ಜಮಖಂಡಿ: ಲಕ್ಕನ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ

| Published : Aug 17 2024, 12:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿನಗರದ ಹೃದಯ ಭಾಗದಲ್ಲಿರುವ ಲಕ್ಕನ ಕೆರೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ ಘಟನೆ ನಡೆದಿದೆ. ಮಧ್ಯಾಹ್ನ ಕೆರೆಯ ಹೊರಭಾಗಕ್ಕೆ ಮೊಸಳೆ ಬಂದಿರುವುದನ್ನು ನೋಡಿದ ಜನರು ಗಾಬರಿಯಾಗಿದ್ದು, ಬಳಿಕ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ಹೃದಯ ಭಾಗದಲ್ಲಿರುವ ಲಕ್ಕನ ಕೆರೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ ಘಟನೆ ನಡೆದಿದೆ. ಮಧ್ಯಾಹ್ನ ಕೆರೆಯ ಹೊರಭಾಗಕ್ಕೆ ಮೊಸಳೆ ಬಂದಿರುವುದನ್ನು ನೋಡಿದ ಜನರು ಗಾಬರಿಯಾಗಿದ್ದು, ಬಳಿಕ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದ ಹೊಕ್ಕಳಬಾವಿ, ಮಾರುಕಟ್ಟೆ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಬಟ್ಟೆ ತೊಳೆಯಲು ಇದೇ ಕೆರೆಗೆ ಹೋಗುತ್ತಾರೆ. ಹೀಗಾಗಿ, ಮೊಸಳೆ ಕಾಣಿಸಿಕೊಂಡಿದ್ದು ಜನರಲ್ಲಿ ಭಯ ಮೂಡಿಸಿದೆ. ಮೊಸಳೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದು, ಬಳಿಕ ಮೊಸಳೆ ಕಾಣಿಸಿಕೊಂಡಿಲ್ಲ. ಸುರಕ್ಷತೆ ದೃಷ್ಟಿಯಿಂದ ಕರೆಗೆ ಜನರು ಹೋಗುವುದನ್ನು ನಿರ್ಬಂಧಿಸಲಾಗಿದೆ. ಮೊಸಳೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಕಳಿಸಿಕೊಡುವ ತಯಾರಿಯನ್ನು ಸಿಬ್ಬಂದಿ ನಡೆಸಿದ್ದಾರೆ.