ಸದಾಶಿವ ಆಯೋಗ ಶೀಘ್ರ ಜಾರಿಗೆ ಆದಿ ಜಾಂಬವ ಮಹಾಸಭಾ ಮನವಿ

| Published : Jan 30 2025, 12:33 AM IST

ಸಾರಾಂಶ

ಸದಾಶಿವ ಆಯೋಗವನ್ನು ಯಥಾವತ್ತಾಗಿ ಶೀಘ್ರವೇ ಜಾರಿ ಮಾಡಬೇಕೆಂದು ಆಗ್ರಹಿಸಿ ತಾಲೂಕು ಆದಿ ಜಾಂಬವ ಮಹಾಸಭಾ ಸಂಘದ ಪದಾಧಿಕಾರಿಗಳು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ರವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ತುರುವೇಕೆರೆ

ಸದಾಶಿವ ಆಯೋಗವನ್ನು ಯಥಾವತ್ತಾಗಿ ಶೀಘ್ರವೇ ಜಾರಿ ಮಾಡಬೇಕೆಂದು ಆಗ್ರಹಿಸಿ ತಾಲೂಕು ಆದಿ ಜಾಂಬವ ಮಹಾಸಭಾ ಸಂಘದ ಪದಾಧಿಕಾರಿಗಳು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ರವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದರು.

ಈಗಾಗಲೇ ಸರ್ವೋಚ್ಛ ನ್ಯಾಯಾಲಯವು ಹೊರಡಿಸಿರುವ ತೀರ್ಪಿನಂತೆಯೇ ಸದಾಶಿವ ಆಯೋಗದ ವರದಿಯನ್ನು ಜರೂರಾಗಿ ಮಾಡುವುದರಿಂದ ಪರಿಶಿಷ್ಟ ಜಾತಿಯ ಲಕ್ಷಾಂತರ ಸಂಖ್ಯೆಯ ನೌಕರರು, ಅಧಿಕಾರಿಗಳು ಬಡ್ತಿ, ನೇಮಕ ಹೊಂದಲು ಹೆಚ್ಚು ಅನುಕೂಲವಾಗಲಿದೆ. ಆದ್ದರಿಂದ ಸಮಿತಿಯ ವರದಿಯನ್ನು ವಿಳಂಬ ಮಾಡದೇ ಅತಿ ವೇಗವಾಗಿ ಜಾರಿಗೊಳಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ತಾಲೂಕು ಆದಿ ಜಾಂಬವ ಮಹಾಸಭಾ ಅಧ್ಯಕ್ಷರಾದ ವಿ.ಟಿ.ವೆಂಕಟರಾಮಯ್ಯ, ಗೌರವಾಧ್ಯಕ್ಷ ರಾಮಕೃಷ್ಣಯ್ಯ, ಖಜಾಂಚಿ ಬೋರಪ್ಪ, ದಸಂಸ ಹಿರಿಯ ಹೋರಾಟಗಾರ ಮಲ್ಲೂರು ತಿಮ್ಮೇಶ್, ಗುರುದತ್, ಮೇಲನಹಳ್ಳಿ ಮಂಜಣ್ಣ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.