರಾಂ ಅವರು ಕಷ್ಟಪಟ್ಟು ಶಿಕ್ಷಣ ಪಡೆದು ನಂತರದಲ್ಲಿ ರಾಜಕೀಯ ಕ್ಷೇತ್ರಕ್ಕೆ ಅಗಮಿಸಿ ಕೇಂದ್ರ ಸಚಿವರಾಗಿ ಕೃಷಿ ಕ್ಷೇತ್ರದಲ್ಲಿ ದೇಶ ಸ್ವಾವಲಂಬಿಯಾಗಲು ವಿಶೇಷವಾದ ಕೊಡುಗೆ ನೀಡಿದ್ದು, ಈ ಕಾರಣಕ್ಕಾಗಿಯೇ ಅವರನ್ನು ಹಸಿರು ಕ್ರಾಂತಿ ಹರಿಕಾರ ಎಂದು ಗೌರವಿಸಲಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಎಸ್ಸಿ.ಎಸ್ಟಿ, ಹಿಂದುಳಿದ ಜನ ಸಮುದಾಯದ ಅಭಿವೃದ್ಧಿಗೆ ಹತ್ತಾರು ಯೋಜನೆಗಳನ್ನು ತಂದು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಈ ಜನ ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಭದ್ರತೆಯನ್ನು ಒದಗಿಸುವ ಕೆಲಸಗಳನ್ನು ಮಾಡಿಕೊಂಡು ಬಂದಿದೆ ಎಂದು ಹೇಳಿದರು

ಈ ಹಿಂದೆ ತಮ್ಮ ಅಧಿಕಾರಾವಧಿಯಲ್ಲಿ 4 ವಸತಿ ಶಾಲೆಗಳನ್ನು ಮಂಜೂರು ಮಾಡಿಸಲಾಗಿದ್ದು ,ಇದೀಗ ಪ್ರಸ್ತುತವಾಗಿ ಸಾಸ್ವೇಹಳ್ಳಿ ಹೋಬಳಿ, ಐನೂರು ಸಮೀಪ ಒಂದು ವಸತಿ ಶಾಲೆ ಮಂಜೂರು ಮಾಡಿಸಿದೆ ಎಂದರು.

ದಲಿತ ಮುಖಂಡ ದಿಡಗೂರು ತಮ್ಮಣ್ಣ ಡಾ. ಬಾಬು ಜಗಜೀವನ ರಾಂ ಅವರ ಜೀವನ, ಸಾಧನೆಗಳ ಕುರಿತು ಮಾತನಾಡಿದರು.

ನಂತರ ಕಾರ್ಯಕ್ರಮಕ್ಕೆ ಅಗಮಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಡಾ. ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ನಂತರ ಶಾಸಕರು, ಮುಖಂಡರು, ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ನಿರ್ಗಮಿಸಿದರು.

ದಲಿತ ಮುಖಂಡ ಮಾರಿಕೊಪ್ಪದ ಮಂಜಪ್ಪ ಸ್ವಾಗತಿಸಿದರು. ತಹಸೀಲ್ದಾರ್ ಪಟ್ಟರಾಜ ಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ, ಮುಖಂಡರಾದ ಪ್ರಭಾಕರ, ಸೂರಟೂರು ಹನುಮಂತಪ್ಪ, ಕುಳಗಟ್ಟೆ ಶೇಖರಪ್ಪ, ಶಾಂತರಾಜ್, ಸೇರಿ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.