ಪಾಂಡವಪುರ:
ಪಟ್ಟಣದಲ್ಲಿ ಮೇ 7ರಂದು ನಡೆಯಲಿರುವ ಜನರೊಂದಿಗೆ ಜನತಾದಳ ಹಾಗೂ ಜೆಡಿಎಸ್ ಪಕ್ಷದ 25ನೇ ವರ್ಷದ ಬೆಳ್ಳಿಹಬ್ಬದ ಕಾರ್ಯಕ್ರಮ ಹಿನ್ನೆಲೆ ಯುವನಾಯಕ ಸಿ.ಪಿ.ಶಿವರಾಜ್ ಅವರು ತಾಲೂಕಿನ ಕನಗನಮರಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು.ಗ್ರಾಮದ ಶ್ರೀಅಂಕನಾಥೇಶ್ವರ ದೇವಸ್ಥಾನದ ಬಳಿ ಸಭೆ ನಡೆಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪುತ್ರ ಸಿ.ಪಿ.ಶಿವರಾಜು ಪಟ್ಟಣದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಜನರೊಂದಿಗೆ ಜನತಾದಳ ಹಾಗೂ ಜೆಡಿಎಸ್ ಪಕ್ಷದ 25ನೇ ವರ್ಷದ ಬೆಳ್ಳಿ ಹಬ್ಬದ ಕಾರ್ಯಕ್ರಮಕ್ಕೆ ಪಾಂಡವ ಕ್ರೀಡಾಂಗಣದ ಮುಂಭಾಗ ಬೃಹತ್ ವೇದಿಕೆ ನಿರ್ಮಿಸಲಾಗಿದೆ ಎಂದರು.ಕಾರ್ಯಕ್ರಮದ ಅಂಗವಾಗಿ ಅಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಮಂಡ್ಯ ಸರ್ಕಲ್‌ನಿಂದ ತೆರದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ನಡೆಸುವ ಮೂಲಕ ವೇದಿಕೆಗೆ ಕರೆ ತರಲಾಗುವುದು, ಬಿಸಿಲು ಜೋರಾಗಿರುವುದರಿಂದ ಬೆಳಗ್ಗೆ ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭಿಸಿ ಬೇಗನೆ ಮುಕ್ತಾಯ ಮಾಡಲಾಗುವುದು ಎಂದರು.
ಇದೇ ವೇಳೆ ಎಲ್ಲಾ ಮುಖಂಡರು ಯುವನಾಯಕ ಸಿ.ಪಿ.ಶಿವರಾಜು ಹಾಗೂ ಚಿಕ್ಕಾಡೆ ಚೇತನ್ ಅವರನ್ನು ಗ್ರಾಮಸ್ಥರು ಅಭಿನಂಧಿಸಿದರು. ಸಭೆಯಲ್ಲಿ ಕನಗನಮರಡಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.ಕೊಡೆ ವಿತರಿಸಿ ಮಾನವೀಯತೆ ಮೆರೆದ ಡಾ.ರಾಘವೇಂದ್ರ
ಶ್ರೀರಂಗಪಟ್ಟಣ:ಪಟ್ಟಣದ ರಸ್ತೆ ಬದಿ ವ್ಯಾಪಾರಿಗಳು, ಬಿಸಿಲಿನಲ್ಲಿ ನಿಂತು ಕೆಲಸ ಮಾಡುವವರ ಹಾಗೂ ನಿರಾಶ್ರಿತರು ಬಿಸಿಲಿನಿಂದ ರಕ್ಷಣೆ ಪಡೆಯುವ ಸಲುವಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಶೇಷಾದ್ರಿಪುರಂ ಇಂಜಿನಿಯರಿಂಗ್ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಡಾ.ರಾಘವೇಂದ್ರ ಕೊಡೆ ವಿತರಿಸಿ ಮಾನವೀಯತೆ ಮೆರೆದರು.
ಬಳಿಕ ಡಾ. ರಾಘವೇಂದ್ರ ಮಾತನಾಡಿ, ರಸ್ತೆ ಬದಿ ವ್ಯಾಪಾರಿಗಳು, ಸಂಚಾರಿ ಪೊಲೀಸರು ಮತ್ತು ಕಾರ್ಮಿಕರು ಬಿಸಿಲನ್ನು ಲೆಕ್ಕಿಸದ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರು ಕಾಲಕ್ರಮೇಣ ಶಾಖದ ಒತ್ತಡ, ಬಿಸಿಲಿನ ಹೊಡೆತದ ಅಪಾಯಗಳನ್ನು ಎದುರಿಸಲಿದ್ದಾರೆ. ಹಾಗಾಗಿ ಅವರ ಆರೋಗ್ಯ ರಕ್ಷಿಸಲು, ಬೇಸಿಗೆಯ ಸುಡುವ ಬಿಸಿಲಿನಲ್ಲಿ ನೆರಳು ಅತ್ಯಗತ್ಯ ಎಂದು ಅರಿತು ಅವರಿಗೆ ಕೊಡೆ ವಿತರಿಸಲಾಯಿತು ಎಂದರು.ಈ ವೇಳೆ ಗುರುಪ್ರಸಾದ್, ವಿಹಾನ್, ಆಧ್ಯಾನ್ ಇದ್ದರು.