ಜಗಜೀವನರಾಮ್‌ರ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪ

| Published : Jul 07 2024, 01:20 AM IST / Updated: Jul 07 2024, 01:21 AM IST

ಜಗಜೀವನರಾಮ್‌ರ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಬಾಬು ಜಗಜೀವನರಾಮ್‌ರವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಹಸಿರು ಕ್ರಾಂತಿ ಹರಿಕಾರ, ಶೋಷಿತ ಸಮುದಾಯದ ಅಗ್ರಗಣ್ಯ ನೇತಾರ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಮ್‌ರವರ ಆದರ್ಶಗಳು ನಮ್ಮೆಲ್ಲರಿಗೂ ಸದಾ ಶ್ರೀರಕ್ಷೆಯಾಗಿವೆ ಎಂದು ಶಾಸಕ, ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು. ಶನಿವಾರ ಶಾಸಕರ ಭವನದಲ್ಲಿ ಬಾಬು ಜಗಜೀವನರಾಮ್‌ ರವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು.

ರಾಷ್ಟ್ರದಲ್ಲಿ ಶೋಷಿತ ಸಮುದಾಯದಕ್ಕೆ ಸೂಕ್ತವಾದ ಸೌಲಭ್ಯವಿಲ್ಲದೆ ಇಡೀ ಸಮುದಾಯ ಕತ್ತಲಲ್ಲಿ ಮುಳುಗಿತ್ತು. ಶೋಷಣೆಯ ಕಪಿಮುಷ್ಠಿಯಲ್ಲಿ ಸಿಕ್ಕಿದ್ದ ದಲಿತ ಹಾಗೂ ಹಿಂದುಳಿದ ಸಮುದಾಯ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಬಾಬು ಜಗಜೀವನರಾಮ್ ತಮ್ಮದೇಯಾದ ತತ್ವ, ಸಿದ್ದಾಂತಗಳ ಮೂಲಕ ಸಮುದಾಯವನ್ನು ಸಂಘಟಿಸಿ ಸಮಾಜದ ಎಲ್ಲಾ ವರ್ಗದ ವಿಶ್ವಾಸವನ್ನು ಗಳಿಸಿ ಶೋಷಿತ ಸಮುದಾಯಕ್ಕೆ ಆಶಾಕಿರಣವಾಗಿ ಹೊರಹೊಮ್ಮಿದರು. ನಾವು ಸಹ ಅವರ ಹಾದಿಯಲ್ಲೇ ನಡೆಯೋಣ ಎಂಬ ಸಂಕಲ್ಪ ಮಾಡೋಣ ಎಂದರು.

ಈ ವೇಳೆ ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ಬಿ.ಟಿ.ರಮೇಶ್‌ಗೌಡ, ಎಂ.ಜೆ.ರಾಘವೇಂದ್ರ, ನಾಮ ನಿರ್ದೇಶಕ ಸದಸ್ಯರಾದ ನೇತಾಜಿ ಪ್ರಸನ್ನ, ಬಡಗಿ ಪಾಪಣ್ಣ, ನಟರಾಜು, ವೀರಭದ್ರಪ್ಪ, ಅನ್ವರ್‌ ಮಾಸ್ಟರ್, ಜಿಲ್ಲಾ ಕೆಡಿಪಿ ಸದಸ್ಯ ಓ.ರಂಗಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ, ತಾಪಂ ಕೆಡಿಪಿ ಸದಸ್ಯ ಸುರೇಶ್‌ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾಬಾಯಿ, ಮುಖಂಡರಾದ ಆನಂದಕುಮಾರ್, ರುದ್ರಮುನಿ, ಜಯಣ್ಣ, ತಿಪ್ಪೇಸ್ವಾಮಿ, ಸೈಪುಲ್ಲಾ ಮುಂತಾದವರು ಉಪಸ್ಥಿತರಿದ್ದರು.