ಜೈನಮುನಿಗಳಿಗೆ ಬೃಹತ್ ಕುಂಭ ಮೆರವಣಿಗೆ ಸ್ವಾಗತ

| Published : Jul 07 2025, 11:47 PM IST / Updated: Jul 07 2025, 11:48 PM IST

ಸಾರಾಂಶ

ಚಾತುರ್ಮಾಸದ ಪ್ರಯುಕ್ತ ನಗರದಲ್ಲಿ 4 ತಿಂಗಳ ಕಾಲ ಜೈನ ಸಮಾಜಬಾಂಧವರಿಗೆ ಧರ್ಮ ಜಾಗೃತಿ, ಧರ್ಮೋಪದೇಶ ನೀಡಲು ಆಗಮಿಸಿರುವ ಜೈನ್ ಸಮಾಜ ಹಿರಿಯ ಆಚಾರ್ಯರಾದ ಆಚಾರ್ಯ ಶ್ರೀ ವಿಮಲಸಾಗರ ಸುರಜೀ ಹಾಗೂ ಐವರು ಜೈನ್ ಯುವ ಮುನಿಗಳನ್ನು ಸೋಮವಾರ ಸಮಸ್ತ ಜೈನ್ ಸಮಾಜ ಬಾಂಧವರು ಕುಂಭದೊಂದಿಗೆ ಬೃಹತ್ ಮೆರವಣಿಗೆ ಮೂಲಕ ಬರಮಾಡಿಕೊಂಡರು.

ಗದಗ: ಚಾತುರ್ಮಾಸದ ಪ್ರಯುಕ್ತ ನಗರದಲ್ಲಿ 4 ತಿಂಗಳ ಕಾಲ ಜೈನ ಸಮಾಜಬಾಂಧವರಿಗೆ ಧರ್ಮ ಜಾಗೃತಿ, ಧರ್ಮೋಪದೇಶ ನೀಡಲು ಆಗಮಿಸಿರುವ ಜೈನ್ ಸಮಾಜ ಹಿರಿಯ ಆಚಾರ್ಯರಾದ ಆಚಾರ್ಯ ಶ್ರೀ ವಿಮಲಸಾಗರ ಸುರಜೀ ಹಾಗೂ ಐವರು ಜೈನ್ ಯುವ ಮುನಿಗಳನ್ನು ಸೋಮವಾರ ಸಮಸ್ತ ಜೈನ್ ಸಮಾಜ ಬಾಂಧವರು ಕುಂಭದೊಂದಿಗೆ ಬೃಹತ್ ಮೆರವಣಿಗೆ ಮೂಲಕ ಬರಮಾಡಿಕೊಂಡರು.

ನಗರದ ಲಾಲಿದೇವಿ ರೂಪಚಂದ ಬಾಫಣಾ (ಪಂಕಜ್ ಆರ್.ಬಾಫಣಾ) ಅವರ ನಿವಾಸದಿಂದ ನಗರದ ಪಾರ್ಶ್ವನಾಥ ಜೈನ್ ಮೂರ್ತಿ ಪೂಜಕ ಸಂಘ ಹಾಗೂ ಸಮಸ್ತ ಜೈನ್ ಸಮಾಜಬಾಂಧವರು ಭವ್ಯ ಮೆರವಣಿಗೆಯೊಂದಿಗೆ ನಗರದ ಸ್ಟೇಷನ್ ರೋಡನ ಪಾರ್ಶ್ವನಾಥ ಜೈನ್ ದೇವಸ್ಥಾನಕ್ಕೆ ಜಯಘೋಷಗಳೊಂದಿಗೆ ಬರಮಾಡಿಕೊಂಡರು.ಪಾರ್ಶ್ವನಾಥ ಜೈನ್ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಅಲಂಕೃತ ಬೃಹತ್ ವೇದಿಕೆಯಲ್ಲಿ ವಿರಾಜಮಾನರಾದ ಆಚಾರ್ಯ ಶ್ರೀ ವಿಮಲಸಾಗರ ಸುರಜೀ ಅವರು ಸಮಸ್ತ ಜೈನ ಸಮಾಜಬಾಂಧವರಿಗೆ ದರ್ಶನಾಶೀರ್ವಾದ ನೀಡಿದರು.ಗನಿವರ್ಯ ಶ್ರೀ ಪದ್ಮಾವಿಮಲ್ ಸಾಗರಜೀ ಮಾರಾಸಾಹೇಬ, ಮುನಿಶ್ರೀ ನಿಗ್ರಹಗ್ರಾನಾಥಾ ವಿಮಲ ಸಾಗರಜೀ ಮಾರಾಸಾಹೇಬ, ಮುನಿಶ್ರೀ ತತ್ವವಿಮಲ ಸಾಗರಜೀ ಮಾರಾಸಾಹೇಬ, ಮುನಿಶ್ರೀ ತೀರ್ಥವಿಮಲ ಸಾಗರಜೀ ಮಾರಾಸಾಹೇಬ ಹಾಗೂ ಯುವ ಮುನಿಗಳು, ಪಂಕಜ್ ರೂಪಚಂದ ಬಾಫಣಾ, ಹರೀಶ್ ಶಹಾ, ದಲಿಚಂದ ಕವಾಡ, ಜೀತೇಂದ್ರ ಶಹಾ, ಜವಾಹರಲಾಲ ಬಂದಾ, ನಿರ್ಭಯಲಾಲ ಹುಂಡಿಯಾ, ಗೌತಮ್‌ಚಂದ ಕವಾಡ ಉಪಸ್ಥಿತರಿದ್ದರು.

ಜು. 8ರಂದು 4 ತಿಂಗಳವರೆಗೆ ಪಾರ್ಶ್ವನಾಥ ಜೈನ್‌ದಲ್ಲಿ ಚಾತುರ್ಮಾಸದ ಪ್ರಯುಕ್ತ ದಿನಾಲೂ ಬೆಳಗ್ಗೆ 8.45ರಿಂದ ಬೆಳಗ್ಗೆ 10ರ ವರೆಗೆ ಧರ್ಮೋಪದೇಶ ಮಾಡುವರು.