ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಚನ್ನಪಟ್ಟಣದ ಎಂ.ಎಸ್ . ಜೈಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ತಿಳಿಸಿದರು.ನಗರದ ಸ್ಫೂರ್ತಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ಗೌರವಾಧ್ಯಕ್ಷರಾಗಿ ಕನಕಪುರದ ಎಂ.ಸಿ. ನಾಗರಾಜು, ಪ್ರಧಾನ ಕಾರ್ಯದರ್ಶಿಯಾಗಿ ರಾಮನಗರದ ಕೆ.ಎಂ. ವೆಂಕಟೇಶ್ ಹಾಗೂ ಖಜಾಂಚಿಯಾಗಿ ಸುರೇಂದ್ರ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಉಪಾಧ್ಯಕ್ಷರಾಗಿ ಸಿ.ಪಿ. ಪ್ರಕಾಶ, ಡಾ. ಎಂ.ಸಿ. ಕೃಷ್ಣಪ್ಪ, ಸಿ. ಪ್ರಕಾಶ್ , ಟಿ.ಎಂ. ಪ್ರಕಾಶ್ , ಸಂಘಟನಾ ಕಾರ್ಯದರ್ಶಿಗಳಾಗಿ ಸಿ. ರಮೇಶ, ಗೋವಿಂದಸ್ವಾಮಿ, ಕೊಪುರಿ, ಸಿ. ಪುಟ್ಟರಾಜು , ಚಂದ್ರಯ್ಯ, ಜಂಟಿ ಕಾರ್ಯದರ್ಶಿಗಳಾಗಿ ಬಾಲು ಮೋಹನ, ಉಮೇಶ್ ಕುಮಾರ್ , ಸಿ.ಜಿ. ಗೋವಿಂದರಾಜು, ಕಾರ್ಯದರ್ಶಿ ಗಳಾಗಿ ಡಿ.ರಾಜೇಶ, ವೆಂಕಟೇಶ, ವಿಭಾಗೀಯ ಉಪಾಧ್ಯಕ್ಷರಾಗಿ ವಿಷಕಂಠಯ್ಯ ಹಾಗೂ ಗೌರವ ಸಲಹೆಗಾರರಾಗಿ ಗವಿಯಪ್ಪ, ಸಿದ್ದರಾಜು, ಗುಂಡುರಾಜು, ತಾಲ್ಲೂಕು ಅಧ್ಯಕ್ಷರಾಗಿ ಪುರುಷೋತ್ತಮ, ಕಾರ್ಯದರ್ಶಿಯಾಗಿ ಓಬಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.ಸಮಿತಿಯ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಮಾತನಾಡಿ, 7ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು. ಬ್ಯಾಕ್ ಲಾಗ್ ಉದ್ಯೋಗದ ನೇಮಕಾತಿಯನ್ನು ಕೂಡಲೇ ಮಾಡಬೇಕು. ಸರ್ಕಾರಿ ಇಲಾಖೆಯ ನೌಕರರಿಗೆ ಎನ್‌ಇಪಿ ಹಿಂಪಡೆದು ಒಪಿಎಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಅಹಿಂದ ಸರ್ಕಾರ ಆಯಕಟ್ಟಿನ ಸ್ಥಳಗಳಲ್ಲಿ ಉನ್ನತ ಹುದ್ದೆಗಳಲ್ಲಿ ಪ್ರಾಮಾಣಿವಾಗಿ ಸೇವೆ ಸಲ್ಲಿಸುತ್ತಿರುವ ದಲಿತ ಅಧಿಕಾರಿಗಳು ಇದ್ದರೂ ಕೂಡ ಅವರ ಅರ್ಹತೆಗೆ ತಕ್ಕ ಹುದ್ದೆಗಳನ್ನು ನೀಡುತ್ತಿಲ್ಲ. ಈ ವಿಚಾರದಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿಲ್ಲ. ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ಲಯಲೇಷನ್ ಅಧಿಕಾರಿಗಳ ನೇಮಕವೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇತ್ತೀಚೆಗೆ ಸುಪ್ರೀಂ ಕೋರ್ಟ್ ಎಸ್ಸಿ, ಎಸ್ಟಿ ಸಮುದಾಯಗಳಲ್ಲಿ ಒಳ ಮೀಸಲಾತಿಗೆ ಅವಕಾಶ ಕೊಟ್ಟು ತನ್ನ ನಿರ್ಧಾರ ಪ್ರಕಟಿಸಿದೆ. ಆದರೆ ಸುಪ್ರೀಂಕೋರ್ಟ್ ಕೊನೆಪದರ ವಿಚಾರದಲ್ಲಿ ವ್ಯಕ್ತಪಡಿಸಿರುವ ನಿರ್ಧಾರವು ಎಸ್ಸಿ,ಎಸ್ಟಿ ಸಮುದಾಯಗಳಲ್ಲಿ ಆತಂಕದ ವಿಚಾರವಾಗಿದೆ. ಇದನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಮನವಿ ಸಲ್ಲಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಆರೋಪಿಗಳನ್ನು ಬಂಧಿಸಿ:ಪಿ.ಎಸ್.ಐ ಪರುಶುರಾಂ ಅವರ ಸಾವಿನ ವಿಚಾರದಲ್ಲಿ ಆರೋಪಿಗಳ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಆರೋಪಿಗಳು ಪ್ರತಿಷ್ಠಿತರು ಎಂಬ ಕಾರಣಕ್ಕೆ ಇನ್ನು ಬಂಧನವಾಗಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಿ, ಸೂಕ್ತ ತನಿಖೆ ನಡೆಸಿ, ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಎಂದು ಅವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಎಸ್.ಜಯಪ್ರಕಾಶ್ ಮಾತನಾಡಿದರು. ಸಮಿತಿಯ ನೂತನ ಪದಾಧಿಕಾರಿಗಳು ಹಾಜರಿದ್ದರು.