ಸಾರಾಂಶ
ಪಟ್ಟಣದ ಸಂತೆಮಾಳ ವೃತ್ತದಲ್ಲಿ ಸಮಿತಿಯ ಕಾರ್ಯಕರ್ತರು ಮೈಸೂರು- ಮಳವಳ್ಳಿ ಮುಖ್ಯರಸ್ತೆಗೆ ಅಡ್ಡ
ಕನ್ನಡಪ್ರಭ ವಾರ್ತೆ ಬನ್ನೂರು
ದಲಿತರನ್ನು ನಿಂದಿಸಿ, ಒಕ್ಕಲಿಗ ಸಮುದಾಯ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ಜೈ ಭೀಮ್ ಹೋರಾಟ ಸಮಿತಿ ಕಾರ್ಯಕರ್ತರು ಹಾಗೂ ಮುಖಂಡರು ರಸ್ತೆತಡೆ ನಡೆಸಿ, ಪ್ರತಿಭಟಿಸಿದರು.ಪಟ್ಟಣದ ಸಂತೆಮಾಳ ವೃತ್ತದಲ್ಲಿ ಸಮಿತಿಯ ಕಾರ್ಯಕರ್ತರು ಮೈಸೂರು- ಮಳವಳ್ಳಿ ಮುಖ್ಯರಸ್ತೆಗೆ ಅಡ್ಡಲಾಗಿ ಕುಳಿತು ಎಲ್ಲ ಬಿಬಿಎಂಪಿ ಗುತ್ತಿಗೆದಾರನೊಬ್ಬನಿಗೆ ಮೊಬೈಲ್ ಕರೆ ಮಾಡಿ, ಜೀವ ಬೆದರಿಕೆ ಹಾಕುತ್ತಾ ದಲಿತರ ಜಾತಿಯನ್ನು ನಿಂದಿಸಿ, ಮಹಿಳೆಯರ ಬಗ್ಗೆ ಮನಸೋ ಇಚ್ಛೆ ನಾಲಿಗೆಯನ್ನು ಹರಿಯ ಬಿಟ್ಟು ಸೆರೆಮನೆ ಸೇರಿರುವ ಶಾಸಕ ಮುನಿರತ್ನ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರು ನಾಡ ಕಚೇರಿಗೆ ತೆರಳಿ ಉಪ ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.ಸಮಿತಿಯ ಅಧ್ಯಕ್ಷ ವೈ.ಎಸ್. ರಾಘವೇಂದ್ರ, ಉಪಾಧ್ಯಕ್ಷ ಚನ್ನಮಲ್ಲು, ರಾಮು, ಮುದ್ದಣ್ಣ ಚಿನ್ನಸ್ವಾಮಿ, ಕೃಷ್ಣ, ಮಂಜು, ಶ್ರೀನಿವಾಸ, ಪುಟ್ಟರಾಜು, ರಂಗಸ್ವಾಮಿ, ಕಾಂತರಾಜ್, ಮನುಕುಮಾರ್, ಶಿವಲಿಂಗಯ್ಯ, ಜೈಮುತ್ತು, ಲ್ ನಾರಾಯಣ್, ಶ್ರೀನಿವಾಸ, ವೈ.ಜಿ. ರಾಮು, ಎಸ್. ಸಿದ್ದರಾಜು, ಸುನೀಲ್, ನಾಗೇಂದ್ರ, ಅಂದಾನಿ, ಶಾಂತ, ಡಿ. ಪ್ರಕಾಶ, ಎಂ. ಮಹದೇವು, ರೈತ ಸಂಘದ ಸ್ವಾಮಿರಾಜು, ಶಾಂತರಾಜು, ಎಂ.ವಿ. ಕೃಷ್ಣಪ್ಪ ಇದ್ದರು.