ಜೈನ್‌ ಸಮಾಜದಿಂದ ಸರ್ಕಾರಕ್ಕೆ ಮನವಿ

| Published : Aug 13 2025, 02:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹೆಸರಲ್ಲಿ ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಕುಟುಂಬಕ್ಕೆ ಕಳಂಕ ತರಲು ಕೆಲವರು ಹುನ್ನಾರ ನಡೆಸಿದ್ದಾರೆ. ಅಂತವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಜೈನ ಸಮಾಜದಿಂದ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹೆಸರಲ್ಲಿ ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಕುಟುಂಬಕ್ಕೆ ಕಳಂಕ ತರಲು ಕೆಲವರು ಹುನ್ನಾರ ನಡೆಸಿದ್ದಾರೆ. ಅಂತವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಜೈನ ಸಮಾಜದಿಂದ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.ಈ ವೇಳೆ ಹಿರಿಯ ಸಾಹಿತಿ ಅಶೋಕ ಮಣಿ ಅವರು ಮಾತನಾಡಿ, ಧರ್ಮಸ್ಥಳ ವಿಶ್ವ ಪ್ರಸಿದ್ಧ ಶ್ರದ್ಧಾ ಕೇಂದ್ರ. ಕೋಟ್ಯಂತರ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಜಾತಿ-ಧರ್ಮ ಮೀರಿದ ಸ್ಥಳವಾಗಿದ್ದು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಜಾತ್ಯತೀತ ಮನೋಭಾವನೆಯಿಂದ ಸರ್ವಧರ್ಮದ ಜನರನ್ನು ಸಹೋದರರಂತೆ ಕಂಡವರು. ಕಾಣದ ಕೈಗಳು ಈಷಡ್ಯಂತ್ರ ನಡೆಸುತ್ತಿವೆ. ಆರೋಗಳ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಅದಕ್ಕೆ ನಮ್ಮ ಸ್ವಾಗತ ಸಹಕಾರವಿದೆ. ಆದರೆ, ತನಿಖಾ ಹಂತದಲ್ಲಿಯೇ ಧರ್ಮಸ್ಥಳದ ಬಗ್ಗೆಯಾಗಲಿ ಅಥವಾ ಧರ್ಮಾಧಿಕಾರಿಗಳನ್ನು ಟಾರ್ಗೆಟ್‌ ಮಾಡಿ ಜೈನ ಧರ್ಮಕ್ಕೆ ಅವಮಾನಿಸುತ್ತಿರುವುದು ಸರಿಯಲ್ಲ ಎಂದರು.ಅರಿಹಂತ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿ, ಸೌಜನ್ಯ ನಮ್ಮ ತಂಗಿ-ತಾಯಿ ಸಮಾನ. ಅವರ ಹತ್ಯೆಯಾಗಿ 11 ವರ್ಷ ಕಳೆದಿವೆ. ಆದರೂ ನ್ಯಾಯ ಸಿಕ್ಕಿಲ್ಲ ಎನ್ನುವುದು ಕಳವಳಕಾರಿ ವಿಷಯ. ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಮೃತಳ ಕುಟುಂಬಕ್ಕೆ ನ್ಯಾಯ ಸಿಗಬೇಕು. ವೀರೇಂದ್ರ ಹೆಗ್ಗಡೆ ಅವರೇ ಯಾರೇ ಮಾಡಿದ್ದರೂ ಕಠಿಣ ಶಿಕ್ಷೆಯಾಗಲಿ ಎಂದು ಕೋರಿದ್ದರು. ಅಂಥವರ ಹೆಸರನ್ನೇ ಈ ಪ್ರಕರಣದಲ್ಲಿ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ ಸೌಜನ್ಯ ಕೊಲೆಯನ್ನು ನಾವು ತೀವ್ರ ಖಂಡಿಸುತ್ತೇವೆ ಎಂದು ಹೇಳಿದರು. ಈ ವೇಳೆ ಬಿಜೆಪಿ ಮುಖಂಡ ಸಿದ್ದರಾಜ ಹೊಳಿ, ಪ್ರಭು ಕಡಿ, ಬಸಯ್ಯ ನಂದಿಕೇಶ್ವರಮಠ, ಜೈನ ಸಮಾಜದ ಮುಖಂಡರಾದ ಮಾಣಿಕಚಂದ ದಂಡಾವತಿ, ಬಾಹುಬಲಿ ಗೋಗಿ, ಭೀಮರಾಯ ದೊಡಮನಿ, ಭರತೇಶ ಶೆಟ್ಟಿ, ರಮೇಶ ದೊಡಮನಿ, ಶಾಂತರಾಜ ಸಗರಿ, ಅಜಿತ ಗೊಂಗಡಿ, ಅಜಿತ ಪ್ರಥಮಶೆಟ್ಟಿ, ಅಭಿನಂದನ ಕಡೆಹಳ್ಳಿ, ಭರತೇಶ ಮಂಕಣಿ, ಆದಿನಾಥ ನಾಗಾವಿ, ಆರ.ಎಸ್.ದಶರಥ, ರಾಜೇಂದ್ರ ದಂಡಾವತಿ, ಮಹೇಂದ್ರ ಓಸ್ವಾಲ, ಜಿತೇಂದ್ರ ಓಸ್ವಾಲ, ಪಾರಸ್ ಪೋರ್ವಾಲ, ಸಂಜು ಓಸ್ವಾಲ, ಸೀಮಾ ದಂಡಾವತಿ, ಸುನಂದಾ ಯಾತಗಿರಿ, ರೇಖಾ ಸಗರಿ, ಶಾರದಾ ದೊಡಮನಿ, ಇಂದುಮತಿ ಕಡೆಹಳ್ಳಿ, ಶಶಿಕಲಾ ದಶರಥ, ಶಶಿಕಲಾ ಗೊಂಗಡಿ ಇತರರು ಇದ್ದರು.