ಸಾರಾಂಶ
ಗ್ರಾಮೀಣ ಭಾಗದ ಜನರಿಗೆ ಜಲಜೀವನ್ ಮಿಷನ್ ನೀರಿನ ಎಟಿಎಂ ಇದ್ದಂತೆ ಎಲ್ಲಾ ಹಳ್ಳಿಗಳಲ್ಲೂ ಈ ಯೋಜನೆಯ ಸದ್ಭಳಕೆಗೆ ಮುಂದಾಗುವಂತೆ ಶಾಸಕ ಡಿ.ಜಿ.ಶಾಂತನಗೌಡ ತಿಳಿಸಿದರು.
ಕನ್ನಡಪ್ರಭ ವಾರ್ತೆ ನ್ಯಾಮತಿ
ಗ್ರಾಮೀಣ ಭಾಗದ ಜನರಿಗೆ ಜಲಜೀವನ್ ಮಿಷನ್ ನೀರಿನ ಎಟಿಎಂ ಇದ್ದಂತೆ ಎಲ್ಲಾ ಹಳ್ಳಿಗಳಲ್ಲೂ ಈ ಯೋಜನೆಯ ಸದ್ಭಳಕೆಗೆ ಮುಂದಾಗುವಂತೆ ಶಾಸಕ ಡಿ.ಜಿ.ಶಾಂತನಗೌಡ ತಿಳಿಸಿದರು.ತಾಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ನ್ಯಾಮತಿ ಮತ್ತು ಗ್ರಾಮ ಪಂಚಾಯತ್ ಚಟ್ನಹಳ್ಳಿ ಸಹಯೋಗದಲ್ಲಿ ಸುಸ್ಥಿರ ಕುಡಿಯುವ ನೀರಿನ ಯೋಜನೆಯಡಿ ಜೆಜೆಎಂ 24*7 ನೀರು ಸರಬರಾಜು ಘೋಷಣಾ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆಲವು ಹಳ್ಳಿಗಳಲ್ಲಿ ಈ ಯೋಜನೆಯನ್ನು ವಿರೋಧ ಮಾಡಿದ್ದು ಜನರ ಆರೋಗ್ಯ, ಸಮಯವನ್ನು ಕಾಪಾಡುವ ಒಳ್ಳೆಯ ಯೋಜನೆಯಾಗಿದೆ ಎಂದು ಅರಿತು ಯೋಜನೆಯ ಬಗ್ಗೆ ಹಳ್ಳಿಗಳ ಸಾರ್ವಜನಿಕರು ಇದರ ಮಹತ್ವ ಅರಿತು ಅಳವಡಿಕೆಗೆ ಮುಂದಾದರೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಯೋಜನೆಗೆ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.ನೂತನ ಜಿಪಂ.ಸಿಇಒ ಗಿಟ್ಟೆ ಮಾಧವ ವಿಠ್ಠಲ್‌ರಾವ್ ಮಾತನಾಡಿ, ಇದುವರೆಗೂ ರಾಜ್ಯದಲ್ಲಿ 36 ಜಿಲ್ಲೆಯಲ್ಲಿ 17ನೇ ಗ್ರಾಮದಲ್ಲಿ ಜಲಜೀವನ್ ಮಿಷನ್ ಅಳವಡಿಕೆ ಮಾಡುವ ಮೂಲಕ ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಮುಮದಿನ ಆಗಷ್ಟ್ 15ರ ಒಳಗೆ ಜಿಲ್ಲೆಯಲ್ಲಿ 100 ಗ್ರಾಮಗಳಲ್ಲಿ ಜೆಜೆಎಂ ಅಳವಡಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ನ್ಯಾಮತಿ ತಾಪಂ ಇಒ ಎಚ್.ರಾಘವೇಂದ್ರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸೋಮ್ಲಾನಾಯ್ಕ ಮಾತನಾಡಿದರು. ಚಟ್ನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷ ನವೀನ್, ಮಾಜಿ ಗ್ರಾ.ಪಂ.ಅಧ್ಯಕ್ಷ ಮಲ್ಲೇಶಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಜಿಲ್ಲಾ ಎಇಇ ಷಣ್ಮುಖಪ್ಪ, ನರೇಗಾ ಎಡಿಎ ಸಂಗಮೇಶ್, ಪಿಡಿಒಗಳಾದ ವಿಜಯಕುಮಾರ್, ಅರುಣ್, ಜಯಪ್ಪ, ವಿಶ್ವಬ್ಯಾಂಕ್ನ ನಂದಕುಮಾರ್, ಜಿಲ್ಲಾ ಯೋಜನಾ ವ್ಯವಸ್ತಾಪಕ ಜಗದೀಶ್, ಅರಕೆರೆ ಮಧುಗೌಡ ಮತ್ತಿತರರು ಇದ್ದರು.